ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿದ್ದ ಯುವಕ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ಎಸ್ ಆರ್ ಎಸ್ ಸರ್ಕಲ್ ಬಳಿ ನಡೆದಿದೆ..
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇದುತ್ತಿದ್ದ ಯುವಕನನ್ನ ಹಿಡಿಯಲು ಪೊಲೀಸರು ಅಟ್ಟಾಡಿಸಿದಾಗ ಈ ಘಟನೆ ನಡೆದಿದೆ.. ರವಿ ಮೃತಪಟ್ಟ ಯುವಕನಾಗಿದ್ದಾನೆ..
ಎಸ್ ಆರ್ ಎಸ್ ಸರ್ಕಲ್ ಬಳಿ ಗಾಂಜಾ ಸೇದುತ್ತಿದ್ದ ಮೂವರು ಯುವಕರ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಪೀಣ್ಯಾ ಪೊಲೀಸರು ಬಂದಿದ್ದಾರೆ..
ಯುವಕರು ಪೊಲೀಸರನ್ನ ನೋಡಿ ಓಡಲು ಶುರು ಮಾಡಿದ್ದಾರೆ.. ಈ ವೇಳೆ ರವಿ ಎಂಬುವ ಜಯಮ್ಮ ಬ್ಯುಲ್ಡಿಂಗ್ ಹತ್ತಿದ್ದು ಅಲ್ಲಿಯೇ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ..
ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿ ಸಾವನಪ್ಪಿದ್ದಾನೆ.. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ..








