BIGGBOSS 8 : ‘ನಾವು ಮಾತನಾಡುತ್ತಿದ್ದೇವೆ ತಾನೆ.. ನೀನು ಸುಮ್ಮನೆ ಕೂರು’ – ದಿವ್ಯಾ ಸುರೇಶ್ ವಿರುದ್ಧ ಅರವಿಂದ್ ಗರಂ..!
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಮನಸ್ಥಾಪಗಳು , ಗೊಂದಲುಗಳು ಹೆಚ್ಚಾಗ್ತಿವೆ. ಮನೆಯಲ್ಲಿ ದಿವ್ಯಾ ಸುರೇಶ್ ಮೇಲೆ ನೆಗೆಟಿವ್ ಇಂಪ್ರೆಷನ್ ಮೂಡುವುದಕ್ಕೆ ಶುರುವಾಗಿದೆ. ಅದು ಅಲ್ದೇ ಅರವಿಂದ್ ಸಹ ದಿವ್ಯಾ ಸುರೇಶ್ ವಿರುದ್ಧ ರೇಗಾಡಿದ್ದಾರೆ.
ಗರ್ಲ್ಸ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನಲ್ಲಿ ಮಂಜು, ದಿವ್ಯಾ, ನಿಧಿ ಮೋಸ ಮಾಡಿದ್ದರು. ಇದ್ರಿಂದ ಮನೆ ಸದಸ್ಯರು ಈ ಮೂವರ ವಿರುದ್ಧ ಮೊದಲೇ ಗರಂ ಆಗಿದ್ದಾರೆ. ಈ ನಡುವೆ ಕಳಪೆ ಸದಸ್ಯರನ್ನು ಆಯ್ಕೆ ಮಾಡುವ ವೇಳೆ ಮಂಜು ಹಾಗೂ ಅರವಿಂದ್ ನಡುವೆ ವಾಗ್ದಾಳಿ ನಡೆದಿತ್ತು. ಈ ವೇಳೆ ದಿವ್ಯಾ ಮಧ್ಯ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದ ಅರವಿಂದ್ ನಾನು ಅವನು ಮಾತನಾಡುತ್ತಿದ್ದೇವೆ ಮಧ್ಯದಲ್ಲಿ ನಿಂದೇನು ಎಂದು ಕಿಡಿಕಾರಿದ್ದಾರೆ.
ಮಂಜು ಗರ್ಲ್ಸ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ವೇಳೆ ನಾನು ಮಾಡಿದ್ದು ತಪ್ಪು. ನಾನು ನನ್ನ ತಪ್ಪನ್ನು ಹಾನೆಸ್ಟ್ ಆಗಿ ಒಪ್ಪಿಕೊಳ್ಳುತ್ತಿದ್ದೇನೆ. ನಾನು ಆಡಿದ ಆಟ ಸರಿಯಾಗಿರಲಿಲ್ಲ. ದಯವಿಟ್ಟು ಎಲ್ಲರೂ ಕ್ಷಮಿಸಿ. ಇನ್ನೂ ಮುಂದೆ ಆ ರೀತಿ ಆಟ ಆಡುವುದಿಲ್ಲ. ಈಗಾಗಲೇ ನಾನು ತುಂಬಾ ಕೊರಗಿದ್ದೀನಿ, ತುಂಬಾ ಅನುಭವಿಸುತ್ತಿದ್ದೇನೆ.
ಇದರ ಮೇಲೆ ಹೆಚ್ಚಿಗೆ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದು ಎಲ್ಲರಿಗೂ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಅರವಿಂದ್ , ಮಾತಿನಲ್ಲಿ ಹೇಳುವುದರಿಂದ ನಮಗೆ ಆ ಫೀಲಿಂಗ್ ಇನ್ನೂ ಬರುವುದಿಲ್ಲ. ನಾನು ಸತ್ಯವಾಗಿ ಹೇಳುತ್ತೇನೆ ಸರಿಹೋಗುವುದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತದೆ. ನಾನು ನಿನ್ನನ್ನು ಅಷ್ಟು ನಂಬಿದ್ದೇನೆ ಎಂದರೆ ಅದಕ್ಕೆ ತುಂಬಾ ತೂಕವಿರುತ್ತದೆ ಎಂದು ಹೇಳುತ್ತಾರೆ. ಈ ವೇಳೆ ದಿವ್ಯಾ ಸುರೇಶ್, ಮಂಜುವನ್ನು ಮಾತನಾಡಿ ಮುಗಿಸಲು ಬಿಡಿ ಎಂದು ಹೇಳುತ್ತಾರೆ.
ಆಗ ಅರವಿಂದ್ ಅವನು ನನ್ನ ಹತ್ತಿರ ಮಾತನಾಡುತ್ತಿದ್ದಾನೆ. ನೀನು ಸುಮ್ಮನೆ ಇರಮ್ಮ ಎರಡು ನಿಮಿಷ, ನಾನು ಅವನು ಮಾತನಾಡುತ್ತಿದ್ದರೆ ನೀನಗೇನು ತೊಂದರೆಯಾಗುತ್ತಿದೆ. ನೀನು ಮಾತನಾಡಬೇಕು ಅಂದರೆ ಮಾತ್ರ ನನ್ನ ಜೊತೆ ಮಾತನಾಡು, ಅವನು ಮಾತನಾಡಬೇಕು ಅನಿಸಿದರೆ ಅವನು ಮಾತನಾಡುತ್ತಾನೆ ಎನ್ನುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಅಲ್ಲ ಒಬ್ಬರು ಮಾತನಾಡುವಾಗ ಕೇಳಿಸಿಕೊಳ್ಳೋಣ ಅಂತ ಹೇಳುತ್ತಾರೆ.
ಬಳಿಕ ಅರವಿಂದ್ ಕೋಪದಿಂದ ಅವನು ನನ್ನ ಫ್ರೆಂಡೇ, ನಾನು ಅವನು ಫ್ರೆಂಡೇ ನಾವು ಮಾತನಾಡುತ್ತಿದ್ದೀವಿ ಅಲ್ವಾ. ನೀನು ಸುಮ್ಮನೆ ಕೂರು ಎಂದು ಕಿಡಿಕಾರಿದ್ದಾರೆ. ಒಟ್ಟಾರೆ ಮನೆಯಲ್ಲಿ ಅಸಮಾಧಾನದ ಹೊಗೆಯಾಡ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ.