BIGGBOSS 8 – 9ನೇ ವಾರ ನೋ ಎಲಿಮಿನೇಷನ್.. ಕಾರಣ ಏನು..? ಮುಂದಿನ ವಾರ ‘ಡಬಲ್’ ಟ್ವಿಸ್ಟ್..!  

1 min read

BIGGBOSS 8 – 9ನೇ ವಾರ ನೋ ಎಲಿಮಿನೇಷನ್.. ಕಾರಣ ಏನು..? ಮುಂದಿನ ವಾರ ‘ಡಬಲ್’ ಟ್ವಿಸ್ಟ್..!

ಬಿಗ್ ಬಾಸ್ ಮನೆಯಲ್ಲಿ 9ನೇ ವಾರ ಘಟಾನುಘಟಿ ಸ್ಪರ್ಧಿಗಳು ಎನಿಸಿಕೊಂಡಿದ್ದವರೇ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು.. ಮನೆಯಿಂದ ಈ ಬಾರಿ ಯಾರು ಆಚೆ ಹೋಗಬಹುದು ಎಂಬ ಕುತೂಹಲ ಜನರನ್ನ ಕಾಡುತ್ತಿತ್ತು. ಕಿಚ್ಚ ಸುದೀಪ್ ಸಹ ವೀಕೆಂಡ್ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾದ ನಂತರ ಹೇಗೆ ಎಲಿಮಿನೇಟ್ ಸ್ಪರ್ಧಿಯನ್ನ ಬಿಗ್ ಬಾಸ್ ಘೋಷಿಸಲಿದ್ಧಾರೆ ಅನ್ನುವ   ಕ್ಯೂರಿಯಾಸಿಟಿ ಇತ್ತು.. ಆದ್ರೆ ಪ್ರೇಕ್ಷಕರು ಸ್ಪರ್ಧಿಗಳು ಇಬ್ಬರಿಗೂ ಬಿಗ್ ಬಾಸ್ ಸರ್ಪ್ರೈಸ್ ನೀಡಿದ್ದಾರೆ.

9ನೇ ವಾರ ಯಾರೂ ಸಹ ಎಲಿಮಿನೇಟ್ ಆಗಿಲ್ಲ.  ಮಂಜು ಪಾವಗಡ , ಅರವಿಂದ್ , ಚಕ್ರವರ್ತಿ , ಪ್ರಶಾಂತ್ ಸಂಬರಗಿ , ಪ್ರಿಯಾಂಕಾ ತಿಮ್ಮೇಶ್ , ದಿವ್ಯಾ ಸುರೇಶ್ ಇಷ್ಟು ಜನ ಡೇಂಜರ್ ಝೋನ್ ನಲ್ಲಿ ಇದ್ದರು. ಶುಭಾ ಗೋಲ್ಡನ್ ಪಾಸ್ ಬಳಸಿ ಸೇಫ್ ಆದ್ರು. ಈ ಸ್ಪರ್ಧಿಗಳ ಪೈಕಿ ದಿವ್ಯಾ ಸುರೇಶ್ ಅಥವ ಪ್ರಿಯಾಂಕಾ ಹೊರಹೋಗುವ ಸಾಧ್ಯತೆಗಳು ಹೆಚ್ಚಾಗಿತ್ತು. ಆದ್ರೆ ಬಿಗ್ ಬಾಸ್ ಈ ಈ ಸ್ಪರ್ಧಿಗಳಿಗೆ ರಿಲೀಫ್ ನೀಡಿದೆ.

ಎಲಿಮಿನೇಟ್ ಮಾಡದೇ ಇರುವುದಕ್ಕೆ ಕಾರಣ…?

ಪ್ರತಿವಾರದಂತೆಯೇ ಈ ವಾರವೂ ಎಲಿಮಿನೇಟಷನ್ ಗೆ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಆದ್ರೆ ಈ ವಾರ ತುಂಬಾನೆ ತಡವಾಗಿ ಅಂದ್ರೆ ಶುಕ್ರವಾರ ನಾಮಿನೇಷನ್ ನಡೆಯಿತು.. ಇದ್ರಿಂದಾಗಿ ಜನರಿಗೆ ತುಂಬಾನೆ ಕಡಿಮೆ ಸಮಯ ಸಿಕ್ಕಿತ್ತು.. ವೋಟಿಂಗ್ ಮಾಡುವುದಕ್ಕೆ.. ಹೀಗಾಗಿ ಈ ಬಾರಿ ಯಾರನ್ನೂ ಎಲಿಮಿನೇಟ್ ಮಾಡಲಾಗಿಲ್ಲ.  ಆದ್ರೆ ಮುಂದಿನ ವಾರ ಇದರ ಎಫೆಕ್ಟ್  ಆಗಬಹುದು.. ಹೌದು.. ಮುಂದಿನ ವಾರ ಡಬಲ್ ಎಲಿಮಿನೇಷನ್ ಆದರೂ ಆಗಬಹುದಾದ ಚಾನ್ಸಸ್ ಹೆಚ್ಚಿದೆ..

BIGGBOSS 8 – ‘ನೀನು ಮುಂದಿನ ವಾರವೇ ಎಲಿಮಿನೇಟ್ ಆಗು’… ಶಮಂತ್ ಗೆ ಶಾಪ ಕೊಟ್ಟಿದ್ದೇಕೆ ಪ್ರಿಯಾಂಕಾ..?

BIGGBOSS 8 : ಕೇಳಿದ ಪ್ರಶ್ನೆಗಳಿಗೆಲ್ಲಾ ದಿವ್ಯಾ ಉತ್ತರ ಒಂದೇ.. ಅರವಿಂದ್.. ಅರವಿಂದ್…! 

ಕೊಲೆ ಬೆದರಿಕೆ – ಪೊಲೀಸ್ ಭದ್ರತೆ ನಿರಾಕರಿಸಿದ ನಟ ಸಿದ್ಧಾರ್ಥ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd