Bengaluru : ಮನೆ ಕಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಬೆಂಗಳೂರು : ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನ ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ..
ಇವರು ಕಳ್ಳತನ ಮಾಡಿದ ಪಾಪ ತೀರಲಿ ಅಂತ ದೇವಸ್ಥಾನಕ್ಕೆ ತೆರಳಿ ಸೇವೆ ಸಲ್ಲಿಸುತಿದ್ದರು ಎನ್ನಲಾಗಿದೆ.
ಈ ಹಿಂದೆಯೇ ಎಲ್ಲರೂ ಜೈಲು ಸೇರಿದ್ದರು.. ಅಲ್ಲಿ ಜೈಲಿನಲ್ಲಿ ಸ್ನೇಹಿತರಾಗಿ ಹೊರಬಂದು ಗ್ಯಾಂಗ್ ಕಟ್ಟುಕೊಂಡು ಮತ್ತೆ ಕಳ್ಳತನಕ್ಕೆ ಇಳಿದಿದ್ದರು..
ಮೂರು ವರ್ಷದಲ್ಲಿ 14 ಮನೆಗಳ್ಳತನವೆಸಗಿದ್ದಾರೆ.. ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ಧಾರೆ.. ಕರಾಟೆ ಸೀನಾ, ಕೊಕ್ರೆ ಸತೀಶ ಹಾಗೂ ತೇಜಸ್ ಬಂಧಿತ ಆರೋಪಿಗಳಾಗಿದ್ಧಾರೆ.
ಬಂಧಿತರಿಂದ 1.2 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಬೀಗ ಹಾಕಿದ್ದ ಮನೆಗಳನ್ನೇ ಈ ಖದೀಮರು ಟಾರ್ಗೆಟ್ ಮಾಡುತಿದ್ದರು..
ಬಳಿಕ ಅಕ್ಕಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಉಳಿದುಕೊಂಡು ವಾಚ್ ಮಾಡುತ್ತಾ ಕತ್ತಲಾದ ಬಳಿಕ ಎಂಟ್ರಿ ಕೊಟ್ಟು ಮನೆ ದೋಚಿ ಎಸ್ಕೇಪ್ ಆಗುತಿದ್ದರು..









