BIGGBOSS : “ಇದು ಅನಿರೀಕ್ಷಿತ , ಸಂತೋಷಕ್ಕೆ ಮಾತೇ ಬರುತ್ತಿಲ್ಲ” – ಶಮಂತ್
ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ಪರ್ಧಿಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ.. ಆರಂಭದಲ್ಲಿ ಸಖತ್ ಸೌಂಡ್ ಮಾಡಿದ್ದ ಶಮಂತ್ ನಂತರ ಸಿಕ್ಕಾಪಟ್ಟೆ ಸೈಲೆಂಟ್ ಆಗ್ಬಿಟ್ಟಿದ್ರು ಆಮೇಲೆ ಎಲಿಮಿನೇಟ್ ಆಗಿ ಅದೃಷ್ಟದಿಂದ ಮನೆಗೆ ವಾಪಸ್ ಬಂದ ಶಮಂತ್ ನಂತರದಿಂದ ಮತ್ತೆ ಆಕ್ಟೀವ್ ಆಗಿದ್ದಾರೆ..
ಇನ್ನೂ ಫೈನಲ್ಸ್ ಹತ್ರ ಆಗ್ತಿದ್ದಂತೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ಕೊಡುತ್ತಾ , ಸರ್ಪ್ರೈಸ್ ನೀಡ್ತಿದೆ.. ಇದೀಗ ಶಮಂತ್ ಅವರಿಗೂ ಒಂದು ಸರ್ಪ್ರೈಸ್ ನೀಡಿದ್ದು, ಶಮಂತ್ ಭಾವುಕರಾಗಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ವೇಕಪ್ ಸಾಂಗ್‍ಅ ನ್ನು ಪ್ರತಿನಿತ್ಯ ಬೆಳಗ್ಗೆ ಪ್ಲೇ ಮಾಡಲಾಗುತ್ತದೆ. ಈ ಹಿಂದೆ ಬಾ.. ಗುರು ಸಾಂಗ್ ಹಾಕುವಂತೆ ಶಮಂತ್ ಕೇಳಿಕೊಳ್ಳುತ್ತಿದ್ದರು. ಅದರಂತೆ ಬಿಗ್ ಬಾಸ್ ಹಾಡನ್ನು ಪ್ರಸಾರ ಮಾಡಿದ್ದರು. ಈ ಬಾರಿ ಮತ್ತೆ ಶಮಂತ್ ಅವರ ನಿರ್ದೇಶನದ ಸಾಂಗ್ ಹಾಡನ್ನು ಹಾಕಲಾಗಿದೆ. ಸಾಕಷ್ಟು ಹಾಡುಗಳನ್ನು ಬರೆದು ಶಮಂತ್ ಹಾಡಿದ್ದಾರೆ. ಶಮಂತ್ ಬಿಗ್‍ಬಾಸ್ ಮನೆ ಒಳಗೆ ಬರುವುದಕ್ಕೂ ಮೊದಲು ಕಣ್ಣೊಳಗೆ.. ವಿಡಿಯೋ ಸಾಂಗ್ ನಿರ್ದೇಶನ ಮಾಡಿ ಹಾಡಿದ್ದರು. ಬಿಗ್‍ಬಾಸ್ ಮನೆಯಲ್ಲಿ ಬೆಳಗ್ಗೆ ಈ ಹಾಡು ಮೊಳಗಿದೆ. ಇದನ್ನು ಕೇಳ್ತಿದ್ದಂತೆ ಶಮಂತ್ ಸ್ವಲ್ಪ ಭಾವುಕರಾಗಿದ್ದಾರೆ.
ಆನಂದ್ ಆಡಿಯೋ ಪಾಪ್ಯುಲರ್ ಯೂಟ್ಯೂಬ್ ಚಾನೆಲ್‍ನಲ್ಲಿ ಕಣ್ಣೊಳಗೆ..ಹಾಡು 2019ರಲ್ಲಿ ರಿಲೀಸ್ ಆಗಿತ್ತು. ಈ ಹಾಡು ಇಲ್ಲಿವರೆಗೆ 10 ಲಕ್ಷ ವೀಕ್ಷಣೆ ಕಂಡಿದೆ. ಬಿಗ್‍ಬಾಸ್‍ನಲ್ಲಿ ಶಮಂತ್ ಈ ಹಾಡನ್ನು ಸಾಕಷ್ಟು ಬಾರಿ ಹಾಡಿದ್ದರು. ಈ ಹಾಡು ಪ್ರಸಾರವಾಗುತ್ತಿದ್ದಂತೆ ನನ್ನದೇ ಹಾಡು ಎಂದು ಸಂತೋಷಪಟ್ಟಿದ್ದಾರೆ. ಬಿಗ್‍ಬಾಸ್ ತುಂಬಾ ಧನ್ಯವಾದಗಳು. ಈ ಸಾಂಗ್ ನೀವು ಹಾಕುತ್ತಿರುವುದು ಅನ್ಎಕ್ಸ್ಪೆಕ್ಟೆಡ್ ಆಗಿತ್ತು. ಸಂತೋಷಕ್ಕೆ ಮಾತೇ ಬರುತ್ತಿಲ್ಲ ಬಿಗ್‍ಬಾಸ್ ಎಂದು ಒಂದು ಕ್ಷಣ ಭಾವುಕರಾಗಿದ್ದಾರೆ.