ದೆಹಲಿ: ನೇಮಕಾತಿ ಪರೀಕ್ಷೆಗಳಲ್ಲಿ ಪರೀಕ್ಷಾ ಪತ್ರಿಕೆಗಳ ಸೋರಿಕೆಯಂತಹ ಅಕ್ರಮ ತಡೆಯುವ ‘ವಂಚನೆ ವಿರೋಧಿ’ (Anti-cheating’ bill)ಮಸೂದೆಯನ್ನು ಲೋಕಸಭೆ (Loksabha) ಅಂಗೀಕರಿಸಿದೆ.
ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಮಸೂದೆಯನ್ನು ಈಗ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗೀಕಾರವಾದ ನಂತರ ಕಾನೂನಾಗುವ ಮೊದಲು ಒಪ್ಪಿಗೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು (ಅಂದರೆ, ಅವರು ಚೀಟಿಂಗ್ ಮಾಡಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುವುದಿಲ್ಲ) ಗುರಿಯಾಗುವುದಿಲ್ಲ. ಅಧಿಕಾರಿಗಳೊಂದಿಗೆ ಶಾಮೀಲಾಗಿ ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡುವವರು ಅಥವಾ ಉತ್ತರ ಪತ್ರಿಕೆಗಳನ್ನು ತಿರುಚುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ.
ಎಲ್ಲಾ ಅಪರಾಧಗಳು ಕಾಗ್ನಿಸಬಲ್, ಜಾಮೀನು ರಹಿತ ಮತ್ತು ರಾಜಿ ಮೂಲಕ ಪರಿಹರಿಸುವ ಪ್ರಕರಣಗಳಲ್ಲ. ಅಂದರೆ ಪೊಲೀಸರಿಗೆ ಸ್ವಂತವಾಗಿ ಕಾರ್ಯನಿರ್ವಹಿಸಲು (ಮತ್ತು ವಾರಂಟ್ ಇಲ್ಲದೆ ಶಂಕಿತರನ್ನು ಬಂಧಿಸಲು) ಅಧಿಕಾರ ನೀಡಲಾಗುತ್ತದೆ. ಜಾಮೀನಿಗೆ ಆರೋಪಿ ಅರ್ಹನಾಗಿರುವುದಿಲ್ಲ. ಈ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗುವುದಿಲ್ಲ.