SIIMA 2022: ಅವಧಿ ಮೀರಿ ಪಾರ್ಟಿ ಮಾಡಿದ್ದ ಸೆಲೆಬ್ರಟಿಗಳು – FIR ದಾಖಲು…
SIIMA 2022 ಪಾರ್ಟಿ ಕೇಸ್
ಅವಧಿ ಮೀರಿ ಪಾರ್ಟಿ ಮಾಡಿದ್ದ ಸೆಲೆಬ್ರೆಟಿಗಳು
ಹೋಟೆಲ್ ಮತ್ತು ಆಯೋಜಕರ ವಿರುದ್ಧ FIR
ಮಧ್ಯರಾತ್ರಿ 3.30 ರ ವರೆಗೂ ನಡೆದಿದ್ದ ಪಾರ್ಟಿ
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದ್ದ ಸೈಮಾ ಅವಾರ್ಡ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ನಂತರ ಅದ್ದೂರಿ ಪಾರ್ಟಿ ಮಾಡಲಾಗಿದೆ. ಅವಧಿ ಮೀರಿ ತಡ ರಾತ್ರಿ ಪಾರ್ಟಿ ಮಾಡಿದ್ದಾಕ್ಕಾಗಿ ಹೋಟೆಲ್ ಮೇಲೆ FIR ದಾಖಲಾಗಿದೆ.
ಕರೋನಾ ನಂತರ ನಡೆದಿದ್ದ 10ನೇ ಅವಾರ್ಡ್ ಕಾರ್ಯಕ್ರವನ್ನ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಲಾಗಿತ್ತು. ಕನ್ನಡ ತೆಲುಗು ತಮಿಳು ಮಲಯಾಳಂ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ರೂ . ಪ್ರತಿಯೊಬ್ಬ ಸ್ಟಾರ್ ಟೀಮ್ ಗೂ ಹೋಟೆಲ್ ಜೆಡಬ್ಲ್ಯೂ ಮ್ಯಾರಿಯೇಟ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಇದೇ ಹೋಟೆಲ್ ನಲ್ಲಿ ಸಕ್ಸಸ್ ಪಾರ್ಟಿ ನಡೆದಿದೆ.
ಸೆಪ್ಟಂಬರ್ 12 ರಂದು ಸೈಮಾ ಪಾರ್ಟಿ ನಡೆದಿದ್ದು ಒಂದು ಗಂಟೆ ನಡೆಯಬೇಕಿದ್ದ ಸೈಮಾ ಪಾರ್ಟಿ ಮಧ್ಯರಾತ್ರಿ 3.30ರ ವರೆಗೂ ನಡೆದಿದೆ. ಹೀಗಾಗಿ FIR ದಾಖಲಾಗಿದೆ.
ಹೋಟೆಲ್‌ನ ಮ್ಯಾನೇಜರ್ ಮತ್ತು ಪಾರ್ಟಿ ಆರ್ಗನೈಸರ್ ಮೇಲೆ ಕೆಪಿ ಆಕ್ಟ್ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.