Bengaluru Tech summit : ದೇಶದಲ್ಲಿ ‘ಒಂದೇ ಆರೋಗ್ಯ’
ಶೀಘ್ರದಲ್ಲೇ ದೇಶದಲ್ಲಿ ಪಶು ಸಂಗೋಪನೆ, ವನ್ಯಜೀವಿ ಮತ್ತು ಮನುಷ್ಯರನ್ನು ಒಳಗೊಳ್ಳುವ ‘ ಒಂದು ಆರೋಗ್ಯ’ ಯೋಜನೆ ದೇಶದಲ್ಲಿ ಜಾರಿಯಾಗಲಿದೆ.
ಕೋವಿಡ್ ಸಾಂಕ್ರಾಮಿಕ ಕಾಯಿಲೆ ಬಳಿಕ, ಇಂತಹ ಯೋಜನೆಯ ಅಗತ್ಯತೆಯನ್ನು ಕೇಂದ್ರ ಸರ್ಕಾರ ಮನಗಂಡಿದೆ. ಪ್ರಧಾನಮಂತ್ರಿ ಅವರ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಮಂಡಳಿ ಈ ಬಗ್ಗೆ ಶಿಫಾರಸ್ಸು ಮಾಡಿದ್ದು, ವಿವಿಧ ರೀತಿಯ ರೋಗಗಳ ಮೇಲೆ ತಂತ್ರಜ್ಞಾನಗಳ ಮೂಲಕ ನಿಗಾವಹಿಸಲು ಅನುಕೂಲವಾಗಲಿದೆ ಎಂದು ಪ್ರತಿಪಾದಿಸಲಾಗಿದೆ.







