Punjab : ಯಾವ ಧರ್ಮದ ಬಗ್ಗೆ ಅಗೌರವ ತೋರಿದ್ರೂ ಸಹಿಸುವುದಿಲ್ಲ : ಭಗವಂತ್ ಮಾನ್
ಪ್ರಸ್ತುತ ಆಮ್ ಆದ್ಮಿ ಪಕ್ಷ ತನ್ನ ಪಕ್ಷದ ಉತ್ತಮ ಅಜೆಂಡಾದಿಂದಾಗಿ ಭಾರತದ ಭರವಸೆಯ ಬೆಳಕಾಗಿ ಕಾಣಿಸುತ್ತಿದೆ ಎಂದು ಹಲವರು ಅಭಿಪ್ರಾಯ ಹೊರರಹಾಕುತ್ತಿದ್ಧಾರೆ.. ಇದಕ್ಕೆ ಪುಷ್ಠಿ ನೀಡುವಂತೆ ಪಂಜಾಬ್ ನಲ್ಲಿ ಗೆದ್ದಿರುವ AAP ಪಕ್ಷದ ನೂತನ ಪಂಜಾಬ್ ಮುಖ್ಯಮಂತ್ರಿಗಳಾದ ಭಗವಂತ್ ಮಾನ್ ಅವರು ಯಾವುದೇ ಧರ್ಮದ ಬಗ್ಗೆ ಅಗೌರವವನ್ನು ತೋರಿದರೆ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಹೋಶಿಯಾರ್‍ಪುರದಲ್ಲಿ ನಡೆದ ಗೋವುಗಳ ಹತ್ಯೆಯನ್ನು ಖಂಡಿಸಿದ್ದಾರೆ.
ಹೋಶಿಯಾರ್‍ಪುರದಿಂದ ಸುಮಾರು 36 ಕಿಮೀ ದೂರದಲ್ಲಿರುವ ಜಾನ್ಸ್ ಹಳ್ಳಿಯ ಸಮೀಪದಲ್ಲಿರುವ ರೈಲ್ವೆ ಹಳಿ ಬಳಿ ಶನಿವಾರ ಬೆಳಗ್ಗೆ ಸುಮಾರು 19 ಹಸುಗಳ ಮೃತದೇಹಗಳು ಪತ್ತೆಯಾಗಿವೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಭಗವಂತ್ ಮಾನ್, ಯಾವುದೇ ಬೆಲೆ ತೆತ್ತಾದರೂ ಪಂಜಾಬ್‍ನಲ್ಲಿ ಶಾಂತಿ ಮತ್ತು ಸಹೋದರತ್ವ ಹದಗೆಡಲು ನಾವು ಬಿಡುವುದಿಲ್ಲ. ಪಂಜಾಬ್‍ನಲ್ಲಿ ಶಾಂತಿ ಕದಡುವ ಸಮಾಜ ವಿರೋಧಿಗಳ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ರಾಜ್ಯದಲ್ಲಿ ಶಾಂತಿ ಮತ್ತು ಭ್ರಾತೃತ್ವವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಮುಖ್ತಿಯಾರ್ ರೈ ಅವರು, ಜಾನ್ಸ್ ಹಳ್ಳಿಯ ಸಮೀಪದಲ್ಲಿ ರೈಲ್ವೇ ಹಳಿ ಬಳಿ ಕೈಬಿಟ್ಟ ಸ್ಥಳದಲ್ಲಿ ತಲೆ ಇಲ್ಲದ ಕನಿಷ್ಠ 19 ಹಸುಗಳ ಶವಗಳು ಪತ್ತೆಯಾಗಿದ್ದು, ಜೊತೆಗೆ ಆಲೂಗಡ್ಡೆ ತುಂಬಿದ ಸುಮಾರು 12 ಗೋಣಿ ಚೀಲಗಳು ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.