BIGGBOSS 8 : 17 – 4 = 13 – ಮುಂದಿನ ಸರದಿ ಯಾರದ್ದು..? ಆತಂಕದಲ್ಲಿ ಲ್ಯಾಗ್ ಮಂಜು..!
ಬಿಗ್ ಬಾಸ್ 8 ನೇ ಆವೃತ್ತಿಯ 4 ವಾರುಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 5ನೇ ವಾರಕ್ಕೆ ಕಾಲಿಟ್ಟಿದೆ. 5 ನೇ ವಾರ ಎಲಿಮೇಶನ್ ಗೆ ನಾಮಿನೇಶನ್ ಪ್ರಕ್ರಿಯೆಯೂ ಮುಗಿದಿದ್ದು, 5 ನೇ ಮನೆಯಿಂದ ಆಚೆ ಯಾರು ಹೋಗಲಿದ್ದಾರೆ ಎಂಬ ಆತಂಕ ಗೊಂದಲಗಳು ಮನೆಮಂದಿಯನ್ನ ಕಾಡುತ್ತಿದೆ.
ಈ ನಡುವೆ 5ನೇ ವಾರದ ಎಲಿಮಿನೇಶನ್ ಸುತ್ತಿಗೆ ನಾಮಿನೇಶನ್ ಕೂಡ ನಡೆದಿದ್ದು, ನಿಧಿ ಸುಬ್ಬಯ್ಯ , ಅರವಿಂದ್, ಶುಭಾ ಪೂಂಜಾ, ಶಂಕರ್ ಅಶ್ವತ್ಥ್, ಪ್ರಶಾಂತ್ ಸಂಬರಗಿ ಡೇಂಜರ್ ಝೋನ್ ಗೆ ತಲುಪಿದ್ದು, ಯಾರು ಎಲಿಮಿನೇಟ್ ಆಗ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.
ಈ ನಡುವೆ ಮಂಜು ಪಾವಗಡ ಎಲಿಮಿನೇಶನ್ ಬಗ್ಗೆ ಆತಂಕ ಹೊರಹಾಕಿದ್ಧಾರೆ. ಅಂದ್ಹಾಗೆ ಈ ವಾರ ಮಂಜು ಡೇಂಜರ್ ಝೋನ್ ನಲ್ಲಿ ಇಲ್ಲ. ಈ ಬಾರಿ ಸೇಫ್ ಆದ ಮೊದಲ ಸ್ಪರ್ಧಿಯೇ ಮಂಜು.. ಆದ್ರೂ ಲ್ಯಾಗ್ ಮಂಜುಗೆ ಅವರಿಗೆ ಮನೆಯಿಂದ ಹೊರ ಹೋಗುವ ಆತಂಕ ಕಾಡಿದೆ.
ಹೌದು ನಾವು ಒಂದು ತಿಂಗಳು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದೇವೆ. ಹೀಗಾಗಿ, ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳ ಜತೆ ಒಂದು ಆಳವಾದ ಬಂಧ ಬೆಳೆದಿದೆ. ಈಗ ಮನೆಯಿಂದ ಹೊರ ಹೋಗುತ್ತಾರೆ ಎಂದರೆ ಖಂಡಿತವಾಗಿಯೂ ಬೇಸರ ಆಗಿಯೇ ಆಗುತ್ತದೆ ಎನ್ನುವ ಅಭಿಪ್ರಾಯವನ್ನು ಮಂಜು ವ್ಯಕ್ಯಪಡಿಸಿದ್ಧಾರೆ.
ಬಳಿಕ ಗಾರ್ಡನ್ ಏರಿಯಾಗೆ ಬಂದು ಈ ಮೌನ ನೋಡಿ ತುಂಬಾನೇ ಭಯ ಆಗುತ್ತಿದೆ. ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಬಾಗಿಲನ್ನು ನೋಡಿದರೇ ಭಯ ಆಗುತ್ತದೆ. ಆ ಡೋರ್ ಓಪನ್ ಆದರೆ ಸಾವಿನ ಕದ ತೆರೆದಂತಾಗುತ್ತದೆ ಎಂದು ಆತಂಕ ಹೊರ ಹಾಕಿದರು. ಅಲ್ಲದೆ, ನಾನು ಎಲಿಮಿನೇಟ್ ಆದರೆ, ಮನೆಯಿಂದ ಹೊರ ಹೋಗಲ್ಲ ಎಂದು ಕೂಡ ಹೇಳಿದ್ದಾರೆ.
ಅಂದ್ಹಾಗೆ ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ ಚೆನ್ನಪ್ಪ, 3ನೇ ವಾರ ಗೀತಾ ಭಾರತಿ ಭಟ್, 4ನೇ ವಾರ ಚಂದ್ರಕಲಾ ಮೋಹನ್ ಅವರು ಹೊರಗಡೆ ಹೋಗಿದ್ದಾರೆ.
BIGGBOSS 8 – ಡೇಂಜರ್ ಝೋನ್ ನಲ್ಲಿ ಐವರು ಸದಸ್ಯರು… 5ನೇ ವಾರ ಮನೆಯಿಂದ ಆಚೆ ಹೋಗೋದ್ಯಾರು..!