BIGGBOSS 8 : ನೀನಾ ನಾನಾ… ಅಂತ ಜಗಳಕ್ಕೆ ನಿಂತ ಕುಚುಕು ಗೆಳೆಯರು..!
ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..
ಮನೆಯ ಕುಚುಕು ಗೆಳೆಯರು ಎಂದೆನಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ಮತ್ತೆ ಚಕ್ರವರ್ತಿ ಚಂದ್ರಚೂಡ್ ನಡುವೆ ಬಿಗ್ ಫೈಟ್ ನಡೆದುಹೋಗಿದೆ. ಇವರು ಒಂದೇ ನಾಣ್ಯದ ಎರಡು ಮುಖಗಳೆಂದ ಒಂದೇ ವ್ಯಕ್ತಿತ್ವ ಗುಣ ಹೋಲುವ ಸ್ಪರ್ಧಿಗಳಾಗಿದ್ದರು.. ಹೌದು ಇವರಿಬ್ಬರ ಮಧ್ಯೆ ಟಾಸ್ಕ್ ವೇಳೆ ಜೋರಾದ ವಾಗ್ವಾದ ನಡೆದಿದೆ. ಇಷ್ಟು ದಿನ ಮನೆಯ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಈ ಜೋಡಿ, ಇದಿಗ ಪರಸ್ಪರ ಜಗಳಕ್ಕೆ ನಿಂತಿದ್ದಾರೆ.
ಎರಡು ತಂಡಗಳು ತಲಾ ಮೂರು ಸ್ಟಾರ್ ಪಡೆದ ಹಿನ್ನೆಲೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‍ಗಾಗಿ ಮನೆಯ ಸದಸ್ಯರಿಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದರು. ಡ್ರಮ್‍ನಲ್ಲಿ ತುಂಬಿಸಿದ್ದ ನೀರನ್ನು ಮಗ್‍ನಲ್ಲಿ ತುಂಬಿಸಿಕೊಂಡು ಹೋಗಿ ಕೊನೆಯಲ್ಲಿ ಇರಿಸಲಾಗಿರುವ ಜಾರ್‍ಗೆ ತುಂಬಿಸಬೇಕು ಎಂದು ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು.
ಈ ವೇಳೆ ಶಮಂತ್ ಆಟ ಆಡುವಾಗ ಫೌಲ್ ಆಗುತ್ತಾರೆ. ಇದರಿಂದ ಕೋಪಗೊಂಡ ಚಕ್ರವರ್ತಿ ಚಂದ್ರಚೂಡ್, ಶಮಂತ್ ಫೌಲ್ ಮಾಡಬೇಡ್ವೋ, ಫೌಲ್ ಮಾಡ್ಬೇಡಿ ಎಂದು ಕಿರುಚಾಡುತ್ತಾರೆ. ಇದರಿಂದ ರೊಚ್ಚಿಗೆದ್ದ ಪ್ರಶಾಂತ್ ಸಂಬರಗಿ ಬಜರ್ ಆದ ನಂತರ ಯಾಕೆ ಬೈಯ್ಯಬೇಕು ಎಂದು ಕಿಡಿಕಾರಿದ್ದಾರೆ.
ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ಬಿಡಿಸಿ ಸಮಾಧಾನಗೊಳಿಸಲು ಮಧ್ಯೆ ಬಂದ ಅರವಿಂದ್ ಗೂ ಕೇರ್ ಮಾಡದೇ ಚಕ್ರವರ್ತಿ ಚಂದ್ರಚೂಡ್ ಜಗಳ ಮುಂದುವರೆಸಿದ್ದಾರೆ. ಗೇಮ್ ಮುಗಿದ ನಂತರ ನನಗೆ ಬಂದು ಹೇಳಿದ್ದು ಇಷ್ಟ ಆಗಲಿಲ್ಲ ಎಂದು ಶಮಂತ್ ಹೇಳಿದ್ದಾರೆ.
ನಂತರ ಗುರುವಾರ ಬಿಗ್‍ಬಾಸ್ ನೀಡಿದ್ದ ನೆನಪಿರಲಿ ಟಾಸ್ಕ್ ವೇಳೆ ನೀವು ಮಾಡಿದ ಯಡವಟ್ಟಿನಿಂದ ನಾವು ಸೋತ್ತಿದ್ವಿ. ಆದರೆ ಯಾರು ಕೂಡ ಏನು ಮಾತನಾಡಲಿಲ್ಲ ಎಂದು ದಿವ್ಯಾ ಉರುಡುಗ ಹರಿಹಾಯ್ದಿದ್ದಾರೆ. ಈ ವೇಳೆ ಬಜರ್ ಆದ ನಂತರ ನಾನು ಸರಿಯಾಗಿ ಆಡಿದ್ದೇನೆ ಎಂದು ತೋರಿಸಿಕೊಳ್ಳುವುದು ಎಂದು ಪ್ರಶಾಂತ್ ಸಂಬರಗಿ ಚಕ್ರವರ್ತಿ ಚಂದ್ರಚೂಡ್ ಗೆ ಅಣುಕಿಸಿದ್ದಾರೆ.
BIGGBOSS 8 : ಗುಂಪುಗಾರಿಕೆ ವಿರುದ್ಧ ಬೇಸರ ವ್ಯಕ್ತಪಡಿಸಿದ ಬ್ರೋ ಗೌಡ..!
ಇದಕ್ಕೆ ರೊಚ್ಚಿಗೆದ್ದ ಚಕ್ರವರ್ತಿ ಬಜರ್ ಆದ ಮೆಲೆ ಅವನಿಗೆ ಹೇಳುತ್ತೇನೆ. ಏನು ಮಾಡುತ್ತಿಯಾ ತಿರುಗೇಟು ನೀಡಿದ್ದಾರೆ. ನಂತರ ಚಕ್ರವರ್ತಿಯವರನ್ನು ಸಮಾಧಾನಗೊಳಿಸಲು ಹೆಗಲ ಮೇಲೆ ಕೈ ಹಾಕಲು ಬಂದ ಪ್ರಶಾಂತ್ ಸಂಬರಗಿಯನ್ನು ಜೋರಾಗಿ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಸದಾ ಒಟ್ಟಾಗಿದ್ದು ಮನೆಯ ಇತರೇ ಸದಸ್ಯರ ಬಗ್ಗೆ ಕಮೆಂಟ್ ಪಾಸ್ ಮಾಡುತ್ತಾ ಇದ್ದ ಕುಚುಕು ಗೆಳೆಯರ ನಡುವೆ ಇದೀಗ ಗಲಾಟೆಯಾಗಿದ್ದು, ಮುಂದಿನ ದಿನಗಳಲ್ಲಿ ಫ್ರೆಂಡ್ ಶಿಪ್ ಮುಕ್ತಾಯಗೊಳ್ಳುತ್ತಾ ಇಲ್ಲ ಒಬ್ಬರಿಗೊಬ್ಬರು ಸಮಾಧಾನಮಾಡಿಕೊಂಡು ಮುಂದುವರೆಯಲಿದ್ದಾರಾ ಅನ್ನೋದನ್ನ ಕಾದು ನೋಡ್ಬೇಕಿದೆ..