ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಬಿಜೆಪಿ ಸಿಂಧಿಯಾರನ್ನು ಗೃಹ ಸಚಿವರನ್ನಾಗಿ ಅಥವಾ ಹಣಕಾಸು ಸಚಿವರನ್ನಾಗಿ ಮಾಡಲಿ – ದಿಗ್ವಿಜಯ ಸಿಂಗ್

admin by admin
March 13, 2020
in International, Politics
Share on FacebookShare on TwitterShare on WhatsappShare on Telegram
ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾರನ್ನು ಗೃಹ ಸಚಿವರನ್ನಾಗಿ ಅಥವಾ ಹಣಕಾಸು ಸಚಿವರನ್ನಾಗಿ ಮಾಡಲಿ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್  ಸಂದರ್ಶನವೊಂದರಲ್ಲಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾಗೆ ಡಿಸಿಎಂ ಹುದ್ದೆಯ ಅಫರ್ ನೀಡಲಾಗಿತ್ತು, ಆದರೆ ಅವರು ಆ ಹುದ್ದೆಗೆ ತಮ್ಮ ಚೇಲಾರೊಬ್ಬರ ಹೆಸರು ಸೂಚಿಸಿದ ಕಾರಣ ಸಿಎಂ ಕಮಲ್ ನಾಥ್ ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದ್ದಾರೆ.
‘ಪಿಟಿಇ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾದ ಪಕ್ಷದ ಒಳ ವಿಚಾರಗಳನ್ನು ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ 2018ರ ಚುನಾವಣೆಯ ಗೆಲುವಿನ ನಂತರ ಮುಖ್ಯಮಂತ್ರಿ ಕಮಲ್​​ನಾಥ್​​ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಉಪಮುಖ್ಯಮಂತ್ರಿ ಹುದ್ದೆಯ ಆಫರ್ ನೀಡಿತ್ತು. ಆದರೆ ಸಿಂಧಿಯಾ ತಾನು
ಸೂಚಿಸುವ ವ್ಯಕ್ತಿಯನ್ನು ಡಿಸಿಎಂ ಮಾಡಲು ಬೇಡಿಕೆ ಇಟ್ಟರು. ಇದಕ್ಕೆ ಸಿಎಂ ಕಮಲ್​​ ನಾಥ್​​ ಆಕ್ಷೇಪ ವ್ಯಕ್ತಪಡಿಸಿದರು. ನಾಯಕರೊಬ್ಬರ ‘ಚೇಲಾ’ ಆಗಿರುವ ವ್ಯಕ್ತಿ ಆ ಸ್ಥಾನದಲ್ಲಿ ‌ಕುಳಿತುಕೊಳ್ಳುವುದು ಕಮಲ್ ನಾಥ್ ಗೆ ಇಷ್ಟವಿರಲಿಲ್ಲ. ಇದರಿಂದ ‌ಕುಪಿತಗೊಂಡು ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ ಎಂದು ಆರೋಪಿಸಿದ ದಿಗ್ವಿಜಯ್ ಸಿಂಗ್ ಸಿಂಧಿಯಾ ಪ್ರಸಂಗವೆಲ್ಲವೂ ಮೊದಲೇ ರೂಪಿಸಿದ ಯೋಜನೆಯಂತೆ ನಡೆದಿದೆ ಎಂದು ಸಿಂಧಿಯಾ ಮೇಲೆ ಕಿಡಿಕಾರಿದರು.

Advt
ಜಾಹಿರಾತು

ಬಿಜೆಪಿ, ಜ್ಯೋತಿರಾದಿತ್ಯ ಸಿಂಧಿಯಾ ಸಮರ್ಥ ನಾಯಕನೆಂದು ಪಕ್ಷಕ್ಕೆ ಸೇರಿಸಿಕೊಂಡಿದೆ.‌ ಹಾಗಾಗಿ ಸಿಂಧಿಯಾರನ್ನು ಗೃಹ ಸಚಿವರನ್ನಾಗಿ ಅಥವಾ ಹಣಕಾಸು ಸಚಿವರನ್ನಾಗಿ ಮಾಡಲಿ ಎಂದು ವ್ಯಂಗ್ಯವಾಡಿದರು.

Related posts

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

July 19, 2026
ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ  ಮಾಗಡಿ ಬಾಲಕೃಷ್ಣ

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ ಮಾಗಡಿ ಬಾಲಕೃಷ್ಣ

July 19, 2026

ಸಿಂಧಿಯಾ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕತ್ವಕ್ಕೆ ರಾಜೀನಾಮೆ ನೀಡಿರುವ 22 ಮಂದಿ ಶಾಸಕರ ಪೈಕಿ 13 ಶಾಸಕರು ಕಾಂಗ್ರೆಸ್ ಪಕ್ಷ ಬಿಡಲು ತಯಾರಿಲ್ಲ. ಸಿಂಧಿಯಾ ಅವರಿಗೆ ರಾಜ್ಯ ಸಭಾ ಟಿಕೆಟ್ ‌ಕೊಡುವ ಉದ್ದೇಶದಿಂದ ಪಕ್ಷದ ಮೇಲೆ ಒತ್ತಡ ಹೇರಲು ಅವರು ರಾಜೀನಾಮೆ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ದ್ರೋಹ ಬಗೆಯುವುದಿಲ್ಲ ಎಂದಿದ್ದಾರೆ ಎಂದ ದಿಗ್ವಿಜಯ್ ಸಿಂಗ್ ವಿಶ್ವಾಸಮತ ಯಾಚನೆಯಲ್ಲಿ ಕಮಲ್​​ನಾಥ್​​ ಸರ್ಕಾರ ಬಹುಮತ ಸಾಬೀತು ಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಧ್ಯಪ್ರದೇಶದಲ್ಲಿ ಮಾಜಿ ಕಾಂಗ್ರೆಸ್ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 22 ಶಾಸಕರು ರಾಜೀನಾಮೆ ನೀಡಿದ ಕಾರಣ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಯಾವಾಗ ಬೇಕಾದರೂ ಸರ್ಕಾರ ಬೀಳುವ ಸಾಧ್ಯತೆ ಇದೆ.
ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ. ಇದರೊಂದಿಗೆ ಕಾಂಗ್ರೆಸ್​ನೊಂದಿಗೆ ಎರಡು ದಶಕಗಳ ನಂಟನ್ನು ಸಿಂಧಿಯಾ ಕಡಿದುಕೊಂಡಿದ್ದಾರೆ.

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ವಕ್ಷೇತ್ರ ಗ್ವಾಲಿಯರ್ ನ ಜನತೆಯಲ್ಲಿ ಕೆಲವರು, ಕಾಂಗ್ರೆಸ್ ಪಕ್ಷದ ನಿರ್ಲಕ್ಷತೆಯಿಂದ ಬೇಸತ್ತು ಸಿಂಧಿಯಾ ಸೇರಿದ್ದಾರೆ, ಅದು ಸರಿಯಾದ ನಿರ್ಧಾರ ಎಂದು ಹೇಳಿದ್ದರೆ, ಇನ್ನೂ ಕೆಲವರು ಕಾಂಗ್ರೆಸ್ ನಲ್ಲೇ ನೆಲೆ ಕಾಣಲು ಸಾಧ್ಯವಾಗದವರು ಬಿಜೆಪಿಯಲ್ಲಿ ನೆಲೆ ಕಾಣುವರೇ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

Tags: AMITH SHAHBJPCongressDigvijay SinghJyotiraditya Scindia
ShareTweetSendShare
Join us on:

Related Posts

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

ಡಿಕೆಶಿ ಸೈಲೆಂಟ್ ಸ್ಕೆಚ್ ಗೆ ಕುಮಾರಸ್ವಾಮಿ ಕುಟುಂಬ ಕಂಗಾಲು -ದಳಪತಿಗಳ ಕೋಟೆಗೆ ಲಗ್ಗೆ ಇಟ್ಟ ಬಿಡದಿ ಟೌನ್ ಶಿಪ್:ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಜಮೀನು ವಶಕ್ಕೆ ಹೊರಬಿದ್ದಿತು ಸರ್ಕಾರದ ಅಂತಿಮ ನೋಟಿಸ್

by Shwetha
July 19, 2026
0

ಬಿಡದಿ ಟೌನ್ ಶಿಪ್ ಜಟಾಪಟಿ ಈಗ ನೇರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬದ ಮನೆ ಬಾಗಿಲಿಗೆ ಬಂದು ತಲುಪಿದೆ. ರಾಜ್ಯ ಸರ್ಕಾರ ರೂಪಿಸಿರುವ...

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ  ಮಾಗಡಿ ಬಾಲಕೃಷ್ಣ

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ ಮಾಗಡಿ ಬಾಲಕೃಷ್ಣ

by Shwetha
July 19, 2026
0

ಬಿಡದಿ ಉಪನಗರ ಯೋಜನೆಯ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಈಗ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಮಾಗಡಿಯ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿಗಳಾದ...

ಮೈತ್ರಿಯಲ್ಲಿ ಮಹಾ ಬಿರುಕು!: ಮೈತ್ರಿ ಹಳಿ ತಪ್ಪಿತಾ? ಕಮಲ ನಾಯಕರಿಗೆ ಶಾಕ್ ನೀಡಿದ ದಳಪತಿಗಳ ಏಕಾಂಗಿ ಬಿಡದಿ ಪಾದಯಾತ್ರೆ

ಮೈತ್ರಿಯಲ್ಲಿ ಮಹಾ ಬಿರುಕು!: ಮೈತ್ರಿ ಹಳಿ ತಪ್ಪಿತಾ? ಕಮಲ ನಾಯಕರಿಗೆ ಶಾಕ್ ನೀಡಿದ ದಳಪತಿಗಳ ಏಕಾಂಗಿ ಬಿಡದಿ ಪಾದಯಾತ್ರೆ

by Shwetha
July 19, 2026
0

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಬಿಡದಿ ಟೌನ್ ಶಿಪ್ ಯೋಜನೆಯ ವಿರುದ್ಧದ ಹೋರಾಟದಲ್ಲಿ...

ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸೋನಮ್ ವಾಂಗ್ ಚುಕ್ ಅವರನ್ನೇ ದೇಶದ ಶಿಕ್ಷಣ ಸಚಿವರನ್ನಾಗಿ ಮಾಡಿ  :ಜಂತರ್ ಮಂತರ್ ನಲ್ಲಿ ಗುಡುಗಿದ ಕೇಜ್ರಿವಾಲ್

ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸೋನಮ್ ವಾಂಗ್ ಚುಕ್ ಅವರನ್ನೇ ದೇಶದ ಶಿಕ್ಷಣ ಸಚಿವರನ್ನಾಗಿ ಮಾಡಿ :ಜಂತರ್ ಮಂತರ್ ನಲ್ಲಿ ಗುಡುಗಿದ ಕೇಜ್ರಿವಾಲ್

by Shwetha
July 18, 2026
0

ದೇಶದ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ...

ಬಂಡಲ್ ಮುಖ್ಯಮಂತ್ರಿ ಮತ್ತು ರೀಲ್ಸ್ ಮಂತ್ರಿಗಳ ಆಡಳಿತದಲ್ಲಿ ಬೆಂಗಳೂರು ಅನಾಥ ವಿರೋಧ ಪಕ್ಷದ ನಾಯಕ ಆರ್ ಅಶೋಕ ಆಕ್ರೋಶ

ಬಂಡಲ್ ಮುಖ್ಯಮಂತ್ರಿ ಮತ್ತು ರೀಲ್ಸ್ ಮಂತ್ರಿಗಳ ಆಡಳಿತದಲ್ಲಿ ಬೆಂಗಳೂರು ಅನಾಥ ವಿರೋಧ ಪಕ್ಷದ ನಾಯಕ ಆರ್ ಅಶೋಕ ಆಕ್ರೋಶ

by Shwetha
July 18, 2026
0

ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿರುವುದು ಬಂಡಲ್ ಮುಖ್ಯಮಂತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram