ಬೆಂಗಳೂರು : ಕೊರೊನಾ ಎಂದ್ರೆ ಜನರು ಕನಸ್ಸಲ್ಲೂ ಬೆಚ್ಚಿಬೀಳುತ್ತಿದ್ದಾರೆ. ಕೊರೊನಾ ಭಯಕ್ಕೆ ಅದೆಷ್ಟೋ ಜನ ಮೆಟ್ಟಿಲು ಹತ್ತುವುದಕ್ಕೂ ಹಿಂಜರಿಯುತ್ತಿದ್ದಾರೆ. ಆದ್ರೆ ಬೆಂಗಳೂರಿನ ಶತಾಯುಷಿ ಅಜ್ಜಿ ಕೇವಲ ಒಂಭತ್ತೇ ದಿನಗಳಲ್ಲಿ ಕೊರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಹೌದು..! ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ, ಹೆಮ್ಮಾರಿ ಸೋಂಕಿನಿಂದ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. ‘ಮಾರ್ಸಿಲಿನ್ ಸಾಲ್ಡಾನಾ’ ಎಂಬ 100ನೇ ವಸಂತಕ್ಕೆ ಕಾಲಿಟ್ಟಿದ್ದ ವೃದ್ಧೆಗೆ ಹುಟ್ಟುಹಬ್ಬದಂದೆ ಕೊರೊನಾ ಕಾಡಿತ್ತು. ಸೋಂಕು ದೃಢಪಟ್ಟ ಹಿನ್ನೆಲೆ ಅಜ್ಜಿವನ್ನು ಜೂನ್ 18ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ವೃದ್ಧೆಯ ಪುತ್ರ – ಸೊಸೆ – ಮೊಮ್ಮಕ್ಕಳಿಗೆ ಸೋಂಕು ತಗುಲಿತ್ತು. ಇತ್ತ ವಿಕ್ಟೋರಿಯಾ ಟ್ರಾಮ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ, ಕೇವಲ 9 ದಿನಕ್ಕೆ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. ವೃದ್ಧೆ ಗುಣಮುಖ ಆಗಿರುವುದು ವೈದ್ಯಲೋಕಕ್ಕೆ ಸಂತಸ ತಂದಿದೆ.