ಬಿಗ್ ಬಾಸ್ ಸ್ಪರ್ಧಿ ಮೋಟಿವೇಶನಲ್ ಸ್ಪೀಚರ್ ಬ್ರೋ ಗೌಡ ರಿಯಲ್ ಮಲ್ಟಿ ಟ್ಯಾಲೆಂಟೆಡ್..!

1 min read
Bro Gowda

ಬಿಗ್ ಬಾಸ್ ಸ್ಪರ್ಧಿ ಮೋಟಿವೇಶನಲ್ ಸ್ಪೀಚರ್ ಬ್ರೋ ಗೌಡ ರಿಯಲ್ ಮಲ್ಟಿ ಟ್ಯಾಲೆಂಟೆಡ್..!

ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ ಮನೆಗೆ 8ನೇ ಸ್ಪರ್ಧಿಯಾಗಿ ಕಾಲಿಟ್ಟ ಸೋಷಿಯಲ್ ಮೀಡಿಯಾ ಸ್ಟಾರ್ ಬ್ರೋ ಗೌಡ ಹಿನ್ನೆಲೆ ಏನು..? ಯಲ್ಲಿವರು…? ಬಿಗ್ ಬಾಸ್ ಗೆ ಬರುವ ಅವಕಾಶ ಸಿಕ್ಕಿದ್ಹೇಗೆ…?
ಬ್ರೋ ಗೌಡ ಅಲಿಯಾಸ್ ಶಮಂತ್… ಇವರು ಮಲ್ಟಿ ಟ್ಯಾಲೆಂಟೆಡ್ ಎನ್ನಬಹುದು. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ , ಯೂಟ್ಯೂಬರ್, ಯಂಗ್ ಸ್ಟರ್ಸ್ ಗಳಿಗೆ ಫಿಲಾಸಫರ್ ಎಂದ್ರೂ ತಪ್ಪಾಗೋದಿಲ್ಲ. ಯಾಕಂದ್ರೆ ಇವರ ಮೋಟಿವೇಶನಲ್ ಸ್ಪೀಚ್ ಗೆ ಮಾರುಹೋಗದವರಿಲ್ಲ.

ಬಿಗ್ ಬಾಸ್ ನಲ್ಲಿ ಪಂಚರಂಗಿ ನಟಿ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ..!

ಮೋಟಿವೇಶನಲ್ ಸ್ಪೀಚ್ ಗಳನ್ನ ನೀಡೋ ಮೂಲಕವೇ ಅಪಾರ ಅಭಿಮಾನಿಗಳನ್ನ ಸಂಪಾದಿಸಿರುವ ಬ್ರೋ ಗೌಡ ಅದ್ಭುತ ಗಾಯಕ ಕೂಡ ಹೌದು. ಜೊತೆಗೆ ಚಲನಚಿತ್ರ ರಂಗದಲ್ಲೂ ಸಕ್ರಿಯವಾಗಿರುವ ಬ್ರೋ ಗೌಡ ನಟನೆಯ ಜೊತೆಗೆ ಗಾಯನ ಹಾಗೂ ನಿರ್ದೇಶನದಲ್ಲೂ ಪ್ರತಿಭೆ ತೋರಿದ್ದಾರೆ. ಎಸ್ ಬ್ರೋ ಗೌಡ ನಿಜಕ್ಕೂ ಮಲ್ಟಿ ಟ್ಯಾಲೆಂಟೆಡ್ ಹುಡುಗ.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟ ಬೈಕ್ ರೇಸರ್ ಅರವಿಂದ್

ಎಸ್ ಬ್ರೋ ಗೌಡ ಮೂಲತಃ ಬೆಂಗಳೂರಿನವರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸದಾ ತಮ್ಮ ಮೋಟಿವೇಶನಲ್ ಸ್ಪೀಚ್ ಗಳ ಮೂಲಕ ಯುವಕರನ್ನ ಪ್ರೇರೇಪಿಸುತ್ತಾ ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ. ಅಲ್ಲದೇ ಸರಿಯಾಗಿ ನೋಡೋದಾದ್ರೆ ಈ ಬಾರಿ ಈ ಹುಡುಗ ಬಿಗ್ ಬಾಸ್ ನ ವಿನ್ನರ್ ಆಗುವ ಎಲ್ಲಾ ಲಕ್ಷಣಗಳು ಸಹ ಗೋಚರವಾಗ್ತಿದೆ.

ಬಿಗ್ ಬಾಸ್ ನಲ್ಲಿ ಮೋಡಿ ಮಾಡ್ತಾರಾ ಅಗ್ನಿಸಾಕ್ಷಿಯ ಚೆಂದುಳ್ಳಿ ಚೆಲುವೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd