BIGGBOSS 8 : ಸಂಬರಗಿಗೆ ಕಳಪೆ ಬೋರ್ಡ್ – ಗುಂಪುಗಾರಿಕೆ ಖಂಡಿಸಿ ಜೈಲಿನಲ್ಲಿ ಮೌನ ಪ್ರತಿಭಟನೆ..!
ಪ್ರತಿವಾರ ಓರ್ವ ಸದಸ್ಯ ದೊಡ್ಮನೆಯಲ್ಲಿ ಕ್ಯಾಪಟ್ನ್ ಆಗೋದು, ಒಬ್ಬರು ಮನೆಯಿಂದ ಹೊರಗಡೆ ಹೋಗೋದು, ಒಬ್ಬರಿಗೆ ಉತ್ತಮ ಆಟಗಾರರ ರೌರವ ಮತ್ತೊಬ್ಬರಿಗೆ ಕಳಪೆ ಬೋರ್ಡ್ ಸಿಗೋದು ಕಾಮನ್. ಅದೇ ರೀತಿ ಮೊದಲ ವಾರ ಧನುಶ್ರೀ , 2ನೇ ವಾರ ಶಮಂತ್ , 3ನೇ ಶಂಕರ್ ಅವರಿಗೆ ಕಳಪೆ ಬೋರ್ಡ್ ನೀಡಿ ಜೈಲಿನಲ್ಲಿ ಕಳುಸಿದ್ದರು. ಇದೀಗ 4ನೇ ವಾರ ಪ್ರಶಾಂತ್ ಸಂಬರಗಿಗೆ ಮನೆಮಂದಿ ಕಳಪೆ ಬೋರ್ಡ್ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.
ಇದರಿಂದ ಪ್ರಶಾಂತ್ ಸಂಬರಗಿ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಹೌದು ಮನೆಯ ಬಹುತೇಕ ಸದಸ್ಯರು ಪ್ರಶಾಂತ್ ಸಂಬರಗಿಯವರನ್ನ ಕಳಪೆ ಪ್ರದರ್ಶನದ ಪಟ್ಟಿಗೆ ಆಯ್ಕೆ ಮಾಡಿದ್ದಾರೆ.
ಲ್ಯಾಗ್ ಮಂಜು, ನಿಧಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಶಂಕರ್, ಶಮಂತ್ ಹಾಗೂ ಕ್ಯಾಪ್ಟನ್ ವಿಶ್ವನಾಥ್ ಕೂಡ ಪ್ರಶಾಂತ್ ಸಂಬರ್ಗಿಯವರನ್ನೇ ಈ ವಾರದ ಕಳಪೆ ಪ್ರದರ್ಶನ ತೋರಿದ ಸದಸ್ಯ ಎಂದು ಆಯ್ಕೆ ಮಾಡಿ ಕಳಪೆ ಬೋರ್ಡ್ ನೀಡುತ್ತಾರೆ. ಇದಕ್ಕೆ ಮಂಜು ಕಾರಣ – ಮಂಜು ಅವರು ಕಳಪೆ ಪ್ರದರ್ಶನಕ್ಕೆ ಹೆಸರು ಸೂಚಿಸುವಾಹ ‘ನಾನು ಪ್ರಶಾಂತ್ ಸಂಬರ್ಗಿಯವರ ಹೆಸರನ್ನು ಸೂಚಿಸಲು ಇಷ್ಟ ಪಡುತ್ತೇನೆ. ಮನೆಯ ಕೆಲಸ ಸರಿಯಾಗಿ ಮಾಡುವುದಿಲ್ಲ. ನನಗೆ ದುಬಾರಿ ಮತ್ತೊಂದನ್ನು ಆಡಿದ್ದಾರೆ. ಒಂದು ಟಾಸ್ಕ್ನಲ್ಲಿ ಗ್ರೂಪ್ ಅಂತ ಬಂದಾಗ ಏನೇ ತಪ್ಪು ಮಾಡಿದ್ದರು ಒಪ್ಪಿಕೊಳ್ಳಬೇಕು, ಇಲ್ಲ ನಿಧಾನವಾಗಿ ಬಿಡಿಸಿ ಹೇಳಬೇಕೆಂದು ಹೇಳಿದ್ದಾರೆ. ಇನ್ನೂ ರಘು ಅವರು ಕೂಡ ಪ್ರಶಾಂತ್ ಹೆಸರನ್ನ ಹೇಳಿ , ಕೆಲವೊಂದು ಅನಾವಶ್ಯಕ ಕಮೆಂಟ್ ಗಳು, ಕ್ಯಾಪ್ಟನ್ ಮಾತಿಗೆ ವಿರೋಧ ವ್ಯಕ್ತಪಡಿಸುವುದು ಸೇರಿ ಅವರ ಇನ್ನಿತರ ವಿಚಾರಗಳು ಹಿಡಿಸಲಿಲ್ಲ ಎಂದಿದ್ದಾರೆ.
ಇತ್ತ ನಿಧಿ ಸುಬ್ಬಯ್ಯ ಅವರು ಕೂಡ ಪ್ರಶಾಂತ್ ಅವರ ಹೆಸರನ್ನೇ ಸೂಚಿಸುತ್ತಾ ಗ್ರೂಪ್ ನಲ್ಲಿದ್ದಾಗ ನಾನು 2-3 ಭಾರೀ ಡಿಮೊಟಿವೇಟ್ ಆಗಲು ಕಾರಣ ಸಂಬರಗಿಯೇ. ಡಿ ಮೋಟಿವೇಟ್ ಮಾಡುವುದು ಅವರ ಶಕ್ತಿ ಎಂದಿದ್ದಾರೆ. ಇನ್ನುಳಿದ ಸದಸ್ಯರು ನಾನಾ ಕಾರಣಗಳನ್ನ ನೀಡಿದ್ದಾರೆ.
ಆದ್ರೆ ಮನೆಯವರ ಕಾರಣಗಳು ಪ್ರಶಾಂತ್ ಸಂಬರಗಿಯವರಿಗೆ ಹಿಡಿಸದೇ ಮನೆಯ ಗುಂಪುಗಾರಿಕೆಯನ್ನ ಖಂಡಿಸಿ ಅನ್ನ ನೀರು ಬಿಟ್ಟು 24 ಗಂಟೆಗಳ ಕಾಲ ಮೌನ ಪ್ರತಿಭಟನೆಯನ್ನ ಮಾಡುವುದಾಗಿ ನಿರ್ಧಾರ ತೆಗೆದುಕೊಂಡರು.
ಅಲ್ಲದೇ ಸದಸ್ಯರ ಕಾರಣಗಳಿಗೆ ಪ್ರತಿಕ್ರಿಯೆ ನೀಡಿ ಮಂಜು ಹಾಗೂ ನಿಧಿ ಆಯ್ಕೆ ಪೂರ್ವ ನಿಯೋಜಿತ, ಬುಧವಾರವೇ ಮಂಜು ನನಗೆ ಈ ವಾರ ಕಳಪೆ ಬೋರ್ಡ್ ನಿನಗೆ ಹಾಕುತ್ತೇನೆ ಎಂದು ಹೇಳಿದ್ದರು. ಅಲ್ಲದೆ ನಿಧಿ ಕೂಡ ಸ್ವಿಮಿಂಗ್ ಫೂಲ್ ಬಳಿ ಕಾಯ್ತಿರು ಈ ವಾರ ಕಳಪೆ ಬೋರ್ಡ್ ಹಾಕುತ್ತೇನೆ ಎಂದು ಹೇಳಿದ್ದರು. ಇದು ಪೂರ್ವ ನಿಯೋಜಿತ ಎಂದು ಆರೋಪಿಸಿದರು. ಆದ್ರೆ ಇದಕ್ಕೆ ಉತ್ತರಿಸಿದ ನಿಧಿ ಹಾಗೂ ಮಂಜು ನಾವು ಈ ಮನೆಯಲ್ಲಿ ಎಲ್ಲರಿಗೂ ಈ ರೀತಿ ತಮಾಷೆ ಮಾಡ್ತೇವೆ. ಯಾವುದೇ ರೀತಿಯ ಪೂರ್ವ ನಿಯೋಜಿತ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಆದ್ರೂ ಪ್ರಶಾಂತ್ ಸಂಬರಗಿ ಮಾತ್ರ ಮನೆ ಸದಸ್ಯರ ನಿರ್ಣಯದಿಂದ ಕೋಪಗೊಂಡಿದ್ದಾರೆ. ಗುಂಪುಗಾರಿಕೆ ಆರೋಪ ಮಾಡಿದ್ದಾರೆ.