BIGG BOSS 8 : ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆದವರು ಯಾರು..?  ತಪ್ಪಿಸಿಕೊಂಡಿದ್ಯಾರು..?

1 min read

BIGG BOSS 8 : ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆದವರು ಯಾರು..?  ತಪ್ಪಿಸಿಕೊಂಡಿದ್ಯಾರು..?

ಬಿಗ್‌ ಬಾಸ್ ಕನ್ನಡ ಸೀಸನ್ 8ರ ಮೊದಲನೇ ವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 2ನೇ ವಾರವೂ ಆರಂಭವಾಗಿದೆ. ಮೊದಲನೇ ವಾರವೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಗಡೆ ಹೋಗಿದ್ರು. ಇದೀಗ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಅನ್ನೋ ಚರ್ಚೆಗಳು ಕೂಡ ಶುರುವಾಗಿದೆ.  ಈ ವಾರ ಎಲಿಮಿನೇಷನ್ ಗೆ ಹೊಸ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಒಟ್ಟು 8 ಮಂದಿಯನ್ನು ನಾಮಿನೇಟ್ ಮಾಡಲಾಗಿದೆ. ಬಿಗ್‌ ಬಾಸ್ ಸೂಚನೆಯಂತೆ ಎಲ್ಲಾ ಸ್ಪರ್ಧಿಗಳು ಪ್ರತ್ಯೇಕವಾಗಿ ತೆರಳಿ ಸ್ಪರ್ಧಿಗಳನ್ನ ನಾಮಿನೇಟ್ ಮಾಡಿದ್ದಾರೆ. ಒಬ್ಬಬ್ಬರು ಮೂವರ ಹೆಸರನ್ನು ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಅವರದ್ದೇ ಆದ ಕಾರಣಗಳನ್ನೂ ಕೂಡ ತಿಳಿಸಿದ್ದಾರೆ.

ಹೀಗೆ ವೋಟಿಂಗ್ ಆಧಾರದಲ್ಲಿ ಹೆಚ್ಚು ಮತಗಳನ್ನ ಪಡೆದ ಒಟ್ಟು 8 ಸ್ಪರ್ಧಿಗಳು 2ನೇ ವಾರದಲ್ಲಿ ಎಲಿಮಿನೇಷನ್ ರೌಂಡ್ ಗೆ ಆಯ್ಕೆಯಾದರು.

ಡೇಂಜರ್ ಝೋನ್ ನಲ್ಲಿ ಇರೋರು ಯಾರು..?

ದಿವ್ಯಾ ಸುರೇಶ್, ಗೀತಾ, ನಿರ್ಮಲಾ, ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ವಿಶ್ವನಾಥ್, ಚಂದ್ರಕಲಾ ವೋಟಿಂಗ್ ಮೂಲಕ ನಾಮಿನೇಟ್ ಆದ್ರು. ಇನ್ನೂ 2ನೇ ವಾರವೂ ಮನೆಯ ಕ್ಯಾಪ್ಟನ್ ಆಗಿರುವ ಬ್ರೋ ಗೌಡ ತಮಗೆ ಬಿಗ್ ಬಾಸ್ ಕೊಟ್ಟ ಪವರ್ ಬಳಸಿಕೊಂಡು ಒಬ್ಬರನ್ನ ನೇರವಾಗಿ ನಾಮಿನೇಟ್ ಮಾಡಿದ್ರು.  ಬ್ರೋ ಗೌಡ ಅವರು ನಟಿ ಶುಭಾ ಪೂಂಜಾ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಿದರು.

ಸೇಫ್ ಆದವರು ಯಾರು..?

ಇನ್ನೂ ನಾಮಿನೇಷನ್ ಪ್ರಕ್ರಿಯೆಯಿಂದ ರಘು ಗೌಡ ಹೊರಗೆ ಉಳಿದಿದ್ದರು. ಕಾರಣ ಧನುಶ್ರೀ ಮನೆಯಾಚೆ ಹೋಗುವಾಗ ಬಿಗ್ ಬಾಸ್ ಕೊಟ್ಟಿದ್ದ ಅವಕಾಶವನ್ನ ಬಳಸಿಕೊಂಡು  ರಘುಗೌಡ ಅವರನ್ನ ನಾಮಿನೇಷನ್ ರೌಂಡ್ ನಿಂದ ಬಚಾವ್ ಮಾಡಿದ್ದರು. ಇನ್ನೂ  ಕ್ಯಾಪ್ಟನ್ ಆಗಿರುವ ಕಾರಣ ಬ್ರೋ ಗೌಡ ಸಹ ಎಲಿಮಿನೇಷನ್ ರೌಂಡ್ ಗೆ ನಾಮಿನೇಟ್ ಆಗಿಲ್ಲ. ಇನ್ನುಳಿದಂತೆ ಈ ವಾರದ ನಾಮಿನೇಷನ್ ತೂಗುಕತ್ತಿಯಿಂದ ದಿವ್ಯಾ ಉರುಡುಗ, ವೈಷ್ಣವಿ, ಬೈಕ್ ರೇಸರ್ ಅರವಿಂದ್, ಮಂಜು ಪಾವಗಡ, ರಾಜೀವ್, ಶಂಕರ್ ಅಶ್ವಥ್  ತಪ್ಪಿಸಿಕೊಂಡಿದ್ದಾರೆ. ಈ ಬಾರಿ ಜನ ಯಾರನ್ನ ಮನೆಯಿಂದ ಆಚೆ ಕಳಿಸಲಿದ್ದಾರೆ. ಯಾರನ್ನ ಉಳಿಸಿಕೊಳ್ತಾರೆ ಅನ್ನೋದು ಈ ವೀಕೆಂಡ್ ನಲ್ಲಿ ಗೊತ್ತಾಗಲಿದೆ.

ಕಷ್ಟಗಳನ್ನೆಲ್ಲಾ ಮೆಟ್ಟಿ ರಿಲೀಸ್ ಆದ್ರೂ ‘ಹೀರೋ’ ಗೆ ಪೈರೆಸಿ ಹೊಡೆತ : ರಿಷಬ್ ಬೇಸರ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd