BIGGBOSS 8 : ಸಂಬರಗಿ ಮೈಂಡ್ ಗೇಮ್ – ಮಂಜು ದಿವ್ಯಾ ಬಾಂಧವ್ಯದ ನಡುವೆ ಬಿರುಕು..!

1 min read

BIGGBOSS 8 : ಸಂಬರಗಿ ಮೈಂಡ್ ಗೇಮ್ – ಮಂಜು ದಿವ್ಯಾ ಬಾಂಧವ್ಯದ ನಡುವೆ ಬಿರುಕು..!

ಬಿಗ್ ಬಾಸ್ ಮನೆಯಲ್ಲಿ ತುಂಬ ಬಾಂಧವ್ಯದಿಂದ ಸದಾ ಜೊತೆಯಾಗಿದ್ದ ಜೋಡಿ ಅಂದ್ರೆ ಲ್ಯಾಗ್ ಮಂಜು ಹಾಗೂ ದಿವ್ಯಾ ಸುರೇಶ್ ಅವರದ್ದು. ಆದ್ರೆ ಇದೀಗ ಈ ಜೋಡಿ ನಡುವೆ ವೈಮಸ್ಸು ಉಂಟಾಗಿದೆ. ಇಬ್ಬರೂ ಕಿತ್ತಾಡಿಕೊoಡಿರುವುದು ಕಂಡುಬಂದಿದೆ. ಇದಕ್ಕೆ ಕಾರಣ ಪ್ರಶಾಂತ್ ಸಂಬರಗಿ ಅಂತ ಹೇಳಲಾಗ್ತಿದೆ…

ಹೌದು.. ಪ್ರಶಾಂತ್ ಸಂಬರ್ಗಿ ಮೈಂಡ್ ಗೇಮ್ಸ್ ನಿಂದ ಮನೆ ಸದಸ್ಯರು ಪರಸ್ಪರ ಕಿತ್ತಾಡುಕೊಳ್ಳುವಂತಾಗಿದೆ. ಅಷ್ಟೇ ಅಲ್ಲ ಮನೆಯ ಸದಸ್ಯರೇ ಆರೋಪಿಸಿರುವಂತೆ ಪ್ರಶಾಂತ್ ಸಂಬರಗಿ ಇತರೇ ಸದಸ್ಯರನ್ನ ತುಂಬಾನೇ ಡಿ ಮೋಟಿವೇಟ್ ಮಾಡ್ತಾರೇ ಅವರ ಬಲ ಸಾಮರ್ಥ್ಯದ ಬಗ್ಗೆ ಅವರೇ ನಂಬಿಕೆ ಕಳೆದುಕೊಳ್ಳುವಂತೆ ಸಂಬರಗಿ ಮಾಡ್ತಾರೆ ಅಂತ ಇತ್ತೀಚೆಗೆ ನಿಧಿ , ರಘು ಕೂಡ ಮಾತನಾಡಿಕೊಂಡಿದ್ರು. ಇದೀಗ ಸಂಬರಗಿ ಟಾರ್ಗೆಟ್ ಮಂಜು ಹಾಗೂ ದಿವ್ಯಾ ಬಾಂಧವ್ಯವಾಗಿತ್ತು.

ಮನೆಯವರೆನ್ನಲ್ಲ ನಗಿಸುವ ಮಾತಿನ ಮಲ್ಲ ಲ್ಯಾಗ್ ಮಂಜು ವಿರುದ್ಧ ಸಂಬರಗಿ ಮನೆ ಮಂದಿಯನ್ನೆಲ್ಲಾ ಎತ್ತಿಕಟ್ಟುತ್ತಿದ್ದಾರೆ. ಮಂಜುಗೆ ಅತ್ಯಂತ ಹತ್ತಿರ ಎಂದರೆ ದಿವ್ಯಾ ಸುರೇಶ್ ಅವರ ಬಳಿಯೂ ಹೋಗಿ ನೀನು ಮಂಜು ಬಾಲ… ನೆರಳಲ್ಲಿ ಬದುಕಬೇಡ.. ಯಾರೊಬ್ಬರಿಗು ಪ್ರಾಪರ್ಟಿ ಆಗಬಾರದು ಅಂತ ಕಿವಿಗೆ ತುಂಬಿದ್ದಾರೆ. ಇದರ್ರಿಂದಾಗಿ ಪ್ರಬಾವಿತರಾಗಿರುವ ದಿವ್ಯಾ ಸುರೇಶ್ ಮಂಜುನನ್ನು ದೂರ ಇಡಲು ಆರಂಭಿಸಿದ್ದರು.

ಬಿಗ್ಬಾಸ್ ಮನೆಯಲ್ಲಿ ಕಿಚನ್ ಡಿಪಾರ್ಟ್ಮೆಂಟ್ ನೀಡಲಾಗಿತ್ತು. ಆದರೆ ಮಂಜು ಅಡುಗೆ ಮನೆಗೆ ಹೋಗದೆ ಹೊರ ಭಾಗದಲ್ಲಿ ಕುಳಿತು ಮಾತನಾಡುತ್ತಾ ಇದ್ದರು. ನಾನು ವಾಕಿಂಗ್ ಮುಗಿಸಿ ಬಂದು ಪಾತ್ರೆ ತೊಳೆಯುತ್ತೇನೆ ಎಂದು ಮಂಜು ಹೇಳಿದ್ದರು. ಆದರೆ ದಿವ್ಯಾ ಪಾತ್ರೆ ತೊಳೆಯುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ನಾನು ಕಿಚನ್ ಹೋಗಲ್ಲ ಎಂದು ಮಂಜು ಹೇಳಿದ್ದಾರೆ. ಈ ವೇಳೆ ದಿವ್ಯಾ ಮಂಜು ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಮಂಜು ಬೇಸರಗೊಂಡಿರೋದು ಕಂಡುಬಂದಿದೆ.

BIGGBOSS 8 : ಸಂಬರಗಿಗೆ ಕಳಪೆ ಬೋರ್ಡ್ – ಗುಂಪುಗಾರಿಕೆ ಖಂಡಿಸಿ ಜೈಲಿನಲ್ಲಿ ಮೌನ ಪ್ರತಿಭಟನೆ..!

ತೆಲುಗು ರಾಜ್ಯಗಳಲ್ಲಿ ಕನ್ನಡ ಸ್ಟಾರ್ ಗಳ ಅಬ್ಬರ..! ತೆಲುಗಿನಲ್ಲಿ ಕೋಟಿಗೊಬ್ಬ 3..!

KGF 2 – ಅನಂತ್ ನಾಗ ಜಾಗಕ್ಕೆ ಬಂದ್ರಾ ಪ್ರಕಾಶ್ ರಾಜ್…! ಪಾತ್ರದ ಅಸಲಿಯತ್ತೇನು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd