BIGGBOSS 8 – ದಿವ್ಯಾ ಉರುಡುಗಗಾಗಿ ಹಾಡು ಹಾಡಿದ ಶಮಂತ್ – ಸಾಥ್ ಕೊಟ್ಟ ಸದಸ್ಯರು
ಆರೋಗ್ಯ ಸಮಸ್ಯೆಯಿಂದಾಗಿ ಬಿಗ್ ಬಾಸ್ ಮನೆಯಿಂದ ದಿವ್ಯ ಹೊರನಡೆದಿರೋದು ಪ್ರೇಕ್ಷಕರು ಸದಸ್ಯರನ್ನ ದಂಗಾಗಿಸಿದೆ.. ಅದ್ರಲ್ಲೂ ಪ್ರಣಯ ಪಕ್ಷಿಗಳಂತೆ ಜೊತೆಯಲ್ಲೇ ಇರುತ್ತಿದ್ದ ಜೋಡಿ ದೂರವಾಗಿದ್ದು, ಅರವಿಂದ್ ಭಾವುಕರಾಗಿ ಕಣ್ಣೀರು ಇಟ್ಟಿದ್ಧಾರೆ. ದಿವ್ಯಾ ಉರುಡುಗ ಅಭಿಮಾನಿಗಳು ಸಹ ಬೇಸರಗೊಂಡಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಗೆ ದಿವ್ಯಾ ವಾಪಸ್ ಬರಬಹುದಾ ಎಂಬ ಪ್ರಶ್ನೆಗಳು ಕಾಡುತ್ತಿದೆ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿವ್ಯಾ 67ನೇ ದಿನ ಮನೆಯನ್ನು ತೊರೆದಿದ್ದರು. ತೊರೆದ ಬಳಿಕ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಿದ್ದರಿಂದ ಪೂರ್ಣವಾಗಿ ಮನೆಯನ್ನು ಬಿಟ್ಟುಹೋಗಿದ್ದಾರೆ ಎನ್ನಲಾಗುತ್ತಿತ್ತು.
ಇದೀಗ ದಿವ್ಯಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಬಿಗ್ಬಾಸ್ ಮನೆಯ ಸ್ಪರ್ಧಿಗಳು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ದಿವ್ಯಾ ಉರುಡುಗರನ್ನು ದೊಡ್ಮನೆ ಮಂದಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಶಮಂತ್ ನಿನ್ನೆ ದಿವ್ಯಾ ಉರುಡುಗ ಬಗ್ಗೆ ಹಾಡೊಂದನ್ನು ಬರೆದಿದ್ದು, ಕ್ಯಾಮೆರಾ ಮುಂದೆ ನಿಂತು ಹಾಡಿದ್ದಾರೆ. ಜೊತೆಗೆ ಶಮಂತ್ ಹಾಡು ಹೇಳುವಾಗ ಬೆನ್ನ ಹಿಂದೆ ನಿಂತು ಮನೆ ಮಂದಿಯೆಲ್ಲಾ ಸಾಥ್ ನೀಡಿದ್ದಾರೆ.
ದಿವ್ಯಾ ಉರುಡುಗಗೆ ಹುಷಾರಿಲ್ಲ ಅವರು ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೆ ಒಂದು ಸಾಂಗ್ ಬರೆದಿದ್ದೇನೆ ಎನ್ನುತ್ತಾ ಶಮಂತ್, ಹೇ, ಹೇ ದಿವ್ಯಾ ಹೇಗಿದ್ಯಾ….. ನನ್ ಕಡೆ ಒಸಿ ನೋಡಕ್ಕಿಲ್ವಾ…. ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ.. ಬೇಜಾರ್ ಆದಾಗ ಓಡುತ್ತಿದ್ದೆ, ಟಾಸ್ಕೂ ಗಿಸ್ಕು ವಿನ್ ಆಗ್ತಿದ್ದೆ. ಹಾಡು ಚೆನ್ನಾಗೆ ಆಡ್ತಿದ್ದೆ, ಏನಕ್ಕೆ ಬ್ಯಾಕ್ ಟೂ ಬ್ಯಾಕ್ ತಿನ್ನುತ್ತಿದ್ದೆ. ತೀರ್ಥಹಳ್ಳಿ ಊರಿಂದ ಹೊಸಕೆರೆ ಹಳ್ಳಿಗೆ ಬಂದು ಮನ್ಸನ್ನೇ ಕದ್ದು ಬಿಟ್ಟಾವ್ಳೆ.. ಕೇಳೆ ದಿವ್ಯಾ ಉರುಡುಗ.. ಬಿಗ್ಬಾಸ್ ಮನೆಗೆ ಬಾ ಬೇಗ, ಕೇಳೆ ದಿವ್ಯಾ ಉರುಡುಗ.. ನಾವೆಲ್ಲಾ ವೈಟಿಂಗ್ ಬಾ ಬೇಗ.. ಎಂದು ಹಾಡಿದ್ದಾರೆ.