BIGGBOSS – ಬಿಗ್ ಬಾಸ್ ನಂತರ ಮಂಜು ಪಾವಗಡ ಗೋಲ್ ಏನು..?
ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರ ಆರಂಭದಿಂದಲೂ ಸ್ಟ್ರಾಂಗ್ ಕಂಡೆಂಡರ್ ಆಗಿ ಗುರುತಿಸಿಕೊಂಡು ಮನೆಯವರನ್ನ ಸದಾ ನಗಿಸಿ ಮನರಂಜಿಸುವ ಲ್ಯಾಗ್ ಮಂಜುಗೆ ಅನೇಕ ಅಭಿಮಾನಿಗೋಳಿದ್ದಾರೆ. ಬಿಗ್ ಬಾಸ್ ನಲ್ಲಿ ಮಂಜು ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಆದ್ರೆ ಬಿಗ್ ಬಾಸ್ ನಂತರ ಮಂಜು ಕಥೆಯೇನು…?
ಇದಕ್ಕೆ ಅವರೇ ಉತ್ತರ ನೀಡಿದ್ಧಾರೆ. ಹೌದು ಮಂಜು ಪಾವಗಡ ಬಿಗ್ ಬಾಸ್ ನಂತರ ಮುಂದೇನ್ ಮಾಡಬೇಕು ಎಂಬುದನ್ನ ದಿವ್ಯಾ ಸುರೇಶ್ ಬಳಿ ಹೇಳಿಕೊಂಡಿದ್ದಾರೆ. ಮಂಜು ಹಾಗೂ ದಿವ್ಯಾ ಇಬ್ಬರು ಕುಳಿತು ಮಾತನಾಡುತ್ತಿದ್ದ ವೇಳೆ, ದಿವ್ಯಾ ಸುರೇಶ್ ಮಂಜುಗೆ ಇನ್ನು 2 ವರ್ಷದಲ್ಲಿ ನಿನ್ನನ್ನು ನೀನು ಯಾವ ಸ್ಥಾನದಲ್ಲಿ ನೋಡಬೇಕು ಎಂದು ಅಂದುಕೊಂಡಿದ್ಯಾ ಎಂದು ಪ್ರಶ್ನೆ ಕೇಳುತ್ತಾರೆ.
ಆಗ ಮಂಜು, ನಾನು ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕೆಂದು ಕೊಂಡಿದ್ದೇನೆ. ಕ್ಯಾರೆಕ್ಟರ್ ಆರ್ಟಿಸ್ಟ್ ಅಂದರೆ ತಪ್ಪಾಗುತ್ತದೆ. ನಾನು ಒಬ್ಬ ಒಳ್ಳೆ ನಟ ಆಗಬೇಕು. ನೀನು ಯಾವ ಪಾತ್ರಕೊಟ್ಟರು ಜೀವಿಸುವ ತರಹ ಇರಬೇಕು. ಉದಾಹರಣೆಗೆ ಪ್ರಕಾಶ್ ರೈ, ಅನಂತ್ ನಾಗ್, ಸುದೀಪ್ ಸರ್ ರೀತಿ ಇರಬೇಕು.
ಒಂದು ಕ್ಯಾರೆಕ್ಟರ್ ನ್ನು ರಫ್ ಆಗಿ ಕಂಪೋಸ್ ಮಾಡಿರುತ್ತಾರೆ. ಅವರ ತಲೆಯಲ್ಲಿ ಇವರೇ ಇರಬೇಕು ಎಂದು ಫಿಕ್ಸ್ ಆಗಿರುತ್ತಾರೆ. ಈ ಕ್ಯಾರೆಕ್ಟರ್ ಅವನು ಒಪ್ಪಿಕೊಂಡರೆ ಸಾಕು ಅವನು ನೋಡಿಕೊಳ್ಳುತ್ತಾನೆ ಎಂದು ಇರುತ್ತದೆ. ಉದಾಹರಣೆಗೆ ನಾನೇ ಒಬ್ಬ ರೈಟರ್ ಆಗಿ 20% ಬರೆದಿರುತ್ತೇನೆ. ಅವನು ಒಪ್ಪಿಕೊಂಡರೆ ಸಾಕು 100% ಪಾತ್ರವನ್ನು ಹೆಚ್ಚಿಸಿಕೊಡುತ್ತಾನೆ ಎಂಬುವ ರೀತಿ ನಟನಾಗಬೇಕು ಎಂದು ಹೇಳಿಕೊಂಡಿದ್ದಾರೆ.