Bengaluru : ಶುಭೋದಯ ಪ್ರಿಂಟರ್ಸ್ ಪಾಲೀಕ ಎಂ. ಗಿರೀಶ್ ನಿಧನ
ಪುಸ್ತಕ ಪ್ರಕಾಶಕ ಹಾಗೂ ಶುಭೋದಯ ಪ್ರಿಂಟರ್ಸ್ ಮಾಲೀಕ ಎಂ. ಗಿರೀಶ್ (50) ಅವರು ರಸ್ತೆ ಅಪಘಾತದಿಂದ ನಿಧನರಾಗಿದ್ದಾರೆ. ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಎಂ. ಗಿರೀಶ್ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ.
ಬನಶಂಕರಿಯ 6ನೇ ಹಂತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮುಂಬದಿಯಿಂದ ಬಂದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು.. ಘಟನೆಯಿಂದ ತೀವ್ರ ಗಾಯಗೊಂಡಿದ್ದ ಗಿರೀಶ್ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿತ್ತು.. ಆದ್ರೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಇವರು ತಮ್ಮ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.
ಸ್ನೇಹಜೀವಿಯಾಗಿ, ಸದಾ ನಗುಮುಖದಲ್ಲೇ ಇರುತ್ತಿದ್ದ ಇವರು ಸಂಜೆವಾಣಿ , ಉದಯವಾಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.. ನಂತರ ಸ್ವಂತ ಮುದ್ರಣ ಸಂಸ್ಥೆ ಪ್ರಾರಂಭಿಸಿದ್ದರು..
ಇವರು ತೀರಾ ಮೃದು ವ್ಯಕ್ತಿತ್ವದವರಾಗಿದ್ದರು. ಬೆಂಗಳೂರಿನದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಶುಭೋದಯ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ವರು ಹಲವರಿಗೆ ಉದ್ಯೋಗದಾತರಾಗಿದ್ದರು.. ಪ್ರಿಂಟಿಂಗ್ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು..