Bihar
ಬಿಹಾರ: ಬಿಹಾರ ವಿಧಾನಸಭಾ ಚುನಾವಣಾ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದೆ. ಕ್ಷಣಕ್ಷಣಕ್ಕೂ ಏರಿಳಿತಗಳಾಗ್ತಿದ್ದು, ಕುತೂಹಲವನ್ನ ಹೆಚ್ಚಿಸುತ್ತಲೇ ಇದೆ. ಮುಂಜಾನೆಯಿಂದ ಮುಂಚೂಣಿಯಲ್ಲಿದ್ದ ಮಹಾಘಟಬಂಧನ ಧೀಡೀರ್ ಕುಸಿದಿದೆ. ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮುಂದುವರೆದಿದ್ದು, ಆರಂಭದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದ ಮಹಾಘಟಬಂಧನ್ ಗೆ ಇದೀಗ ಹಿನ್ನಡೆ ಉಂಟಾಗಿದೆ. ಆರಂಭದಲ್ಲಿ RJD ನಾಯಕ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ಶತಕ ಗಳಿಸಿ ಮುನ್ನಡೆ ಕಾಯ್ದುಕೊಂಡಿದ್ದು, ನಂತರದಲ್ಲಿ ದಿಢೀರ್ ಕುಸಿತ ಕಂಡಿದೆ. ಇನ್ನು ಮತ ಎಣಿಕೆ ಮುಂದುವರೆದಿದ್ದು, ಪೂರ್ಣ ಫಲಿತಾಂಶ ಪ್ರಕಟವಾಗಲು ಮಧ್ಯಾಹ್ನದವರೆಗೆ ಕಾಯಬೇಕಿದೆ. NDA 119, ಮಹಾಘಟಬಂಧನ್ ಮೈತ್ರಿಕೂಟ 114 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, LJP 6 ಹಾಗೂ ಇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದಾರೆ. 243 ಸದಸ್ಯಬಲದ ಬಿಹಾರದಲ್ಲಿ 122 ಮ್ಯಾಜಿಕ್ ನಂಬರ್ ಆಗಿದೆ.
Bihar
‘ದೀದಿಗೆ ಬೆಂಬಲಿಸಿದ್ರೆ ಕೈಕಾಲು ಕಳೆದುಕೊಳ್ತೀರಾ ಹುಷಾರ್’ : ಬಿಜೆಪಿ ನಾಯಕ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel