ಕನ್ನಡಿ ಮುಂದೆ ನಿಂತು ಹೈಟ್ ಚೆಕ್ ಮಾಡಿಕೊಂಡ ದಿವ್ಯಾ – ಅರವಿಂದ್ ಜೋಡಿ..!
ಬೆಂಗಳೂರು : ಬಿಗ್ ಬಾಸ್ ನಲ್ಲಿ ಪ್ರಣಯ ಪಕ್ಷಿಗಳಂತೆ ಇರುವ ಕ್ಯೂಟ್ ಜೋಡಿ ದಿವ್ಯಾ ಉರುಡುಗ ಹಾಗೂ ಅರವಿಂದ್ ನೇರವಾಗಿ ಎಲ್ಲೂ ಹೇಳದೇ ಹೋದರೂ ಅವರಿಬ್ಬರ ನಡುವೆ ಏನೋ ಒಂದು ಲವ್ ಕನೆಕ್ಷನ್ ಇದೆ ಅನ್ನೋದು ಅವರ ನಡವಳಿಕೆಯಿಂದಲೇ ಗೊತ್ತಾಗುತ್ತೆ. ಈ ಬಗ್ಗೆ ಹೊರಗಡೆ ಪ್ರೇಕ್ಷಕರು ಮನೆಯಲ್ಲಿ ಸದಸ್ಯರು ಯಾವಾಗಲೂ ಗುಸುಗುಸು ಮಾತನಾಡಿಕೊಳ್ಳುತ್ತಲೇ ಇರುತ್ತಾರೆ. ಈ ಜೋಡಿಯ ಕ್ಯೂಟ್ ಮೂಮೆಮಟ್ಸ್ ಕೆಲವೊಮ್ಮೆ ತುಂಬಾ ಇಷ್ಟವಾಗುತ್ತೆ.
ಇದೀಗ ಪ್ರೇಕ್ಷಕರ ಅನುಮಾನಗಳಿಗೆ ಮತ್ತಷ್ಟು ನೀರೆರಿದಿರುವ ಈ ಜೋಡಿ ಕನ್ನಡಿ ಮುಂದೆ ನಿಂತು ಪರಸ್ಪರ ಹೈಟ್ ಚೆಕ್ ಮಾಡಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ನಿನ್ನೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಬಾತ್ರೂಮ್ ಏರಿಯಾದ ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡಿಕೊಂಡಿದ್ದಾರೆ.
ದಿವ್ಯಾ ಉರುಡುಗ ಅರವಿಂದ್ ಮುಂದೆ ನಿಂತು ನಾನು ನಿಮ್ಮ ಬಾಯಿಯಷ್ಟು ಎತ್ತರ ಬರುತ್ತೇನೆ ಎಂದಾಗ, ಅರವಿಂದ್ ಇಲ್ಲ ನೀನು ಇನ್ನೂ ಕುಳ್ಳಗೆ ಇದ್ದೀಯಾ, ನನ್ನ ಕಿವಿ ಕೆಳಗೆ ಬರುತ್ತೀಯಾ ಎಂದು ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಇಲ್ಲ ನಾನು ನಿಮ್ಮ ಮೂಗಿನ ತನಕ ಬರುತ್ತೇನೆ ಎನ್ನುತ್ತಾ ಹೈಟ್ ನೋಡುತ್ತಾರೆ.
ಬಳಿಕ ನಾನು ನಿಮ್ಮ ಮುಂದೆ ನಿಂತಾಗ ನೀವು ತಲೆ ಎತ್ತಿತ್ತೀರಾ ಎಂದು ಹೇಳುತ್ತಾ ಮತ್ತೆ ನಿಲ್ಲುತ್ತಾರೆ. ಇಲ್ಲ ಈಗಲೂ ನೀನು ನನ್ನ ಅಪ್ಪರ್ ಲಿಪ್ಗಿಂತ ಕೆಳಗೆ ಬರುತ್ತೀಯಾ ಎಂದು ಅರವಿಂದ್ ದಿವ್ಯಾ ಜೊತೆ ವಾದ ಮಾಡುವಾಗ, ಸ್ಲಿಪರ್ ನೋಡಿ ಅಯ್ಯೋ ಕಾಲಿನಲ್ಲಿ ಹಿಲ್ಸ್ ಸ್ಲಿಪ್ಪರ್ ಹಾಕಿಕೊಂಡಿದ್ದೀಯಾ ಅದು ತೆಗೆ ಎಂದು ಹೇಳುತ್ತಾರೆ. ಇದಕ್ಕೆ ದಿವ್ಯಾ ನೀವು ಶೂ ಹಾಕಿಕೊಂಡಿದ್ದೀರಾ ನೀವು ತೆಗೆಯಿರಿ ಎಂದು ಇಬ್ಬರು ಸ್ಲಿಪ್ಪರ್ ಬಿಚ್ಚಿ ಹೈಟ್ ಚೆಕ್ ಮಾಡುತ್ತಾರೆ.
ಕೊನೆಗೆ ಸ್ಲಿಪ್ಪರ್ ಬಿಚ್ಚಿದಾಗ ದಿವ್ಯ ಉರುಡುಗ ಅರವಿಂದ್ ಅವರ ಬಾಯಿಯಿಂದ ಕೆಳಗೆ ಬರುತ್ತಾರೆ. ಆಗ ಅರವಿಂದ್ ಈಗ ನೀನು ನನ್ನ ಲೋವರ್ ಲಿಪ್ಗೆ ಬರುತ್ತೀಯಾ ಎಂದು ವಾದಿಸಿದರೆ, ದಿವ್ಯಾ ಇಲ್ಲ ನಾನು ಅದಕ್ಕಿಂತಲೂ ಮೇಲೆ ಬರುತ್ತೇನೆ ಎಂದು ವಾದಿಸಿದ್ದಾರೆ. ಒಟ್ಟಾರೆ ಮನೆಯಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿರುವ ಈ ಜೋಡಿ ನಿಜವಾಗಲು ಪ್ರೀತಿಸುತ್ತಿದ್ದಾರಾ.. ಇವರು ಸಹ ಬಿಗ್ ಬಾಸ್ ಮುಗಿದ ಮೇಲೆ ಚಂದನ್ ಶೆಟ್ಟಿ ನಿವೇದಿತಾ ಹಾಗೆ ಮದುವೆಯಾಗಲಿದಾರಾ ಅನ್ನೋ ಕುತೂಹಲ ಎಲ್ರಲ್ಲೂ ಮನೆ ಮಾಡಿದೆ.
BIGGBOSS 8 – 7ನೇ ವಾರ ಮನೆಯಿಂದ ಆಚೆ ಬಂದ ವಿಶ್ವ ಹೇಳಿದ್ದೇನು..?
BIGGBOSS 8 – 50 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರಬಂದ ವಿಶ್ವನಾಥ್..!
ಈ ಬಾರಿ ಬಿಗ್ ಬಾಸ್ ಗೆಲ್ಲುವ ಆ… ಸ್ಪರ್ಧಿ ಇವರೇ ನೋಡಿ..!
ರಾಜೀವ್ ಸಿಕ್ಕಿದೆ ಗೋಲ್ಡನ್ ಪಾಸ್ …. ನಾಮಿನೇಶನ್ ನಿಂದ ಬಚಾವಾಗೋಕೆ ಸುವರ್ಣಾವಕಾಶ..!








