ಬಿಗ್ ಬಾಸ್ ಗೆ ಬ್ರಹ್ಮಾಂಡವಾಗಿ ಎಂಟ್ರಿ ಕೊಟ್ಟ ಬ್ರಹ್ಮಗಂಟು ಗೀತಾ..!
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. 9ನೇ ಸ್ಪರ್ಧಿಯಾಗಿ ಕಿರುತೆರೆ ಮಂದಿಯ ಪೇರವೇಟ್ ನಮ್ಮ ಗುಂಡಮ್ಮ ಪಾದಾರ್ಪಣೆ ಮಾಡಿದ್ದಾರೆ. ಹೌದು ಕಿರುತೆರೆಯ ಖ್ಯಾತ ದಾರವಾಹಿ ಬ್ರಹ್ಮ ಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದಾರೆ, ಅಂದ್ಹಾಗೆ ಗೀತಾ ಬಾರತಿ ಭಟ್ ಬಿಗ್ ಬಾಸ್ ಗೆ ಬರುತ್ತಾರೆಂಬ ಗಾಸಿಪ್ ತುಂಬ ದಿನಗಳಿಂದಲೂ ಹರಿದಾಡ್ತಿತ್ತು. ಅದರಂತೆ ದೊಡ್ಮನೆ ಪ್ರವೇಶ ಮಾಡಿದ್ದೂ ಆಗಿದೆ.
ಬಿಗ್ ಬಾಸ್ ಸ್ಪರ್ಧಿ ಮೋಟಿವೇಶನಲ್ ಸ್ಪೀಚರ್ ಬ್ರೋ ಗೌಡ ರಿಯಲ್ ಮಲ್ಟಿ ಟ್ಯಾಲೆಂಟೆಡ್..!
ಗೀತಾ ಉತ್ತಮ ನಟನೆಯ ಜೊತೆಗೆ ಉತ್ತಮ ಹಾಡುಗಾರ್ತಿ ಕೂಡ ಹೌದು. ಗೀತಾ ಅವರು ಸಹಜವಾಗಿ ದಪ್ಪವಾಗಿದ್ದಾರೆ. ಸಾಕಷ್ಟು ಮಂದಿ ಗೀತಾ ಅವರಿಗೆ ಈ ಬಗ್ಗೆ ವ್ಯಂಗ್ಯವೂ ಮಾಡಿದ್ದಾರೆ. ಆದ್ರೆ ಅದ್ಯಾವುದರ ಬಗ್ಗೆಯೂ ಗೀತಾ ತಲೆ ಕಡೆಸಿಕೊಂಡಿರಲಿಲ್ಲವಂತೆ. ಆದ್ರೆ ಅದನ್ನ ಅವರು ಚಾಲೆಂಜಾಗಿ ತೆಗೆದುಕೊಂಡಿದ್ದಾರೆ. ಗೀತಾ ಸಣ್ಣ ವಯಸ್ಸಿನಲ್ಲಿದ್ದಾಗಲೇ ಆಪರೇಷನ್ ಒಂದಕ್ಕೆ ಒಳಗಾದ ಬಳಿಕ ಅವರು ದಪ್ಪವಾಗುತ್ತಾ ಹೋದರಂತೆ. ಅಂದ್ಹಾಗೆ ನಟನೆ ಬಿಟ್ಟು ಇತ್ತೀಚೆಗೆ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಗೀತಾ ಹೆಸರು ಬಲವಾಗಿಯೇ ಕೇಳಿಬಂದಿತ್ತು. ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೂ ಗೀತಾ ಹಾಜರಾಗಿದ್ದರು. ಬಳಿಕ ಈ ಪ್ರಕರಣದಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.