Bhagwant Mann Marriage – ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಪಂಜಾಬ್ ಮುಖ್ಯಮಂತ್ರಿ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಚಂಡೀಗಢದ ತಮ್ಮ ನಿವಾಸದಲ್ಲಿ ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ದಾಂಪತ್ಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 48 ವರ್ಷದ ಭಗವಂತ್ ಮಾನ್ ವೃತ್ತಿಯಲ್ಲಿ ವೈದ್ಯರಾಗಿರುವ ಗುರುಪ್ರೀತ್ ಕೌರ್ ಅವರನ್ನು ವರಿಸಲಿದ್ದಾರೆ.
ಭಗವಂತ್ ಮಾನ್ ವಿಚ್ಛೇದನವಾದ 6 ವರ್ಷಗಳ ನಂತರ ಎರಡನೇ ಮದುವೆಯಾಗುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ. ಸಿಎಂ ತಮ್ಮ ಅಧಿಕೃತ ನಿವಾಸದಲ್ಲಿ ವಿವಾಹವಾಗಲಿದ್ದು, ಸಮಾರಂಭದಲ್ಲಿ ಆಪ್ತರು ಹಾಗೂ ಸಂಬಂಧಿಕರು ಮಾತ್ರ ಭಾಗವಹಿಸಲಿದ್ದಾರೆ.
ಭಗವಂತ್ ಮನ್ ಆರು ವರ್ಷಗಳ ಹಿಂದೆ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ ರಿಂದ ವಿಚ್ಛೇದನ ಪಡೆದಿದ್ದರು. ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಾನ್ ಮಕ್ಕಳಿಬ್ಬರೂ ತಂದೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದರು.
ಭಗವಂತ್ ಮಾನ್ ಮದುವೆಯಾಗುತ್ತಿರುವ ಮಹಿಳೆ ಡಾ. ಗುರ್ಪ್ರೀತ್ ಕೌರ್ ಅವರನ್ನ ಭಗವಂತ್ ಮಾನ್ ಅವರ ಸಹೋದರಿ ಮತ್ತು ತಾಯಿ, ಮಾನ್ ಅವರಿಗಾಗಿ ಗುರ್ಪ್ರೀತ್ ಅವರನ್ನು ಆಯ್ಕೆ ಮಾಡಿದ್ದಾರೆ. ತಮ್ಮ ಆಯ್ಕೆಯ ವಧುವನ್ನೇ ಮುಖ್ಯಮಂತ್ರಿ ವರಿಸಬೇಕು ಎನ್ನುವುದು ಅವರ ಬಯಕೆಯಾಗಿತ್ತು.
ಗುರ್ಪ್ರೀತ್ ಅವರು ಹರ್ಯಾಣದ ಹಿಸಾರ್ ಜಿಲ್ಲೆಯವರು. ಭಗವಂತ್ ಮಾನ್ ಮತ್ತು ಕೌರ್ ಅವರು ಕಳೆದ ಒಂದೂವರೆ ವರ್ಷಗಳಿಂದ ಪರಿಚಿತರು ಎನ್ನಲಾಗಿದೆ. ಮಾನ್ ಅವರಿಗಿಂತ ಗುರ್ಪ್ರೀತ್ ಅವರು 16 ವರ್ಷ ಚಿಕ್ಕವರು.