ಪುರುಷರ ಉದಯೋನ್ಮುಖ ಏಷ್ಯಾಕಪ್ನ 12ನೇ ಪಂದ್ಯದಲ್ಲಿ ಭಾರತ ಎ ಹಾಗೂ ಪಾಕಿಸ್ತಾನ್ ಎ ತಂಡಗಳು ನಾಳೆ ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ಗ್ರೂಪ್-B ನಲ್ಲಿ ಅಗ್ರಸ್ಥಾನ ಪಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ಈ ಕದನದಲ್ಲಿ ಗೆಲ್ಲುವ ತಂಡ ಲೀಗ್ ಹಂತದಲ್ಲಿ ಗ್ರೂಪ್-ಬಿ ನಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಆದರೂ ಉಭಯ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯುವುದು ಖಚಿತವಾಗಿದೆ.
ಗ್ರೂಪ್-ಬಿನಲ್ಲಿರುವ ಯುಎಇ ಹಾಗೂ ನೇಪಾಳ ತಂಡಗಳು ಆಡಿರುವ 2 ಮ್ಯಾಚ್ನಲ್ಲೂ ಸೋಲನುಭವಿಸಿವೆ. ಆದರೆ, ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಎರಡೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲ ಹಾಗೂ ದ್ವಿತೀಯ ಸ್ಥಾನ ಅಲಂಕರಿಸಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಗೆದ್ದರೂ ಸೋತರೂ ಭಾರತ-ಪಾಕಿಸ್ತಾನ್ ತಂಡಗಳು ಸೆಮಿಫೈನಲ್ಗೆ ಎಂಟ್ರಿ ಕೊಡಲಿವೆ. ಭಾರತ A vs ಪಾಕಿಸ್ತಾನ A ನಡುವಣ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2:00 PM ಗಂಟೆಯಿಂದ ಆರಂಭವಾಗಲಿದೆ.