Bihar : ಅಪ್ರಾಪ್ತ ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಕ್ರೂರಿ….
ಗರ್ಭಿಣಿಯಾಗಿದ್ದ ಅಪ್ರಾಪ್ತ ಯುವತಿ ಮದುವೆಯಾಗುವಂತೆ ಪ್ರಿಯಕರನನ್ನ ಒತ್ತಾಯಿಸಿದ್ದಕ್ಕೆ ಪ್ರಿಯಕರ ಗೆಳತಿಯನ್ನ ಬೆಂಕಿ ಹಚ್ಚಿ ಕೊಂದಿರುವ ಘಟನೆ ಬಿಹಾರದ ರಜೌಲಿಯಲ್ಲಿ ನಡೆದಿದೆ. ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ನಾಲ್ವರ ಮೇಲೆ ಎಫ್ ಐ ಆರ್ ದಾಖಲಿಸಲಾಸಗಿದೆ.
ಯವತಿ ಗರ್ಭಿಣಿಯಾಗಿದ್ದರಿಂದ ಸಿಟ್ಟಿಗೆದ್ದ ಯವಕ ಸಿಟ್ಟಿಗೆದ್ದು ನಾಲ್ಕು ದಿನಗಳ ಹಿಂದೆ ಕೊಲೆ ಮಾಡಿದ್ದಾನೆ. ಯುವಕನ ಪೋಷಕರು ಅಪ್ರಾಪ್ತ ಯುವತಿಯ ಪೋಷಕರನ್ನ ಬೆದರಿಸಿ ಗೃಹ ಬಂಧನದಲ್ಲಿ ಇರಿಸಿದ್ದಾರೆ. ಬಾಲಕಿಯ ಪೋಷಕರು ಅನಾರೋಗದ ಕಾರಣ ನೀಡಿ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಬಾಲಕಿ ಮತ್ತು ಅದೇ ಗ್ರಾಮದ ಯುವಕ ಪರಸ್ಪರ ಪ್ರತಿಸುತ್ತಿದ್ದ ವಿಷಯ ಪೋಷಕರಿಗೆ ತಿಳಿದಿರಲಿಲ್ಲ. ಗರ್ಭಿಣಿಯಾದ ನಂತರ ಪೋಷಕರಿಗೆ ಈ ವಿಷಯ ತಿಳಿದು ಬಂದಿದೆ. ಯವತಿ ಹುಡುಗನನ್ನ ಮದುವೆಯಾಗುವಂತೆ ಒತ್ತಡ ಏರಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ನಂತರ ಯುವಕ ಯುವತಿಗೆ ಬೆಂಕಿ ಹಚ್ಚಿ ಕೊಲೆಮಾಡಿದ್ದಾನೆ. ನಂತರ ತಾರತುರಿಯಲ್ಲಿ ಶವವನ್ನ ಸುಟ್ಟು ಹಾಕಿ ಹುಡುಗಿಯ ಕುಟುಂಬಸ್ಥರಿಗೆ ಬೆದರಿಕೆ ಹಾಕಿ ಗೃಹ ಬಂಧನದಲ್ಲಿ ಇರಿಸಿದ್ದಾರೆ.
ಹುಡುಗಿಯ ಪೊಷಕರು ತಪ್ಪಿಸಿಕೊಂಡು ಬಂದು ಪೊಲೀಸರ ಬಳಿ ತೆರಳಿ ಲಿಖಿತ ದೂರು ದಾಖಲಿಸಿದ್ದಾರೆ. ಅದೇ ಗ್ರಾಮದ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
Bihar: Cruelty who set fire to a pregnant minor and killed her.