ಲತಾ ಮಂಗೇಶ್ಕರ್ ಹಾಡು ಹಾಡಿ ಭಾಯಿಜಾನ್ ಭಾವುಕ…..
ಗಾನ ಕೋಗಿಲೆ ಲತಾ ಮಂಗೇಶ್ಕರ್ ನಮ್ಮೊಂದಿಗೆ ಇನ್ನಿಲ್ಲ. ಫೆಬ್ರವರಿ 6 ರಂದು ನಮ್ಮನ್ನೆಲ್ಲ ಅಗಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಆದರೆ, ‘ಮೆಲೋಡಿ ಕ್ವೀನ್’ ಅವರ ಧ್ವನಿ, ಸ್ಮರಣೀಯ ಹಾಡುಗಳು ಮತ್ತು ಅವುಗಳಿಗೆ ಸಂಬಂಧಿಸಿದ ನೆನಪುಗಳು ಯಾವಾಗಲೂ ನಮ್ಮೊಂದಿಗೆ ಶಾಶ್ವತವಾಗಿರುತ್ತವೆ.
ಇದೀಗ ಸಲ್ಮಾನ್ ಖಾನ್ ಅವರು ಲತಾ ದೀದಿ ಅವರ ನೆನಪಿಗಾಗಿ ಹಾಡು ಹಾಡುತ್ತಿರುವ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಸಲ್ಮಾನ್ ಭಾವುಕವಾದ ಕ್ಯಾಪಶ್ನ್ ನೀಡಿದ್ದಾರೆ.
Superstar #SalmanKhan pays tribute to the late great #LataMangeshkar. ❤️ pic.twitter.com/JjXLcnNvyi
— Filmfare (@filmfare) February 13, 2022
ಲತಾ ಜಿ ಅವರ ನೆನಪಿಗಾಗಿ ಸಲ್ಮಾನ್ ‘ಲಗಾ ಜಾ ಗಲೇ’ ಎಂಬ ಹಾಡು ಹಾಡಿದ್ದಾರೆ “ನಾ ಕೋಯಿ ಹೈ, ನೋ ಕೋಯಿ ಥಾ ಮತ್ತು ನಿಮ್ಮಂತೆ ಯಾರೂ ಇರಲಾರರು ಲತಾ ಜಿ” ಎಂದು ಶೀರ್ಷಿಕೆ ನೀಡಿದ್ದಾರೆ. ಲತಾ ಜಿ ಅವರ ಸಾವಿನಿಂದ ಇಡೀ ಬಾಲಿವುಡ್ ಜಗತ್ತು ದುಃಖಕ್ಕೀಡಾಗಿದೆ. ಪ್ರತಿಯೊಬ್ಬರೂ ಲತಾ ದೀದಿಯನ್ನು ತಮ್ಮದೇ ಆದ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ.