BIGGBOSS 8 : ಟ್ರೋಲ್ ಆಗ್ತಾಯಿದ್ದೀನಿ ಅನ್ಸುತ್ತೆ – ಚಕ್ರವರ್ತಿ
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಮದಿರುವ ಚಕ್ರವರ್ತಿ ಆರಂಭದಿಂದಲೂ ವಿಭಿನ್ನ ವ್ಯಕ್ತಿತ್ವದಿಂದ , ಮೈಂಡ್ ಗೇಮ್ ಆಡುತ್ತಾ ಇತರರ ಬಗ್ಗೆ ಕಮೆಂಟ್ ಗಳನ್ನ ಪಾಸ್ ಮಾಡುತ್ತಲೇ ಉಸ್ದಿಯಾಗಿದ್ರು.. ಆದ್ರೆ ಇತ್ತೀಚೆಗೆ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗುವಾಗ ಅವರಿಗೆ ಅಶ್ಲೀಲ ಸನ್ನೆ ತೋರಿಸಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದರು.. ಅಲ್ಲದೇ ನೆಟ್ಟಿಇಗರು ಚಕ್ರವರ್ತಿಯನ್ನ ಮನೆಯಿಂದ ಹಹೊರಹಾಕುವಂತೆ ಆಕ್ರೋಶ ಹೊರಹಾಕಿದ್ದರು..
ವೀಕೆಂಡ್ ಸಂಚಿಕೆಯಯಲ್ಲಿ ಕಿಚ್ಚ ಸುದೀಪ್ ಇದೇ ವಿಚಾರವಾಗಿ ಚಕ್ರವರ್ತಿಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಬಿಗ್ಬಾಸ್ ಮನೆಯಲ್ಲಿ ಪ್ರತಿ ಬಾರಿ ನಾನು ಟಾರ್ಗೆಟ್ ಆಗ್ತಿದ್ದೀನಿ, ನನ್ನನ್ನು ಸುದೀಪ್ ಸರ್ ಸ್ತ್ರೀ ಪೀಡಕ, ಸ್ತ್ರೀ ಕಂಟಕ ಅಂತ ಬಿಂಬಿಸುತ್ತಿದ್ದಾರೆ ಎಂದೆಲ್ಲ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಈಗ ಹೊಸದೊಂದು ಆತಂಕ ಶುರುವಾಗಿದೆ. ಈ ಕುರಿತಾಗಿ ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರಗೆ ಹೋಗುವಾಗ, ಚಕ್ರವರ್ತಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇದರಿಂದ ಕೋಪಗೊಂಡ ಚಕ್ರವರ್ತಿ, ಅಶ್ಲೀಲವಾಗಿ ಸನ್ನೆ ಮಾಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು. ಸುದೀಪ್ ಕೂಡ ಚಕ್ರವರ್ತಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಕುರಿತಾಗಿ ಚಕ್ರವರ್ತಿಗೆ ತಲೆನೋವು ಶುರುವಾಗಿದೆ.
ಅಭಿನಯ ಶಾರದೆ , ಖ್ಯಾತ ನಟಿ ಜಯಂತಿ ಇನ್ನಿಲ್ಲ
ಫುಲ್ ಟ್ರೋಲ್ ಆಗಿರತ್ತೆ ಅಲ್ವಾ ಅದು ಎಂದು ಚಕ್ರವರ್ತಿ, ಅರವಿಂದ್ ಬಳಿ ಕೇಳಿದ್ದಾರೆ. ಮುಂಚೆ ಆಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ, 43 ದಿನಗಳಲ್ಲಿ ನೋಡಿದ್ದರ ಪ್ರಕಾರ, ಖಂಡಿತಾ ಅದು ಟ್ರೋಲ್ ಆಗಿರುತ್ತದೆ. ಖಂಡಿತಾ ನಿಮ್ಮನ್ನು ಮಾತ್ರ ಅಲ್ಲ, ನನ್ನನ್ನು ಚಚ್ಚಿರುತ್ತಾರೆ ಎಂದು ಅರವಿಂದ್ ಹೇಳಿದ್ದಾರೆ. ಚಚ್ಚಿರುತ್ತಾರೆ ಹಾಕ್ಕೊಂಡು ನನ್ನ, ಆದರೆ ನಿನ್ನ ಯಾಕೆ ಟ್ರೋಲ್ ಮಾಡುತ್ತಾರೆ ಎಂದು ಚಕ್ರವರ್ತಿ ಅರವಿಂದ್ಗೆ ಪ್ರಶ್ನೆ ಮಾಡಿದ್ದಾರೆ. ಇಲ್ಲ ನಾನು ಆಟವನ್ನು ಸರಿಯಾಗಿ ಆಡುತ್ತಿಲ್ಲ ಎಂದು ಜನ ನನ್ನ ಟ್ರೋಲ್ ಮಾಡಿರುತ್ತಾರೆ ಎಂದು ಊಹಿಸಿದ್ದಾರೆ. ಈ ವೇಲೆ ಪ್ರತಿ ವಾರ ತಪ್ಪಾಗ್ತಿದೆ ಸರ್ ಅದಿಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಅರರವಿಂದ್ ಹೇಳ್ತಾರೆ.