ಲಂಚ ಪಡೆಯುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದ ಟ್ರಾಫಿಕ್ ಇನ್ಸ್ಪೆಕ್ಟರ್
ಬೆಂಗಳೂರು: 20 ಸಾವಿರ ಲಂಚ ಕೇಳಿದ ಆರೋಪದಲ್ಲಿ ಬೆಂಗಳೂರಿನ ಚಿಕ್ಕಜಾಲ ಟ್ರಾಫಿಕ್ ಇನ್ಸ್ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ.
ಗ್ಯಾಸ್ ಕಂಪನಿಯ ಪೈಪ್ಲೈನ್ ಅಗೆಯಲು ಅನುಮತಿ ನೀಡುವ ವಿಚಾರಕ್ಕೆ ಟ್ರಾಫಿಕ್ ಇನ್ಸ್ಪೆಕ್ಟರ್ ಹಂಸವೇಣಿ 20 ಸಾವಿರ ಲಂಚ ಕೇಳಿದ್ದರು. ಈ ಸಂಬಂಧ ಪೈಪ್ ಲೈನ್ ನವರು ಎಸಿಬಿಗೆ ದೂರು ನೀಡಿದ್ದರು.
ಕಳೆದ ವರ್ಷದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಹಂಸವೇಣಿ, ಕಳೆದ ಕೆಲವು ದಿನಗಳಿಂದ ರಸ್ತೆ ಅಗೆಯಲು ಅನುಮತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಹಣದ ಸಮೇತ ಇನ್ಸ್ಪೆಕ್ಟರ್ ಹಂಸವೇಣಿ ಸಿಕ್ಕಿಬಿದ್ದಾರೆ.
ಕೇಂದ್ರ ಸರ್ಕಾರದ ಗೇಲ್ ಗ್ಯಾಸ್ ಕಂಪನಿಯ ಪೈಪ್ಲೈನ್ ಅಗೆಯುವ ವಿಚಾರಕ್ಕೆ ಅನುಮತಿ ನೀಡಲು ಚಿಕ್ಕಜಾಲ ಟ್ರಾಫಿಕ್ ಇನ್ಸ್ಪೆಕ್ಟರ್ ಹಂಸವೇಣಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.