BJP ಕಮಿಷನ್ ಸರ್ಕಾರದಲ್ಲಿ 80 ಲಕ್ಷ ಕೊಟ್ರೆ SI ಹುದ್ದೆ – ರಾಹುಲ್ ಗಾಂಧಿ..
ಆಡಳಿತರೂಢ ಬಿಜೆಪಿ ಸರ್ಕಾರವನ್ನ 40 % ಕಮಿಷನ್ ಸರ್ಕಾರ ಎಂದು ಕರೆಯುವ ಕಾಂಗ್ರೆಸ್ ಪಕ್ಷದ ಟೀಕೆ ಭಾರತ್ ಜೋಡೋ ಯಾತ್ರೆಯಲ್ಲಿ ಮುಂದುವರೆದಿದೆ.
40 ರಷ್ಟು ಕಮಿಷನ್ನಲ್ಲಿ ಕರ್ನಾಟಕ ಸರ್ಕಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧವಾಗಿದೆ ಎಂದು ಟೀಕಿಸಿದರು. ಭಾರತ್ ಜೊಡೋ ಯಾತ್ರೆ 1000 ಕಿ ಮೀ ಸವೆಸಿದ ಸಂಭ್ರಮದಲ್ಲಿ ಬಳ್ಳಾರಿಯಲ್ಲಿ ಶನಿವಾರ ನಡೆದ ಮೆಗಾ ರ್ಯಾಲಿಯಲ್ಲಿ ರಾಹುಲ್ ಮಾತನಾಡಿದರು…’
‘ಸಬ್ ಇನ್ಸ್ ಪೆಕ್ಟರ್ ಆಗಬೇಕಾದರೆ ರೂ.80 ಲಕ್ಷ ಕೊಟ್ಟರೆ ಆ ಹುದ್ದೆ ನಿಮ್ಮದೇ. ನಿಮ್ಮ ಬಳಿ ಹಣವಿದ್ದರೆ ಕರ್ನಾಟಕದಲ್ಲಿ ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನ ಪರ್ಯಂತ ನಿರುದ್ಯೋಗಿಯಾಗಿಯೇ ಇರಬೇಕಾಗುತ್ತದೆ ಎಂದರು. ಕರ್ನಾಟಕದಲ್ಲಿ 2.5 ಲಕ್ಷ ಸರ್ಕಾರಿ ಉದ್ಯೋಗಗಳು ಭರ್ತಿಯಾಗಿಲ್ಲ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. 1000 ಕಿ.ಮೀ ಪಯಣ ಪೂರೈಸಿದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಮೆಗಾ ರ್ಯಾಲಿ ಆಯೋಜಿಸಲಾಗಿತ್ತು. ಸೆಪ್ಟೆಂಬರ್ 30 ರಂದು ಕರ್ನಾಟಕ ಪ್ರವೇಶಿಸಿದ ಯಾತ್ರೆ 21 ದಿನಗಳಲ್ಲಿ 511 ಕಿಲೋಮೀಟರ್ ಕ್ರಮಿಸಲಿದ್ದು, ಅಕ್ಟೋಬರ್ 20 ರಂದು ಕರ್ನಾಟಕದಿಂದ ತೆರಳಲಿದೆ.
Bharat jodo yatra: 80 lakh crore SI post in BJP commission government – Rahul Gandhi..