BIGGBOSS 8 : ಈರುಳ್ಳಿ ಕಟ್ ಮಾಡಿದರೆ ಅದರಲ್ಲಿ ಸ್ವಪ್ಪ ಸಿಪ್ಪೆ ಕೂಡ ಇರಬೇಕು – ಶುಭಾ
ಲಾಕ್ ಡೌನ್ ನಿಂದಾಗಿ ಅರ್ಧಕ್ಕೆ ನಿಂತುಹೋಗಿದ್ದ ಶೋ ಮತ್ತೆ ಜೂನ್ 23 ರಿಂದ ಪುನರಾರಂಭವಾಗಿದೆ.. ಶೋ ಅರ್ಧಕ್ಕೆ ನಿಂತು ಹೋಗುವುದಕ್ಕೂ ಮುನ್ನ 3 ವಾರಗಳ ಕಾಲ ಕಿಚ್ಚ ಸುದೀಪ್ ಅವರ ನಿರೂಪಣೆಯನ್ನ ಮಿಸ್ ಮಾಡಿಕೊಂಡಿದ್ದವರಿಗೂ ಈಗ ಮತ್ತೆ ಕಿಚ್ಚನ ದರ್ಶನ ಸಂತಸ ತಂದಿದೆ..
ಶೋ ಮತ್ತೆ ಆರಂಭವಾದ ನಂತರ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸ್ಟೇಜ್ ಮೇಲೆ ಎಂದಿನಂತೆ ಬಂದು ಬಿಗ್ ಸ್ಕ್ರೀನ್ ಮುಖಾಂತರ ಮನೆಯಲ್ಲಿನ ಸ್ಪರ್ಧಿಗಳ ಜೊತೆಗೆ ಮಾತನಾಡುತ್ತಾ , ಬುದ್ದಿ ಹೇಳುತ್ತಾ , ಮನರಂಜಿಸುತ್ತಾ, ಕಾಮಿಡಿ ಮಾಡಿ, ಕಾಲೆಳೆದಿದ್ದಾರೆ.. ಅದ್ರಂತೆ ಸುದೀಪ್ ಅವರು ಸ್ಪರ್ಧಿಗಳ ಬಳಿ ಕೆಲ ಪ್ರಶ್ನೆಗಳನ್ನ ಕೇಳಿದ್ದು, ಎಸ್ ಆರ್ ನೋ ಮೂಲಕ ಸ್ಪರ್ಧಿಗಳು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವೇಳೆ ರುಚಿ ಮುಖ್ಯ ಅಲ್ಲ ಭಾಗವಹಿಸಿದರೆ ಸಾಕು ಎಂಬುದು ಶುಬಾ ಅವರ ಒಂದು ಭಾವನೆಯಾಗಿದೆ. ಇದು ಯಾರಿಗೆಲ್ಲಾ ಸರಿ? ಯಾರಿಗೆಲ್ಲಾ ತಪ್ಪು ಅನಿಸಿದೆ ಎಂದು ಕೇಳಿದ್ದಾರೆ.
ಈ ಸಂದರ್ಭ ಈ ವಿಚಾರವಾಗಿ ಮಾತನಾಡಿರೋ ಶುಭಾ ಅವರು ಸೋಲು ಗೆಲುವಿಗಿಂತ ಟಾಸ್ಕ್ ನಲ್ಲಿ ಭಾಗವಹಿಸುವುದು ಮುಖ್ಯ ಎಂಬುದನ್ನು ಅಡುಗೆಯಲ್ಲೂ ಬಳಸುತ್ತಾರೆ. ನಾನು ಯಾವ ಕೆಲಸ ಮಾಡಿದರೂ ಕೂಡ ಅದನ್ನು ಇವರು ಮತ್ತೆ ಮಾಡಬೇಕೆಂಬ ಅಭಿಪ್ರಾಯ ಇದೆ. ಹಾಗಾಗಿ ಕೆಲಸಕ್ಕೆ ಬರೋದೆ ಬೇಡ ಅಂತಾರೆ.
ನನ್ನ ಪ್ರಕಾರ ಈರುಳ್ಳಿ ಕಟ್ ಮಾಡಿದರೆ ಅದರಲ್ಲಿ ಸ್ವಪ್ಪ ಸಿಪ್ಪೆ ಕೂಡ ಇರಬೇಕು ಅದು ಇದ್ದರೆ ಏನು ಆಗಲ್ಲ. ನಾವು ಎಲ್ಲನೂ ಕ್ಲೀನ್ ಆಗಬೇಕು ಅಂದಕೊಂಡರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಲ್ಲ ಎಂದಿದ್ದಾರೆ. ಈ ವೇಳೆ ಸುದೀಪ್ ಅವರು ಈರುಳ್ಳಿ ಸಿಪ್ಪೆ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಪ್ರಪಂಚಕ್ಕೆ ಗೊತ್ತಿರಲಿಲ್ಲಾ.. ನೀವು ಇದೀಗ ಗೊತ್ತು ಮಾಡಿಸಿದ್ದೀರಿ ಎಂದು ಹೇಳುವ ಮೂಲಕ ಶುಭಾ ಕಾಲೆಳೆದು ಮನೆ ಮಮದಿಯನ್ನ ನಗಿಸಿದ್ದಾರೆ.