BIGGBOSS 8 :  ಸಂಚಾರಿ ವಿಜಯ್ ಸ್ಮರಿಸಿದ ಸ್ಪರ್ಧಿಗಳು

1 min read

BIGGBOSS 8 :  ಸಂಚಾರಿ ವಿಜಯ್ ಸ್ಮರಿಸಿದ ಸ್ಪರ್ಧಿಗಳು

ಇತ್ತೀಚೆಗೆ ರಸ್ತೆ ಅಪಗಾತದಲ್ಲಿ ಇಹೋಲೋಕ ತ್ಯಜಿಸಿದ ಸ್ಯಾಮಡಲ್ ವುಡ್ ಪ್ರತಿಭಾನ್ವಿತ ನಟ , ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನನ್ನ ಸ್ಮರಿಸಿರುವ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಒಟ್ಟಿಗೆ ಮೌನಾಚರಣೆ ಮಾಡಿ ಗೌರವ ಸೂಚಿಸಿದ್ದಾರೆ.

ಇನ್ನೂ ಚಕ್ರವರ್ತಿ ಚಂದ್ರಚೂಡ್ ಅವರು  ಸಂಚಾರಿ ವಿಜಯ್ ಭಾವಚಿತ್ರವಿರುವ ಟಿ ಶರ್ಟ್‍ ಅನ್ನು  ಧರಿಸಿದ್ದರು.   ಈ ವೇಳೆ ‘ಏಳು ಜೀವಗಳಿಗೆ ಜೀವವಾದವನೇ. ಪ್ರೀತಿ ಹುಡುಕಾಟದಲ್ಲಿ ರೀತಿ ಮರೆತವನೇ. ನಿನ್ನ ಗೋರಿ ಇರುವ ಈ ಭೂಮಿ ಬರೀ ಪಾಳುಯಾಕಿಷ್ಟು ಅವಸರವಿತ್ತೋ ನೀನೇ ಹೇಳು. ಸೂಲಗಿತ್ತಿಯೊಬ್ಬಳು ಹೆತ್ತ ಸ್ವರ ಮಗುವೇ. ನಮ್ಮಂಥ ಗೆಳೆಯರ ಎದೆಯಲ್ಲಿ ಎಂದೂ ಆರದ ಗಾಯವೇ. ಗೆಳೆತನದ ಪ್ರೀತಿಗೆ ನೀನು ಕಾರುಣ್ಯ. ನಮ್ಮೆಲ್ಲರ ಅಂಗೈಯೊಳಗೆ ಅರಳಿದ ಅರಣ್ಯ. ನಿನಗಾಗಿ ಬರೆಯುವೆ ನಾನು ಕೋಟಿ ಕೋಟಿ ಸಾಲು. ಇರಲಿ ನನಗೆ ನಿನ್ನಗಲಿಕೆಯ ದುಃಖದ ಪಾಲು ಎಂದು ಚಕ್ರವರ್ತಿ ಸಂಚಾರಿ ವಿಜಯ್ ಬಗ್ಗೆ ತಾವು ಬರೆದ ಸಾಲುಗಳನ್ನು ಹೇಳಿದರು.

ಸಂಚಾರಿ ವಿಜಯ್ ಅಗಲಿದ್ದು ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಲಾಸ್. ಯಾಕಂದ್ರೆ ನ್ಯಾಷನಲ್ ಅವಾರ್ಡ್, ರಾಜ್ಯ ಪ್ರಶಸ್ತಿ ಸೇರಿದಂತೆ ಸಂಗೀತ, ರಂಗಭೂಮಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವನು ಮಾಸ್ಟರ್. ನನಗೆ ತುಂಬಾ ಆತ್ಮೀಯನಾಗಿದ್ದನು. ಕೊನೆಯಲ್ಲಿ ಅವನ ಅಂಗಾಂಗಗಳನ್ನು ದಾನ ಮಾಡಲಾಯಿತು ಎಂದು ಹೇಳಿದ ಚಕ್ರವರ್ತಿ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಬದುಕು ನಡೆಸಲು ಬೀದಿಯಲ್ಲಿ ಮೀನು ಮಾರಾಟಕ್ಕಿಳಿದ ಕಿರುತೆರೆಯ ಖ್ಯಾತ ನಟ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd