Bengaluru : K R ಮಾರ್ಕೆಟ್ ಬಳಿ ಹಣದ ಮಳೆ ಸುರಿಸಿದ ವ್ಯಕ್ತಿ – ಮುಗಿಬಿದ್ದ ವ್ಯಕ್ತಿ…
ಕೆ ಆರ್ ಮಾರ್ಕೇಟ್ ಪ್ಲೈ ಓವರ್ ನಲ್ಲಿ ವ್ಯಕ್ತಿಯೊಬ್ಬ ಅಕ್ಷರಶಃ ಹಣದ ಮಳೆಯನ್ನೇ ಸುರಿಸಿದ್ದಾನೆ. 100 50 10 ರುಪಾಯಿಗಳ ನೋಟನ್ನ ಪ್ಲೈ ಓವರ್ ಮೇಲಿಂದ ತೂರುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಈ ವ್ಯಕ್ತಿ ಹಣ ಎಸೆಯುತ್ತಿದ್ದಂತೆ ಫ್ಲೈ ಓವರ್ ಕೆಳಗಡೆ ಇದ್ದ ಜನರು ತಾಮುಂದು ನಾ ಮುಂದು ಎನ್ನುವಂತೆ ಜನ ಹಣ ಬಾಚಿಕೊಳ್ಳಲು ಮುಂದಾಗಿದ್ದಾರೆ. ಕೆಲವರು ಹಣ ನಮಗೆ ಕೊಡಿ ಎಂದು ಕೇಳಿದರೂ ಈತ ಯಾರ ಕೈಗೂ ಕೊಡದೇ ಪ್ಲೈ ಓವರ್ ಮೇಲಿನಿಂದ ಕೆಳಗೆ ಎಸೆದಿದ್ದಾನೆ.
ಫ್ಲೈ ಓವರ್ ಮೇಲೆ ನಿಂತು ನೋಟು ಎರಚಿದ ವ್ಯಕ್ತಿ ಅರುಣ್ ಎಂದು ಗರುತಿಸಲಾಗಿದೆ. ಸೂಟ್ ಧರಿಸಿಕೊಂಡು ಮತ್ತು ಕುತ್ತಿಗೆ ದೊಡ್ಡದಾದ ಗಡಿಯಾರವನ್ನ ನೇತು ಹಾಕಿಕೊಂಡು ಬಂದು ಹಣದ ಮಳೆಯನ್ನೇ ಸುರಿಸಿದ್ದಾನೆ.
ಅರುಣ್ ಕಬಡ್ಡಿ ಆಟಗಾರ ನಾಗಿದ್ದು ಈವೆಂಟ್ ಮ್ಯಾನೇಜರ್ ಆಗಿದ್ದವನು. ಅರುಣ್ ಬೆಂಗಳೂರಿನ ನಾಗರಭಾವಿಯಲ್ಲಿ ವಿ.9 ಈವೆಂಟ್ ಕಂಪನಿಯನ್ನ ಸ್ಥಾಪಿಸಿದ್ದಾರೆ.
ಏಕಾಏಕಿ ವ್ಯಕ್ತಿ ಹಣ ಎಸೆದ ಪರಿಣಾಮ ಸ್ಥಳದಲ್ಲಿ ಕ್ಷಣ ಕಾಲ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು. ಆದರೆ ಕೂಡಲೇ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಜನರನ್ನು ಸ್ಥಳದಿಂದ ಕಳುಹಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವ್ಯಕ್ತಿಯ ಕೃತ್ಯಕ್ಕೆ ಕಾರಣ ಹುಡುಕುತ್ತಿದ್ದಾರೆ.
Bengaluru : The man who showered money near K R Market –