BiggBoss Kannada 9 : ರೂಪೇಶ್ ವಿನ್ನರ್ , ರಾಕೆಶ್ ಗೆ ಕೈಕೊಟ್ಟ ಅದೃಷ್ಟ – ಸಿಕ್ಕ ಹಣವೆಷ್ಟು..??
ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ.. ಆದ್ರೆ ಇತ್ತ ರಾಕೇಶ್ ಆಡಿಗ ರೂಪೇಶ್ ಶೆಟ್ಟಿ ಪ್ರಬಲ ಕಾಂಪಿಟೇಟರ್ ಆಗಿದ್ದರು.. ರಾಕೇಶ್ ವಿನ್ ಆಗ್ತಾರೆ ಅಂತಲೇ ಬಹುತೇಕರು ನಿರೀಕ್ಷೆ ಮಾಡಿದ್ದರು.. ಆದ್ರೆ ಫಸ್ಟ್ ರನ್ನರ್ ಅಪ್ ಆಗಿ ರಾಕೇಶ್ ಹೊರಹೊಮ್ಮಿದ್ದಾರೆ..
ಸದ್ಯ ರೂಪೇಶ್ ಗೆ ವಿನ್ನರ್ ಟ್ರೋಫಿ ಜೊತೆಗೆ 50 ಲಕ್ಷ ಬಹುಮಾನ ಸಿಕ್ಕಿದೆ.. ಇದರ ಹೊರತಾಗಿ ಸ್ಪಾನ್ಸರ್ ಕಡೆಯಿಂದ 10 ಲಕ್ಷ ಚೆಕ್ ಸಿಕ್ಕಿದೆ..
ನೂರು ದಿನದಲ್ಲಿ ಕೇವಲ ಒಂದು ಬಾರಿಯಷ್ಟೆ ಮನೆಯವರಿಂದ ನಾಮಿನೇಟ್ ಆಗಿದ್ದ ರಾಕೇಶ್ ಅಡಿಗ ಅವರೇ ಬಿಗ್‌ಬಾಸ್ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ಅದು ಸುಳ್ಳಾಗಿ ರೂಪೇಶ್ ಶೆಟ್ಟಿ ಗೆದ್ದಿದ್ದಾರೆ. ರೂಪೇಶ್ ಗೆ 60 ಲಕ್ಷ ರುಪಾಯಿ ಬಹುಮಾನ ನೀಡಲಾಗಿದೆ.
ರಾಕೇಶ್ ಅಡಿಗಗೆ ಆಯೋಜಕರ ಕಡೆಯಿಂದ ಏಳು ಲಕ್ಷ ರುಪಾಯಿ ಬಹುಮಾನ ಲಭಿಸಿದೆ. ಅದಾದ ಬಳಿಕ ಫಿನೊಲೆಕ್ಸ್ ಅತ್ಯತ್ತಮ ನಾಯಕ ಪ್ರಶಸ್ತಿ ಸಹ ರಾಕೇಶ್ ಅಡಿಗ ಪಾಲಾಗಿದ್ದು, ಫಿನೋಲೆಕ್ಸ್‌ನವರು ಐದು ಲಕ್ಷ ರುಪಾಯಿ ಬಹುಮಾನವನ್ನು ರಾಕೇಶ್ ಅಡಿಗಗೆ ನೀಡಿದ್ದಾರೆ.
ಇನ್ನು ಮೂರನೇ ಸ್ಥಾನ ಪಡೆದ ದೀಪಿಕಾ ದಾಸ್ ಗೆ ಐದು ಲಕ್ಷ ರುಪಾಯಿ ಬಹುಮಾನ ನೀಡಲಾಗಿದೆ..
ನಾಲ್ಕನೇ ಸ್ಥಾನ ಪಡೆದ ರೂಪೇಶ್ ರಾಜಣ್ಣ ಅವರಿಗೆ ಮೂರು ಲಕ್ಷ ರುಪಾಯಿ ಬಹುಮಾನ ಸಿಕ್ಕಿದೆ.
ರಾಕೇಶ್ ಅಡಿಗ, ಒಟಿಟಿ ಸೀಸನ್ ನಲ್ಲಿಯೇ ಗೆಲ್ಲಬೇಕಿತ್ತು ಆದರೆ ಅಲ್ಲಿಯೂ ಕೊನೆಗೆ ಬಂದು ಎಡವಿದರು. ಅಲ್ಲಿ ಚಾಂಪಿಯನ್ ಪಟ್ಟ ರೂಪೇಶ್ ಶೆಟ್ಟಿ ಪಾಲಾಗಿ ಅವರಿಗೆ ಐದು ಲಕ್ಷ ರುಪಾಯಿ ಬಹುಮಾನ ಸಿಕ್ಕಿತ್ತು..
ರಾಕೇಶ್ ಅಡಿಗ ಟಿವಿ ಸೀಸನ್ ನಲ್ಲಿ ಅರಂಭದಿಂದಲೂ ಬಹಳ ಚೆನ್ನಾಗ ಆಡಿದರು. ಮನೆಯವರಿಂದ ಕೇವಲ ಒಂದು ಬಾರಿ ಮಾತ್ರ ನಾಮಿನೇಟ್ ಆಗಿದ್ದರು. ಈ ಬಾರಿ ರಾಕೇಶ್ ಅವರೇ ಗೆಲ್ಲುತ್ತಾರೆ ಎನ್ನಲಾಗಿತ್ತು.. ಆದ್ರೆ ಎಲ್ಲರ ನಿರೀಕ್ಷೆ ಹುಸಿಯಾಗಿದೆ..