ಬಿಲಿಯನೇರ್ ಬಿಆರ್ ಶೆಟ್ಟಿ ಅವರ ಆಸ್ತಿ ಜಪ್ತಿಗೆ ‘ಯುಕೆ ಕೋರ್ಟ್ ಆದೇಶ’
ಲಂಡನ್ : NMC ಹೆಲ್ತ್ ನ ಸಂಸ್ಥಾಪಕ ಬಿ.ಆರ್.ಶೆಟ್ಟಿಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಯುಕೆಯ ನ್ಯಾಯಾಲಯವು ಆದೇಶ ನೀಡಿದೆ. NMC ಹೆಲ್ತ್ ಕೇರ್ನ ಮಾಜಿ ಮಾಲೀಕರಾಗಿರುವ ಬಿ.ಆರ್ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್ ಮುಹೈರಿ ಹಾಗೂ ಸಯೀದ್ ಅಲ್ ಖುಬೈಸಿ, ಮಾಜಿ ಕಾರ್ಯ ನಿರ್ವಾಹಕ ಪ್ರಶಾಂತ್ ಮಂಗತ್ ಮತ್ತು ಇನ್ನಿಬ್ಬರು ಹಿರಿಯ ಅಧಿಕಾರಿಗಳ ಆಸ್ತಿಗಳ ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶಿಸಿದೆ. ಲಂಡನ್ ನ್ಯಾಯಾಲಯದ ಆದೇಶದ ಮೇರೆಗೆ ಕೇರಳ ಸಹಿತ, ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಬಿ.ಆರ್ ಶೆಟ್ಟಿಗೆ ಸೇರಿದ ಆಸ್ತಿ ಬ್ಯಾಂಕ್ ಮುಟ್ಟು ಹಾಕಿಕೊಳ್ಳಲಿದೆ.
‘ತಾಕತ್ತಿದ್ರೆ ಗುಜರಾತ್ ನಿಂದ ಗೆದ್ದು ತೋರಿಸಿ – ಆಮೇಲೆ ಚಹಾದ ಮಾಲೀಕರ ಬಗ್ಗೆ ಮಾತನಾಡಿ’ – ಸ್ಮೃತಿ ಇರಾನಿ..!
ಅಬು ದಾಬಿ ಕಾರ್ಪರೇಟ್ ಬ್ಯಾಂಕ್ ನಿಂದ ಕಂಪನಿ 1 ಬಿಲಿಯನ್ ಡಾಲರ್ ಸಾಲ ಪಡೆದುಕೊಂಡು ತೀರಿಸದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಬ್ಯಾಂಕ್ ಕೇಸ್ ಹಾಕಿತ್ತು. ಇದರ ವಿಚಾರಣೆ ನಡೆಸಿರುವ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಇದರಂತೆ ವಿಶ್ವದ ಹಲವೆಡೆ ಇವರಿಗೆ ಸೇರಿದ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಮುಂದಾಗಿದೆ.