BIGGBOSS 8 : ಗುಂಪುಗಾರಿಕೆ ವಿರುದ್ಧ ಬೇಸರ ವ್ಯಕ್ತಪಡಿಸಿದ ಬ್ರೋ ಗೌಡ..!
ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..
ಇದೀಗ ಗುಂಪುಗಾರಿಕೆ ಕಂಡು ಶಮಂತ್ ಬೇಸರ ವ್ಯಕ್ತಪಡಿಸಿದ್ದಾರೆ.. ಶಮಂತ್ ಮತ್ತು ರಘು ಈ ಬಗ್ಗೆ ಮಾತನಾಡಿಕೊಳ್ತಾ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಮನೆಯಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರು ಒಂದಿಷ್ಟು ಜನ ಇದ್ದಾರೆ. ಅದಕ್ಕಿಂತ ಕಡಿಮೆ ವಯಸ್ಸಿನವರು ಒಂದಿಷ್ಟು ಜನ ಇದ್ದೇವೆ. ನಾವು ಈ ಮನೆಯಲ್ಲಿರುವವರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಒಳ್ಳೆಯ ಭಾವನೆ ಬರುವಂತೆ ನೋಡಿಕೊಳ್ಳಬೇಕೆಂದು ಅನಿಸುತ್ತಿದೆ ಎಂದು ಶಮಂತ್ ಅವರು ರಘು ಬಳಿ ಹೇಳಿಕೊಂಡಿದ್ದಾರೆ.
ಈ ವೇದಿಕೆ ನಮಗೆ ತುಂಬಾ ದೊಡ್ಡದು. ನಾವು ಮೊದಲು ಇದ್ದಂತೆ ಈ ಮನೆಯಲ್ಲಿ ಇಲ್ಲ ತುಂಬಾ ಬದಲಾವಣೆಗಳು ಕಂಡು ಬರುತ್ತಿದೆ. ನಾವೆನಾ ಇಲ್ಲಿ ಇರೋದು ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಕಾಣಿಸುತ್ತಿದೆ. ಮನೆ ತುಂಬಾ ಖಾಲಿ, ಖಾಲಿ ಅನಿಸುತ್ತಿದೆ. ಅವರು ಇವರನ್ನು ಮಾತನಾಡಿಸುತ್ತಿಲ್ಲ. ಇವರು ಅವರನ್ನು ಮಾತನಾಡಿಸುತ್ತಿಲ್ಲ ಏನಿದು ಎಂದು ಶಮಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ರಘು ನಾನು ಯಾವ ಟೀಂ ಜೊತೆಗೂ ಗುರುತಿಸಿಕೊಂಡಿಲ್ಲ. ಟಾಸ್ಕ್ ಬಂದಾಗ ಟೀಂ ಓಕೆ ಅದನ್ನು ಹೊರತು ಪಡಿಸಿ ಗುಂಪುಗಾರಿಕೆ ಸರಿ ಅನಿಸಲಿಲ್ಲ. ನನಗೆ ಅರವಿಂದ್ ಅವರು ಮಾತನಾಡಿದ್ದು ಸರಿ ಅನಿಸಲಿಲ್ಲ ಅವರು ವೈಯಕ್ತಿಕ ವಿಚಾರವಾಗಿ ಮಾತನಾಡಬಾರದು ಎಂದಿದ್ದಾರೆ.