BIGGBOSS 8 : ವೀಕ್ಷಕರ ಪ್ರಕಾರ ಅತಿ ಹೆಚ್ಚು ಕಿರಿಕಿರಿಯುಂಟು ಮಾಡುವ ಸ್ಪರ್ಧಿ ಇವರೇ…?
ಬೆಂಗಳೂರು : ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..
ಇನ್ನೂ ಶೋ ಮುಗಿಯಲು ಇನ್ನು ಎರಡೇ ವಾರಗಳು ಬಾಕಿ ಇವೆ. ಯಾರು ಗೆಲ್ಲುತ್ತಾರೆಂಬ ಕುತೂಹಲ ಹೆಚ್ಚಾಗಿದೆ. ಎರಡನೇ ಇನ್ನಿಂಗ್ಸ್ ಆರಂಭವಾದ ಬಳಿಕ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದಾರೆ. ಈ ನಡುವೆ ಬಿಗ್ ಬಾಸ್ ವೀಕ್ಷಕರ ಪ್ರಕಾರ ಚಕ್ರವರ್ತಿ ಚಂದ್ರಚೂಡ್ ತುಂಬಾ ಕಿರಿಕಿರಿ ಉಂಟುಮಾಡುವ ಸ್ಪರ್ಧಿ ಎಂದು ಹೇಳಲಾಗಿದೆ.
‘ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಜಾತ್ಯತೀತ ನಾಯಿ’ – ಕಂಗನಾ
ಹೌದು ತಾಳ್ಮೆ ಕಳೆದುಕೊಳ್ಳುವುದರಲ್ಲಿ ಚಂದ್ರಚೂಡ್ ನಂಬರ್ ಒನ್ ಅಂತೆ. ಸಣ್ಣ ವಿಚಾರಗಳಿಗೂ ಅವರು ಕೋಪಗೊಳ್ಳುತ್ತಾರೆಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ವಿರುದ್ಧ ವಿವಾದ ಸೃಷ್ಟಿಕೊಂಡಿದ್ದ ಚಂದ್ರಚೂಡ್ ಎರಡನೇ ಇನ್ನಿಂಗ್ಸ್ನಲ್ಲಿ ಪ್ರಿಯಾಂಕ ತಿಮ್ಮೇಶ್ ಬಳಿ ಕಿತ್ತಾಡಿಕೊಳ್ಳುತ್ತಿದ್ದಾರೆ.
ಬಿಗ್ಬಾಸ್ನಲ್ಲಿ ಈವರೆಗೂ ಚಂದ್ರಚೂಡ್ ಸ್ಪರ್ಧಿಗಳ ಜತೆ ಚರ್ಚೆಗೆ ಧುಮುಕ್ಕಿದ್ದೇ ಹೆಚ್ಚು. ಅಲ್ಲದೆ, ಸಣ್ಣ ವಿಚಾರಕ್ಕೂ ಕೂಗಾಡುತ್ತಾರೆ. ಇದನೆಲ್ಲವನ್ನು ಪರಿಗಣಿಸಿರುವ ಬಿಗ್ಬಾಸ್ ವೀಕ್ಷಕರು ಈ ಸೀಸನ್ ನ ಅತಿ ಕಿರಿಕಿರಿಯುಂಟು ಮಾಡುವ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.