ಚುನಾವಣಾ ಹೊತ್ತಲ್ಲೇ ಚುನಾವಣಾ ಹೊತ್ತಲ್ಲೇ ಕಾಂಗ್ರೇಸ್ ಗೆ ಬಿಗ್ ಶಾಕ್ – ಪಕ್ಷ ತೊರೆದ ಅಶ್ವಿನ್ ಕುಮಾರ್ಕಾಂಗ್ರೇಸ್ ಗೆ ಬಿಗ್ ಶಾಕ್ – ಪಕ್ಷ ತೊರೆದ ಅಶ್ವಿನ್ ಕುಮಾರ್
ಪಂಜಾಬ್‌ನಲ್ಲಿ ಮತದಾನಕ್ಕೆ ಕೇವಲ 5 ದಿನಗಳಿರುವಾಗ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ. 46 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದ ಅಶ್ವಿನಿ ಶರ್ಮಾ ಕೂಡ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಅಶ್ವಿನಿ ಶರ್ಮಾ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಷ್ಠಾವಂತ ಎಂದು ಪರಿಗಣಿಸಲ್ಪಟ್ಟಿದ್ದರು. ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆಯನ್ನು ಕಳುಹಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಹಲವು ಹಿರಿಯ ನಾಯಕರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಇದರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಆರ್‌ಪಿಎನ್ ಸಿಂಗ್, ಸುಶ್ಮಿತಾ ದೇವ್, ಪ್ರಿಯಾಂಕಾ ಚತುರ್ವೇದಿ ಇದ್ದಾರೆ. ಈಗ ಅಶ್ವಿನಿ ಕುಮಾರ್ ಅವರು ಕಾಂಗ್ರೆಸ್‌ನಿಂದ ನಿರ್ಗಮಿಸಿರುವುದು ಹಳೆಯ ನಾಯಕರೂ ಪಕ್ಷದ ಬಗ್ಗೆ ಭ್ರಮನಿರಸನಗೊಳ್ಳುತ್ತಿದ್ದಾರೆ ಎಂಬುದನ್ನ ಸೂಚಿಸುತ್ತದೆ. ಇನ್ನಿಬ್ಬರು ದಿಗ್ಗಜರು, ಗೋವಾದ ಮಾಜಿ ಮುಖ್ಯಮಂತ್ರಿ ಲುಜಿನ್ಹೋ ಫಲೈರೊ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಇತ್ತೀಚೆಗೆ ಪಕ್ಷವನ್ನು ತೊರೆದಿದ್ದಾರೆ. Big Shock to Congress With Election Day Ashwin Kumar who left the party
ಕಾಂಗ್ರೆಸ್‌ಗೆ ಅಶ್ವಿನಿ ಕುಮಾರ್ ರಾಜೀನಾಮೆ ಕೂಡ ಅನಿರೀಕ್ಷಿತವಾಗಿತ್ತು. ಏಕೆಂದರೆ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕಟ್ಟಾ ನಿಷ್ಠರಾಗಿದ್ದರು ಮತ್ತು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. 2020ರ ಆಗಸ್ಟ್‌ನಲ್ಲಿ ಜಿ-23 ನಾಯಕರು ಪಕ್ಷದಲ್ಲಿ ಸಮಗ್ರ ಬದಲಾವಣೆಗೆ ಒತ್ತಾಯಿಸಿ ಪತ್ರ ಬರೆದಾಗ ಅವರು ಸೋನಿಯಾ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದರು.








