BIGGBOSS 8 – ‘ಗಂಡಸರನ್ನ ಕಂಡ್ರೆ ದಿವ್ಯಾ ಸುರೇಶ್ ಗೆ ವಾಕರಿಕೆ ಅಂತೆ’..! : ಸಂಬರಗಿ ಹೀಗೆ ಹೇಳಿದ್ಯಾಕೆ..?
ಬಿಗ್ ಬಾಸ್ ಆರಂಭದಲ್ಲೇ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದ ಬ್ರೋ ಗೌಡ ತನಗೆ ದಿವ್ಯಾ ಸುರೇಶ್ ಮೇಲೆ ಪ್ರೀತಿಯಾಗಿರೋದಾಗಿ ಹೇಳಿಕೊಂಡು ಟಾಕ್ ಆಫ್ ದ ಹೌಸ್ ಆಗಿದ್ರು. ಆದ್ರೆ ದಿವ್ಯಾ ಸುರೇಶ್ ಮಾತ್ರ ಇಡೀ ಮನೆಯಲ್ಲಿ ಪಾವಗಡ ಮಂಜು ಬಿಟ್ರೆ ಅಷ್ಟಾಗಿ ಯಾವ ಪುರುಷರ ಜೊತೆಗೂ ಹೆಚ್ಚಾಗಿ ಬೆರೆಯುವುದಿಲ್ಲ.
ಇದೇ ವಿಚಾರಕ್ಕೆ ಶಮಂತ್ ಬೇಸರಗೊಂಡಿದ್ಧಾರೆ. ಈ ಬಗ್ಗೆ ಪ್ರಶಾಂತ್ ಸಂಬರಗಿ ಬಗ್ಗೆಯೂ ಮಾತನಾಡಿದ್ಧಾರೆ. ಹೌದು ಸಂಬರಗಿ ಬಳಿ ಮಾತನಾಡಿರೋ ಶಮಂತ್ ನಾನು ಎಷ್ಟೇ ಪ್ರಯತ್ನ ಮಾಡಿದರೂ ದಿವ್ಯಾ ಜೊತೆ ಕನೆಕ್ಟ್ ಆಗಲು ಸಾಧ್ಯವಾಗುತ್ತಿಲ್ಲ. ಯಾಕೆ ಹೀಗಾಗುತ್ತಿರಬಹುದೆಂದು ಕೇಳಿದ್ದಾರೆ. ಆಗ ಪ್ರಶಾಂತ್ ಶಮಂತ್ ಗೆ ಕೆಲ ಸಲಹೆ ನೀಡೋ ಜೊತೆಗೆ ದಿವ್ಯಾ ಸುರೇಶ್ ಬಗ್ಗೆಯೂ ಕೆಲ ಕಮೆಂಟ್ ಪಾಸ್ ಮಾಡಿದ್ದಾರೆ. ದಿವ್ಯಾ ಜೀವನದ ಕೆಲ ಅನುಭವಗಳಿಂದ ಆಕೆಗೆ ಗಂಡಸರನ್ನು ಕಂಡರೆ ವಾಕರಿಕೆ ಅನ್ನಿಸುತ್ತೆ ಎಂದು ಸೀಕ್ರೆಟ್ ಆಗಿ ಕಡಿಮೆ ಧ್ವನಿಯಲ್ಲಿ ಹೇಳಿದ್ದಾರೆ.
ಅಲ್ಲದೇ ಶಮಂತ್ ಗೆ ದಿವ್ಯಾ ಜೊತೆ ಕನೆಕ್ಷನ್ ಬ್ಯುಲ್ಡ್ ಮಾಡಿಕೊಡಲು ಐಡಿಯಾ ಕೂಡ ಕೊಟ್ಟಿದ್ದಾರೆ. ಹೌದು ಶಮಂತ್ ಬಳಿ ಮಾತನಾಡಿರೋ ಪ್ರಶಾಂತ್ ನಿನಗೊಂದು ಸ್ಟ್ರಾಟಜಿ ಹೇಳಿಕೊಡ್ತೇನೆ, ನೀನು ದಿವ್ಯಾಗೆ ಕಾಳು ಹಾಕುತ್ತಿದ್ದೀಯ ಎಂಬುದನ್ನು ಮೊದಲು ತಲೆಯಿಂದ ತೆಗೆದುಬಿಡು. 2-3 ಸಲ ಹೋಗಿ ಸುಮ್ಮನೆ ಅವರ ಸಲಹೆ ಕೇಳು. ನೀನು ಅವಳಿಗೆ ಕಾಂಪಿಟೀಷನ್ ಕೊಡುತ್ತಿದ್ದೀಯ ಅಂತಾನೇ ಅವಳು ನಿನ್ನ ಮೇಲೆ ರೇಗಾಡೋದು. ಅವಳು ತುಂಬ ಸಫರ್ ಆಗಿ ಬಿಟ್ಟಿದ್ದಾಳೆ. ಗಂಡಸರನ್ನು ಕಂಡರೆ ವಾಕರಿಕೆ ಮಾಡುತ್ತಾಳೆ. ಅದು ಯಾವುದೇ ಗಂಡಸು ಆಗಿರಲಿ. ಅದನ್ನು ನೀನು ಅರ್ಥಮಾಡಿಕೋ. ಸ್ವಲ್ಪ ಗಟ್ಟಿಯಾಗಿ ಮಾತನಾಡು. ಸಾಫ್ಟ್ ಆಗಿ ಮಾತನಾಡಬೇಡ ಎಂದು ಶಮಂತ್ ಗೆ ಪ್ರಶಾಂತ್ ಐಡಿಯಾ ಕೊಟ್ಟಿದ್ದಾರೆ.