‘ರಶ್ಮಿಕಾ ಓವರ್ ಆಕ್ಟಿಂಗ್ ‘ – ನೆಟ್ಟಿಗರಿಂದ ಟ್ರೋಲ್
ಕನ್ನಡದ ಕಿರಿತ ಪಾರ್ಟಿ ಸಿನಿಮಾ ಮೂಲಕ ಫೇಮ್ ಪಡೆದು ನ್ಯಾಷನಲ್ ಕ್ರಷ್ ಆಗಿ ಗುರುತಿಸಿಕೊಂಡ ರಶ್ಮಿಕಾ ಟಾಲಿವುಡ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡು , ತಮಿಳುನಲ್ಲಿಯೂ ನಟಿಸಿ ಇದೀಗ ಬಾಲಿವುಡ್ ಗೆ ಹಾರಿದ್ದಾರೆ.. ಬಾಲಿವುಡ್ ನಲ್ಲಿ ತಮ್ಮ 2ನೇ ಸಿನಿಮಾ , ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದಾರೆ..
ರಶ್ಮಿಕಾ ನಟನೆಯ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳ ಮೂಲಕವೇ ಸಖತ್ ಚರ್ಚೆಯಲ್ಲಿಯಲ್ಲಿರುವ ನಟಿ ಅಂತ ಹೇಳ್ಬೋದು.. ಯಾವುದಾದರೂ ಒಂದು ವಿಚಾರದಲ್ಲಿ ಸುದ್ದಿಯಲ್ಲಿಯೇ ಇರುತ್ತಾರೆ.. ಇದೀಗ ಮತ್ತೆ ಟ್ರೋಲ್ ಪೇಜ್ ಗಳಲ್ಲಿ ಚಷ್ಮಾ ಸುಂದರಿ ರಾರಾಜಿಸುತ್ತಿದ್ದಾರೆ.
ತಮಿಳಿನ ಸ್ಟಾರ್ ನಟನ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ರಶ್ಮಿಕಾ
ಇತ್ತೀಚಿಗೆ ಮುಂಬೈನ ನಗರದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಕಾರಿನಿಂದ ಕೆಳಗೆ ಇಳಿದ ರಶ್ಮಿಕಾ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ತರಲು ಕಾರಿನ ಬಳಿ ಓಡಿದ ರಶ್ಮಿಕಾ ಬಳಿಕ ತನ್ನ ಕೈಗಳಿಂದ ಬಾಯಿ ಮುಚ್ಚಿಕೊಳ್ಳುತ್ತಾರೆ. ಅಷ್ಟರಲ್ಲಿ ರಶ್ಮಿರಾ ಸ್ಟ್ಯಾಫ್ ಒಬ್ಬರು ಮಾಸ್ಕ್ ತೆಗೆದುಕೊಡುತ್ತಾರೆ. ತನಗೆ ಬೇಕಾದ ಸ್ಟೈಲಿಶ್ ಮಾಸ್ಕ್ ಅನ್ನು ರಶ್ಮಿಕಾ ಆಯ್ಕೆ ಮಾಡಿಕೊಳ್ಳುತ್ತಾರೆ.
ಖಾಸಗಿ ಸುದ್ದಿ ಮಾಧ್ಯಮಕ್ಕೆ ರಕ್ಷಿತ್ ಶೆಟ್ಟಿ a sweet warning
ರಶ್ಮಿಕಾ ಎಕ್ಸ್ ಪ್ರೆಶನ್, ನಡೆದು ಕೊಂಡ ರೀತಿಗೆ ನೆಟ್ಟಿಗರು ಓವರ್ ಆಕ್ಟಿಂಗ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮಾಸ್ಕ್ ವಿಚಾರವಾಗಿಯೂ ರಶ್ಮಿಕಾ ಕಾಲೆಳೆಯುತ್ತಿದ್ದಾರೆ. ರಶ್ಮಿಕಾ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ರಶ್ಮಿಕಾ ಹಾಗೂ ಟ್ರೋಲಿಗರ ನಡುವೆ ಅವಿನಾಭಾ ಸಂಬಂಧವಿದೆ.. ರಶ್ಮಿಕಾ ಕೇರ್ ಮಾಡಲ್ಲ ಅಂತ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.. ಆದ್ರೂ ನೆಟ್ಟಿಗರು ಮಾತ್ರ ಟ್ರೋಲ್ ಮಾಡಿ ಜರಿಯೋದನ್ನ ನಿಲ್ಲಿಸಲ್ಲ..
ಹೊಸ ಮನೆ ಗೃಹಪ್ರವೇಶ ನೆರವೇರಿಸಿದ ರಾಕಿಂಗ್ ಸ್ಟಾರ್ ದಂಪತಿ ..!
ಸಿನಿಮಾ ವಿಚಾರಕ್ಕೆ ಬಂದ್ರೆ ಮುಂಬೈನಲ್ಲಿ ಸೆಟಲ್ ಆಗಿರೋ ರಶ್ಮಿಕಾ ಬಾಲಿವುಡ್ ನಲ್ಲಿ ಮೊದಲ ಸಿನಿಮಾ ಮಿಷನ್ ಮಜ್ನು ಮತ್ತು 2ನೇ ಸಿನಿಮಾ ಅಮಿತಾಬ್ ಬಚ್ಚನ್ ರ ಗುಡ್ ಬೈ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ರಶ್ಮಿಕಾ, ಅರ್ಜುನ್ ಜೊತೆ ನಟಿಸಿರುವ ಬಹುನಿರೀಕ್ಷೆಯ ಪುಷ್ಪ ರಿಲೀಸ್ ಗೆ ರೆಡಿಯಾಗಿದೆ..