ಬಹು ನಿರೀಕ್ಷಿತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಓಟಿಟಿಯಲ್ಲಿ ಪ್ರಸಾರವಾಗದೆ ನೇರವಾಗಿ ಟಿವಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ.
ಈ ಬಾರಿ ಕನ್ನಡ ಸೀಸನ್ 10 ಸಪ್ಟೆಂಬರ್‌ನಿಂದ ಶುರುವಾಗುವ ಸಾಧ್ಯತೆಯಿದೆ. ಹೀಗಾಗಿ ಸ್ಪರ್ಧಿಗಳ ಲಿಸ್ಟ್ ವೈರಲ್ ಆಗಿದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಶುರುವಾಗುವ ಸಾಧ್ಯತೆ ಇದೆ. ಸದ್ಯ ವೈರಲ್ ಆದ ಪಟ್ಟಿಯಲ್ಲಿ ನಾಗಿಣಿ ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭೂಮಿಕಾ ಬಸವರಾಜ್ ಮತ್ತು ವರ್ಷ ಕಾವೇರಿ, ನಟಿ ರೇಖಾ, ಕಿರುತೆರೆ ನಟ ರಾಜೇಶ್ ಧ್ರುವ, ಶನಿ ಸೀರಿಯಲ್ ಖ್ಯಾತಿಯ ಸುನೀಲ್ ಹೆಸರುಗಳಿವೆ
15 ಕಲಾವಿದರ ಪೈಕಿ ಐವರ ಹೆಸರು ಜೋರಾಗಿ ಹರಿದಾಡುತ್ತಿದೆ ಈ ಬಾರಿಯೂ ವಾರದ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೆ ವಿತ್ ಸುದೀಪ ಅಂತಹ ಸಂಚಿಕೆಗಳಲ್ಲಿ ನಟ ಸುದೀಪ್‌ರನ್ನು ಇರಲಿದೆ. ಎಲಿಮಿನೇಷನ್ ಜೊತೆ ಮೈ ನವಿರೇಳಿಸುವ ಟಾಸ್ಕ್‌ಗಳನ್ನು ನೋಡಲು ಜನ ಕಾದು ಕುಳಿತಿದ್ದಾರೆ.