Bidar | ಜಂಗಮರ ಬೇಡಿಕೆ ಈಡೇರದಿದ್ದರೆ ಮುಖ್ಯಮಂತ್ರಿಗಳಿಗೆ ಶಾಪ
ಬೀದರ್ : ಜಂಗಮರ ಬೇಡಿಕೆ ಈಡೇರದಿದ್ದರೆ ಮುಖ್ಯಮಂತ್ರಿಗಳಿಗೆ ಶಾಪ ತಟ್ಟುತ್ತದೆ ಎಂದು ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳು ರಾಕ್ಯ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಎದುರಿಗೆ ನಡೆಯುತ್ತಿರುವ 10ನೇ ದಿನದ ಸತ್ಯಾಗ್ರಹದಲ್ಲಿ ಜಂಗಮರು ತಲೆ ಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಂಗಮರ ತಾಳ್ಮೆ ಪರೀಕ್ಷೆ ಮಾಡಬಾರದು.
ಕೈ ಎತ್ತಿ ಆಶೀರ್ವಾದ ಮಾಡುವ ಸ್ವಾಮಿಗಳಿಂದ ಮುಖ್ಯಮಂತ್ರಿಗಳಿಗೆ ಶಾಪ ಹಾಕುವ ಸ್ಥಿತಿ ಬರಬಾರದು. ಜಂಗಮರು ತಲೆಬೋಳಿಸುವುದು ಎರಡು ಬಾರಿ ಮಾತ್ರ.

ಒಂದು ದೀಕ್ಷೆ ನೀಡುವಾಗ ಇನ್ನೊಂದು ಅಯ್ಯಾಚಾರ ಮಾಡುವಾಗ ಇದೀಗ ದರ್ಮದ ಹಕ್ಕಿಗಾಗಿ ತಲೆ ಬೋಳಿಸಿಕೊಳ್ಳುವ ಸ್ಥಿತಿ ಸರ್ಕಾರ ಮಾಡಿದೆ.
ಜಂಗಮ ಮುನಿದರೆ ಭಗವಂತ ಮುರಿದಂತೆ ಎಂಬುವುದು ಮುಖ್ಯಮಂತ್ರಿಗಳು ತಿಳಿದುಕೊಳ್ಳಬೇಕು.
ಮನುಷ್ಯ ಜೀವನಕ್ಕೆ ಮುಕ್ತಿ ದೊರೆಯಬೇಕಾದರೆ ಜಂಗಮರ ಪಾತ್ರ ಮುಖ್ಯವಾಗಿದ್ದು ಕೂಡಲೇ ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಬೇಡ ಜಂಗಮರ ಬೇಡಿಕೆಗಳು ಈಡೇರಿಸುವ ಗಮನಹರಿಸಬೇಕು.
ಇಲ್ಲವಾದರೆ ಜಂಗಮರ ಶಾಪ ಮುಖ್ಯಮಂತ್ರಿಗಳಿಗೆ ತಟ್ಟುತ್ತದೆ ಎಂದು ಖಾರವಾಗಿ ಹೇಳಿದರು.