bihar
ಬಿಹಾರ: ಬಿಹಾರದಲ್ಲಿ ನಡೆದ ವಿಧಾನಸಬಾ ಚುನಾವಣೆಯಲ್ಲಿ ಎನ್ ಡಿಎ ಭರ್ಜರಿಯಾಗಿ ಗೆದ್ದಿದೆ. ಅದ್ರಲ್ಲೂ ಎನ್ ಡಿಎನಲ್ಲಿ ಜೆಡಿಯುಗಿಂತಲೂ ಬಿಜೆಪಿಗೆ ಹೆಚ್ಚು ಮತಗಳು ಬಿದ್ದಿವೆ. ಹೀಗಾಗಿ ಸತತ 15 ವರ್ಷಗಳ ಕಾಲ ಸಿಎಂ ಆಗಿದ್ದ ನಿತೀಶ್ ಕುಮಾರ್ ಅವರೇ ಸಿಎಂ ಸ್ಥಾನದಲ್ಲಿ ಮುಂದುವರೆಯಲಿದ್ದಾರಾ, ಅಥವ ಬಿಜೆಪಿಯಿಂದ ಸಿಎಂ ಸ್ಥಾನ ಅಲಂಕರಿಸಲಿದ್ದಾರಾ ಎಂಬ ಚರ್ಚೆಗಳು ಪ್ರಾರಂಭವಾಗಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ಬಿಹಾರದ ಮುಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಆಗಲಿದ್ದಾರೆ, ಬಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಶೀಲ್ ಮೋದಿ ಅವರು, ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಇದು ನಮ್ಮ ಬದ್ಧತೆಯೂ ಕೂಡ ಹೌದು, ಇದರಲ್ಲಿ ಗೊಂದಲವಿಲ್ಲ. ಯಾರೇ ಹೆಚ್ಚು ಗೆಲ್ಲಲಿ ಅಥವಾ ಯಾರೇ ಕಡಿಮೆ ಗೆಲ್ಲಲಿ ಅದು ಮುಖ್ಯವಲ್ಲ, ನಾವು ಪಾಲುದಾರರಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಬಿಹಾರ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಸಾಧಿಸಿದ್ದು, 243 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 74 ರಲ್ಲಿ ಗೆಲುವು ಸಾಧಿಸಿದೆ, ಜೆಡಿಯು 43ಸ್ಥಾನಗಳಲ್ಲಿ ಜಯ ಗಳಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಬಿಜೆಪಿಯೇ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವುದರಿಂದ ಸಹಜವಾಗಿಯೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇಳಿಬರುತ್ತಿದೆ.
ಸಾಲು ಸಾಲು ಸೋಲುಗಳಿಂದ ಬೇಸತ್ತ ‘ರಾಗಾ’ ಮರಳು ದಿಬ್ಬಕ್ಕೆ ಪಯಣ..!
ಜಾತಿ ರಾಜಕಾರಣ ಮಾಡುವವರಿಗೆ ಉಪಚುನಾವಣೆ ಪಾಠ; ಬಿ.ಸಿ.ಪಾಟೀಲ್
bihar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel