ನಿಧಿ ಚರಿತ್ರೆ ಪ್ರಶ್ನಿಸಿದ ಸಂಬರಗಿ – ಕೊಚ್ಚೆ ಮೇಲೆ ಕಲ್ಲು ಹಾಕಬೇಡ ಎಂದು ನಿಧಿಗೆ ಸಮಾಧಾನ ಮಾಡಿದ ಮಂಜು..!
ಬೆಂಗಲೂರು : ಮನೆಯಲ್ಲಿ ಒಂದಲ್ಲಾ ಒಂದು ವಿಚಾರಗಳಿಗೆ ಆಗಾಗ ಸದಸ್ಯರ ನಡುವೆ ಜಗಳಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಜಗಳದ ನಡುವೆ ವಯಕ್ತಿಕ ವಿಚಾರಗಳನ್ನ ಎಳೆತಂದಿರುವಂತಹ ಪ್ರಸಂಗಗಳು ನಡೆದಿವೆ. ಅದ್ರಲ್ಲೂ ಹೆಚ್ಚು ಎಲ್ಲರ ವಿರುದ್ಧ ಸುಕಾ ಸುಮ್ಮನೆ ಅವರ ವಯಕ್ತಿಕ ವಿಚಾರಗಳ ತಂದು ಕಿಚ್ಚು ಹೊತ್ತಿಸುವ ಕೆಲಸ ಮಾಡೋದು ಪ್ರಶಾಂತ್ ಸಂಬರಗಿ.
ಹೌದು.. ಮಂಜು ದಿವ್ಯಾ ಸುರೇಶ್ ಸಂಬಂಧ ಬಗ್ಗೆ ಮಾತನಾಡಿ , ದಿವ್ಯಾ ಉರುಡುಗ – ಅರವಿಂದ್ ಗರ್ಲ್ ಫ್ರೆಂಡ್ ಎಂದೂ, ಮನೆ ಮಂದಿಯ ನಡುವೆ ಮೈಂಡ್ ಗೇಮ್ ಆಡುತ್ತಾ, ಡಬಲ್ ಗೇಮರ್ ಎನಿಸಿಕೊಂಡಿರುವ ಪ್ರಸಾಂತ್ ಸಂಬರಗಿ ಆಗಾಗ ಇಂತಹ ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಲ್ಲಿರೋದು ಹೆಚ್ಚು.. ಅಷ್ಟೇ ಅಲ್ಲ ಸಂಬರಗಿ ಸದಸ್ಯರ ಬಾಂಧವ್ಯದ ನಡುವೆ ಆಗಾಗ ಬಿರುಕು ಮೂಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಜೊತೆಗೆ ರಘು ಅವರು ಹಾಗೂ ಅವರ ಪೋಷಕರ ಕುರಿತಾಗಿ ವಯಕ್ತಿವಾಗಿ ಮಾತನಾಡಿ ಸದಸ್ಯರ ಕಣ್ಣಲ್ಲಿ ಕೆಳಗಿ ಬಿದ್ದಿದ್ದಾರೆ.
ಹೇಗೆ ಸಂಬರಗಿಯ ಮೇಲೆ ಪ್ರೇಕ್ಷಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೆಲ್ಲಾ ಮೀರಿ ಸಂಬರಗಿ ಮತ್ತೆ ತಮ್ಮ ಹಲೇ ಚಾಳಿಯನ್ನೇ ಮುಂದುವರೆಸಿ ಕೇವಲ ಒಂದು ಮೊಟ್ಟೆಯ ವಿಚಾರವಾಗಿ ನಿಧಿ ಸುಬ್ಬಯ್ಯ ಅವರು ಎಲ್ಲದ್ದಕ್ಕೂ ಮೇಲಾಗಿ ಒಬ್ಬ ಮಹಿಳಾ ಸ್ಪರ್ಧಿಯ ಜೊತೆಗೆ ಅವರ ವಯಕ್ತಿಕ ವಿಚಾರವನ್ನ ಎಳೆತಂದು ಜಗಳವಾಡಿ ತಮ್ಮ ವರ್ಚಸ್ಸನ್ನ ತಾವೇ ಕುಗ್ಗಿಸಿಕೊಂಡಿದ್ದಾರೆ.
ಗ್ಯಾಸ್ ಇಲ್ಲದ ಕಾರಣ ಓವನ್ ನಲ್ಲಿಯೇ ಮನೆ ಮಂದಿ ಮೊಟ್ಟೆ ಬೇಯಿಸಿಕೊಳ್ತಿದ್ದರು. ಪ್ರಶಾಂತ್ ಓವನ್ ನಲ್ಲಿ ಮೊಟ್ಟೆ ಬೇಯಿಸಿ ತಿಂದು, ಮತ್ತೆ ಮತ್ತೊಂದು ತೆಗೆದುಕೊಂಡಿದ್ದಕ್ಕೆ ನಿಧಿ ಬೇಸರ ಹೊರ ಹಾಕಿದರು. ಆದ್ರೆ ಕೋಪದಲ್ಲಿದ್ದ ಪ್ರಶಾಂತ್ ವೈಯಕ್ತಿಕ ವಿಚಾರಗಳನ್ನ ಎಳೆದು ತಂದಿ ತಾಯಿ ಪುಣ್ಯಾತಗಿತ್ತಿ, ಸುಮ್ಮನಿರಮ್ಮ, ನಿನ್ನ ಚರಿತ್ರೆ ಗೊತ್ತಿದೆ, ನಿನ್ನ ಸಂಸ್ಕoತಿ ಗೊತ್ತಿದೆ, ಹೇಳಬೇಕಾ ಹೇಳು ಹೇಳುತ್ತೇನೆ ಎಂದು ಪ್ರಶಾಂತ್ ಅವರು ನಿಧಿ ಸುಬ್ಬಯ್ಯಗೆ ಬೆದರಿಕೆ ಹಾಕಿದ್ದಾರೆ. ಆದ್ರೆ ಇದಕ್ಕೆ ಇಡೀ ಮನೆಯ ಸದಸ್ಯರು ಅಸಮಾಧಾನ ಹೊರ ಹಾಕಿದರು. ದಿವ್ಯಾ ಉರುಡುಗ, ರಾಜೀವ್, ಶುಭಾ, ಅರವಿಂದ್, ಚಕ್ರವರ್ತಿ ಎಲ್ಲ ಪ್ರಶಾಂತ್ ಸಂಬರಗಿ ಮೊಟ್ಟೆ ವಿಚಾರವನ್ನ ಮಾತಾಡಿ ಅಂತ ತಿಳಿ ಹೇಳಲು ಮುಂದಾದರು. ಇತ್ತ ಕಣ್ಣೀರು ಹಾಕುತ್ತಿದ್ದ ನಿಧಿಗೆ ಎಲ್ಲರೂ ಸಮಾಧಾನ ಹೇಳಿದರು.
ಈ ಘಟನೆ ನಡೆದ ಬಳಿಕವೂ ಗಾರ್ಡನ್ ಏರಿಯಾದಲ್ಲಿ ಮೊಟ್ಟೆ ವಿಷಯದ ಕುರಿತು ನಿಧಿ, ದಿವ್ಯಾ ಸುರೇಶ್ ಮತ್ತು ಮಂಜು ಮಾತನಾಡಿಕೊಳ್ಳುತ್ತಿದ್ದರು. ಯಾರೋ ಚೀಪ್ ಅಂದಾಕ್ಷಣ ನೀನು ಚೀಪ್ ಅಲ್ಲ. ನೋಡೋರಿಗೆ ಯಾರು ಚೀಪ್ ಅನ್ನೋದು ಗೊತ್ತಾಗುತ್ತೆ. ಕೊಚ್ಚೆ ಮೇಲೆ ಕಲ್ಲು ಯಾಕೆ ಹಾಕೋದು ಅಂತ ನಿಧಿಗೆ ಮಂಜು ಸಲಹೆ ನೀಡಿದರು.
BIGGBOSS 8 : ಈ ವಾರವೂ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ದರ್ಶನವಾಗಲ್ಲ..!