Bengaluru : ಮೃತಪಟ್ಟಿರುವುದು ಅರಿವಿಲ್ಲದೇ, ತಾಯಿಯ ಶವದ ಜೊತೆ ಎರಡು ದಿನ ಕಳೆದ ಮಗ…
ತನ್ನ ತಾಯಿ ಮೃತಪಟ್ಟಿದ್ದಾಳೆ ಎಂಬುದರ ಅರಿವೇ ಇಲ್ಲದ 11 ವರ್ಷದ ಮಗ ಎರಡು ದಿನಗಳ ಕಾಲ ಶವದ ಜೊತೆಯೇ ಕಾಲ ಕಳೆದಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಗಂಗಾ ನಗರದಲ್ಲಿ ಈ ಘಟನೆ ನಡಿದಿದ್ದು, ಮನೆಯಿಂದ ದುರ್ವಾಸನೆ ಬಂದ ಬಳಿಕವಷ್ಟೆ ನೆರೆಹೊರೆಯವರಿಗೆ ವಿಷಯ ಗಮನಕ್ಕೆ ಬಂದಿದೆ. ಇಲ್ಲಿನ ಸರ್ಕಾರಿ ಶಾಲೆಯ ಬಳಿ ಅಣ್ಣಮ್ಮ ಎಂಬುವವರು ವಾಸವಾಗಿದ್ದರು. ಮಾತು ಬಾರದು ಇವರು ಕೂಲಿ ಕೆಲಸ ಮಾಡಿ ಮಗನನ್ನ ಸಾಕುತ್ತಿದ್ದರು. ಇವರ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು.
ಎರಡು ದಿನಗಳ ಹಿಂದೆ ಅಣ್ಣಮ್ಮ ಮಲಗಿದ ರೀತಿಯಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೇ ಇದು ಆಕೆಯ 11 ವರ್ಷದ ಮಗನ ಗಮನಕ್ಕೆ ಬಂದಿಲ್ಲ. ತಾಯಿ ಮಲಗಿದ್ದಾಳೆ ಎಂದು ಬೆಳಿಗ್ಗೆ ಎಂದು ಆಟವಾಡಲು ಹೋಗಿದ್ದಾನೆ. ಹಸಿವಾದಾಗ ಸಂಬಂಧಿಕರ ಮನೆಯಲ್ಲಿ ಊಟ ಮಾಡಿದ್ದಾನೆ ಎನ್ನಲಾಗಿದೆ.
ಘಟನೆ ನಡೆದು ಎರಡು ದಿನದ ನಂತರ ಮನೆಯಿಂದ ದುರ್ವಾಸನೆ ಹೊರಬಂದ ಬಳಿಕೆ ನೆರೆಮನೆಯವರು ಹೋಗಿ ನೋಡಿದಾಗ 40 ವರ್ಷದ ಅಣ್ಣಮ್ಮ ಸಾವನ್ನಪ್ಪಿರುವುದು ತಿಳಿದು ಬಂದಿದೆ ನಂತರ ಪೊಲೀಸರಿಗೆ ವಿಷಯವನ್ನ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮೇಲ್ನೋಟಕ್ಕೆ ಇದೊಂದು ಸಹಜ ಸಾವು ಎಂದು ಹೇಳಿದ್ದಾರೆ.
Bengaluru: Son spent two days with his mother’s body without knowing that she was dead…