ಕುಂದ್ರಾಗೆ ಸಪೋರ್ಟ್ ಮಾಡ್ತಿದ್ದ ಗೆಹನಾಗೆ ಕಂಟಕ – ಇಡಿ ಇಂದ ಸಮನ್ಸ್ ಜಾರಿ

1 min read

ಕುಂದ್ರಾಗೆ ಸಪೋರ್ಟ್ ಮಾಡ್ತಿದ್ದ ಗೆಹನಾಗೆ ಕಂಟಕ – ಇಡಿ ಇಂದ ಸಮನ್ಸ್ ಜಾರಿ

ಕಂದ್ರಾಗೆ ಸಪೋರ್ಟ್ ಮಾಡೋಕೋಗಿ ತಗ್ಲಾಕಿಕೊಂಡ್ರಾ ಗೆಹನಾ..?

ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್ – ಮತ್ತೆ ಜೈಲು ಸೇರ್ತಾರಾ…?

ಮುಂಬೈ: ಅಶ್ಲೀಲ ಪ್ರಕರಣದಲ್ಲಿ ಬಾಲಿವುಡ್ ಖ್ಯಾತ ನಟಿ, ಫಿಟ್ನೆಸ್ ಫ್ರೀಕ್  ಶಿಲ್ಪಾ ಶೆಟ್ಟಿಯ ಪತಿ , ಉದ್ಯಮಿ ಬಂಧನವಾಗಿದೆ.. ಅವರನ್ನ ಜುಲೈ 27ರರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.. ಈ ನಡುವೆ ರಾಜ್ ಕುಂದ್ರ, ಶಿಲ್ಪಾ ಶೆಟ್ಟಿ ಹಾಗೂ ಸಹೋದರಿ ಶಮಿತಾ ಶೆಟ್ಟಿ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ..ಇದೀಗ ಆರಂಭದಿಂದಲೂ ಕುಂದ್ರಾಗೆ ಬೆಂಬಲಿಸುತ್ತಾ ಬಂದಿರುವ ಮಾಡೆಲ್ , ನಟಿ ಗೆಹನಾಗೂ ಕಂಟಕ ಎದುರಾಗಿದೆ.. ಈ ಪ್ರಕರಣಕ್ಕೆ ಈಗ ಇಡಿ ಎಂಟ್ರಿಯಾಗಿದೆ.

ಇತ್ತೀಚಿಗಷ್ಟೆ ರಾಜ್ ಕುಂದ್ರಾ ಬಂಗಲೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ, ರಾಜ್ ಕುಂದ್ರಾ ಪರವಾಗಿ ಹೇಳಿಕೆ ಕೊಡ್ತಿದ್ದ ನಟಿ ಗೆಹನಾ ವಸಿಸ್ತ್‌ಗೆ ಮುಂಬೈ ಕ್ರೈಂ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಇನ್ನು ಮುಂಬೈ ಪೊಲೀಸರ ಜೊತೆ ಜಾರಿ ನಿರ್ದೇಶನಾಲಯ ಸಹ ಕೈ ಜೋಡಿಸಿದ್ದು, ರಾಜ್ ಕುಂದ್ರಾ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರತಿ ಪಡೆದುಕೊಂಡಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಬಾಲಿವುಡ್ ನ ‘ಬ್ಯಾಡ್ ಬಾಯ್’ ಗೆ ಆಕ್ಷನ್ ಕಟ್ ಹೇಳಲು ‘ನೋ’ ಅಂದಿದ್ದೇಕೆ ರಾಜಮೌಳಿ..?

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ ಕುಂದ್ರಾ ಬಂಧನದ ಬಳಿಕ ನಟಿ ಗೆಹನಾ ವಸಿಸ್ತ್, ಕುಂದ್ರಾ ಪರವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. ಬೋಲ್ಡ್ ಮತ್ತು ಎರೋಟಿಕಾ ಸಿನಿಮಾಗಳನ್ನು ಪೋರ್ನ್ ಸಿನಿಮಾಗಳಿಗೆ ಹೋಲಿಸಬೇಡಿ. ರಾಜ್ ಕುಂದ್ರಾ ಕಂಪೆನಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿದೆ.

ಟೋಕಿಯೋ ಒಲಂಪಿಕ್ ನಲ್ಲಿ ಬೆಳ್ಳಿ ಗೆದ್ದ ಮೀರಾಭಾಯ್‌ ಗೆ ಕಿಚ್ಚನ ಅಭಿನಂದನೆ..!  

ರಾಜ್ ಕುಂದ್ರಾ ನಿರ್ಮಿಸಿದ ಆಪ್ ಗಳಲ್ಲಿ ಮೂರು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಅವರು ಎಂದಿಗೂ ನನಗೆ ಇದನ್ನೆ ಮಾಡಿ ಎಂದು ಒತ್ತಾಯ ಮಾಡಿಲ್ಲ. ನಾನು ಮಾಡಿದ ಕೆಲಸದ ಪ್ರಕಾರ ನನಗೆ ಸಂಬಳ ನೀಡಲಾಗಿದೆ ಎಂದು ಹೇಳಿದ್ದರು. ಗೆಹನಾ ಬಂಧನ ಆಗಿತ್ತು ಅಂದ್ಹಾಗೆ, ನಟಿ ಗೆಹನಾ ವಸಿಸ್ತ್ ಅವರನ್ನು ಸಹ ಈ ಹಿಂದೆ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. 5 ತಿಂಗಳು ಜೈಲಿನಲ್ಲಿದ್ದರು. ಇದೇ ಕೇಸ್‌ ನಲ್ಲಿ ಈಗ ರಾಜ್ ಕುಂದ್ರಾರನ್ನು ಅರೆಸ್ಟ್ ಮಾಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd