BIGGBOSS 8 – ರಘು – ಚಕ್ರವರ್ತಿ ನಡುವೆ ಬಿಗ್ ಫೈಟ್ …! ನಿವಾಗ್ಲೂ ಚಕ್ರವರ್ತಿ ಅವರೇ ಸೀಕ್ರೆಟ್ ಏಜೆಂಟಾ….?

1 min read

BIGGBOSS 8 – ರಘು – ಚಕ್ರವರ್ತಿ ನಡುವೆ ಬಿಗ್ ಫೈಟ್ …! ನಿವಾಗ್ಲೂ ಚಕ್ರವರ್ತಿ ಅವರೇ ಸೀಕ್ರೆಟ್ ಏಜೆಂಟಾ….?

ಬಿಗ್ ಬಾಸ್ ನೀಡಿರುವ ಸೀಕ್ರೆಟ್ ಏಜೆಂಟ್ ಟಾಸ್ಕ್ ವೇಳೆ ಚಕ್ರವರ್ತಿ ಹಾಗೂ ರಘು ನಡುವೆ ದೊಡ್ಡ ಗಲಾಟೆ ನಡೆದಿದೆ. ಹೌದು ಆಟದ ವಿಚಾರಕ್ಕೆ ಇಬ್ಬರೂ ಸಹ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಚಕ್ರವರ್ತಿ ಹಾಗೂ ರಘು ಗೌಡ ಅವರು ವೈಯಕ್ತಿಕ ವಿಷಯ ಇಟ್ಟುಕೊಂಡು ಜಗಳ ಆಡಿದ್ದಾರೆ. ರಘು ಮಾತು ಕೇಳಿ ಕೋಪಗೊಂಡ ಚಕ್ರವರ್ತಿ ಅವರು ಇನ್ಮುಂದೆ ಯಾರಿಗೂ ಸಹಾಯ ಮಾಡೋದಿಲ್ಲ ಎಂದಿದ್ದಾರೆ.

ಬಿಗ್ ಬಾಸ್ ಸೀಕ್ರೆಟ್ ಏಜೆಂಟ್ ಟಾಸ್ಕ್ ನೀಡಿದ್ದು, ಈ ಗೇಮ್ ಪ್ರಕಾರ ಸದಸ್ಯರಲ್ಲಿ ಸೀಕ್ರೆಟ್ ಏಜೆಂಟ್ ಯಾರೆಂಬುದನ್ನ ಸದಸ್ಯರು ಪತ್ತೆಹಚ್ಚಬೇಕು.. ಆದ್ರೆ ರಘು ನೇರಾ ನೇರವಾಗಿ ಚಕ್ರವರ್ತಿ ಏಜೆಂಟ್… ಅವರು ಆಟವನ್ನ ಹಾಳು ಮಾಡಿದ್ದಾರೆ.. ಚಕ್ರವರ್ತಿ ಅವರು ಸೈಕಲಾಜಿಕಲ್ ಆಗಿ ಆಟ ಆಡಿದ್ದಾರೆ. ವೈಷ್ಣವಿಯಂತೆ ಚಕ್ರವರ್ತಿ ಅವರಿಗೆ ಫಿಟ್ನೆಸ್ ಇದೆ.. ಆಟ ಆಡಲಿಲ್ಲ ಹೀಗಾಗಿ ಚಕ್ರವರ್ತಿ ಅವರೇ ಏಜೆಂಟ್ ಎಂದು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಚಕ್ರವರ್ತಿ ಕೂಡ ಸಿಟ್ಟಿಗೆದ್ದಿದ್ದು, ಇಬ್ಬರ ನಡುವೆ ಫೈಟ್ ಆರಂಭವಾಗಿದೆ.

ಇದೇ ವೇಳೆ ರಘು ವಿರುದ್ಧ ಕೋಪಗೊಂಡು ಮಾತನಾಡಿದ ಚಕ್ರವರ್ತಿ ಎಷ್ಟು ನೀಚ ಆಟ ಆಡ್ತಿದ್ದೀಯಾ. ವೈಯಕ್ತಿಕವಾಗಿ ಯಾಕೆ ವಿಷಯ ತರುತ್ತಿದೀಯಾ. ಸೈಕಾಲಜಿ, ಕೌನ್ಸಿಲಿಂಗ್ ಮಾಡಿದ್ದು ವೈಯಕ್ತಿಕವಾದ ವಿಷಯ. ವೈಯಕ್ತಿಕವಾಗಿ ಸಹಾಯ ಮಾಡಿದ್ದಕ್ಕೆ, ಆಟದಲ್ಲಿ ಸಹಾಯ ಮಾಡಿದ್ದಕ್ಕೆ ಮೋಸ ಅಂದರೆ ನಾನು ಏನು ಮಾಡೋಕೆ ಆಗಲ್ಲ ಎಂದು ಗುಡುಗಿದ್ದಾರೆ.

ಈ ವೇಳೆ ಇವರಿಬ್ಬರ ನಡುವೆ ವಿಶ್ವನಾಥ್ ಹಾಗೂ ಅರವಿಂದ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸುಮ್ಮನಾಗಿಸಲು ಪ್ರಯತ್ನ ಪಟ್ಟಿದ್ದಾರೆ. ಆದ್ರೆ ರಘು ಹಾಗೂ ಚಕ್ರವರ್ತಿ ಮಾತ್ರ ಫೈಟ್ ಮುಂದುವರೆಸಿದ್ದರು. ಇದೇ ವೇಳೆ ವೈಯಕ್ತಿಕವಾಗಿ ವಿಷಯ ಎತ್ತಬೇಡಿ, ಪರ್ಸನಲ್ ಮ್ಯಾಟರ್ ಎತ್ತಬೇಡಿ, ಸರಿ ಅಲ್ಲ, ನಾನು ಪರ್ಸನಲ್ ಮ್ಯಾಟರ್ ಎತ್ತಿದ್ದು ತಪ್ಪು. ನೀವು ಏಜೆಂಟ್ ಅಲ್ಲ ಅಂತ ನಿರೂಪಿಸಿ ಅಂತ ರಘು ಗೌಡ ಹೇಳಿದ್ದಾರೆ. ಇದೇ ವೇಳೆ ನನ್ನ ಜೀವನದಲ್ಲಿ ನಾನು ಯಾರಿಗೂ ಸಹಾಯ ಮಾಡಲ್ಲ. ಇದು ನಾನು ಕಲಿತ ಪಾಠ ಅಂತ ಚಕ್ರವರ್ತಿ ಹೇಳಿದ್ದಾರೆ.

ಬಾಲಿವುಡ್ ‘ಕ್ಯಾಟ್’ ಗೆ ಕೊರೊನಾ ಪಾಸಿಟಿವ್..!

ಸಾರಾ ಆಲಿ ಖಾನ್ ಮತ್ತು‌ ಹಿರಿಯ ನಟ ದಿಲೀಪ್ ಕುಮಾರ್ ನಡುವಿನ ಸಂಬಂಧವೇನು?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd