BIGGBOSS 8 : ತಾನು ಅಂದುಕೊಂಡಂತೆಯೇ ಮನೆಯ ಮೊದಲ ಮಹಿಳಾ ಕ್ಯಾಪ್ಟನ್ ಆದ ದಿವ್ಯಾ ಉರುಡುಗ
ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..
ಇದೆಲ್ಲದರ ನಡುವೆ ಶೋ ಆರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಮಹಿಳಾ ಸ್ಪರ್ಧಿಗಳಿಗೆ ಕ್ಯಾಪ್ಟನ್ ಆಗೋ ಭಾಗ್ಯ ಸಿಕ್ಕಿರಲಿಲ್ಲ.. ಈ ಬಗ್ಗೆ ಮಹಿಳಾ ಸರ್ಧಿಗಳಲ್ಲಿ ಅಸಮಾಧಾನವಿತ್ತು.. ಆದ್ರೆ ಇದೀಗ ದಿವ್ಯಾ ತಾನು ಅಂದುಕೊಂಡಂತೆ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ನಾನೇ ಮೊದಲ ಮಹಿಳಾ ಕ್ಯಾಪ್ಟನ್ ಆಗಬೇಕು ಎಂದು ದಿವ್ಯಾ ಉರುಡುಗ ಅಂದುಕೊಂಡಿದ್ದರು. ಅದರಂತೆ ದಿವ್ಯಾ ಬಿಗ್‍ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್‌ನ ಮೊದಲ ಕ್ಯಾಪ್ಟನ್ ಆಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕನ್ನಡ ಬಿಗ್‍ಬಾಸ್ ಸೀಸನ್ 8 ಮೊದಲ ಇನ್ನಿಂಗ್ಸ್‍ನಲ್ಲಿ 11 ವಾರ ಕಳೆದಿದ್ದ ಸ್ಪರ್ಧಿಗಳು ಒಂದು ಗ್ಯಾಪ್ ತೆಗೆದುಕೊಂಡು ಮತ್ತೆ ಮನೆ ಪ್ರವೇಶಿಸಿದ್ದಾರೆ. ಎರಡನೇ ಇನ್ನಿಂಗ್ಸ್‍ನಲ್ಲಿ ಸ್ಪರ್ಧಿಗಳು ಎರಡು ವಾರ ಕಳೆದಿದ್ದಾರೆ. ಹೀಗಿರುವಾಗಲೇ ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ವಾಟ್ಲೆ ಕಿಲಾಡಿಗಳು ಹಾಗೂ ಸೂರ್ಯ ಸೇನೆ ಎಂದು ಎರಡು ತಂಡಗಳನ್ನು ಮಾಡಲಾಗಿತ್ತು. ಕ್ವಾಟ್ಲೆ ತಂಡಕ್ಕೆ ಮಂಜು ಕ್ಯಾಪ್ಟನ್ ಆದರೆ, ಸೂರ್ಯಸೇನೆ ತಂಡಕ್ಕೆ ಅರವಿಂದ್ ಕ್ಯಾಪ್ಟನ್ ಆಗಿದ್ದರು. ಹಲವು ಗೇಮ್‍ಗಳನ್ನು ಬಿಗ್‍ಬಾಸ್ ನೀಡಿದ್ದರು. ಹಲವು ಗೇಮ್‍ಗಳಲ್ಕಿ ಗೆದ್ದಿರುವ ದಿವ್ಯಾ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ. ಕಿಚ್ಚ ಸುದೀಪ್ ಅವರು ಮುಂದಿನ ಕ್ಯಾಪ್ಟನ್ ಮಹಿಳಾ ಸ್ಪರ್ಧಿಗಳು ಆಗಬೇಕು ಎಂದು ಹುರಿದುಂಬಿಸಿದ್ದರು ಅದರಂತೆ ದಿವ್ಯಾ ಕ್ಯಾಪ್ಟನ್ ಆಗಿದ್ದಾರೆ.
ಸೂರ್ಯಸೇನೆ ತಂಡದಲ್ಲಿರುವ ಅರವಿಂದ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ವೈಷ್ಣವಿ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ಪಾಲ್ಗೊಂಡರು. ಟಾಸ್ಕ್‌ನ ಅನುಸಾರ ಧರಿಸಿದ ಬಟ್ಟೆಯ ಮೇಲೆ ಮತ್ತೊಂದು ಬಟ್ಟೆ ಹಾಕಿಕೊಳ್ಳಬೇಕು. ಅತಿ ಹೆಚ್ಚು ಬಟ್ಟೆ ಹಾಕಿದವರು ಟಾಸ್ಕ್ ಗೆದ್ದಂತೆ. ಈ ಟಾಸ್ಕ್‍ನಲ್ಲಿ ದಿವ್ಯಾ ಗೆದ್ದು ಬಿಗ್‍ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದರು.
ಅಂದ್ಹಾಗೆ ಈವರೆಗೆ ಬಿಗ್‍ಬಾಸ್ ಸೀಸನ್ 8ರಲ್ಲಿ ಮಹಿಳಾ ಕ್ಯಾಪ್ಟನ್ ಆಗಿರಲಿಲ್ಲ. ಕಳೆದ ವಾರದ ಪಂಚಾಯ್ತಿಯಲ್ಲಿ ಸುದೀಪ್ ಕೂಡ ಈ ಬಗ್ಗೆ ಮಾತನಾಡಿದ್ದರು. ಇದೀಗ ದಿವ್ಯಾ ಕ್ಯಾಪ್ಟನ್ ಆಗಿ ತಾನೊಬ್ಬ ಸ್ಟ್ರಾಂಗ್ ಕಂಟೆಂಡರ್ ಅನ್ನೋದನ್ನ ಸಾಬೀತು ಮಾಡಿದ್ದಾರೆ.