BJP : ಭಾರತ – ಚೀನಾ ಗಡಿ ಸಂಘರ್ಷಕ್ಕೆ ಕಾರಣ ನೆಹರು – ಸಿ. ಟಿ ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಭಾರತ ಚೀನಾ ಗಡಿ ವಿವಾದದ ಬಗ್ಗೆ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ..
ಡಿಸೆಂಬರ್ 9 ರಂದು ಭಾರತೀಯ ಯೋಧರನ್ನ ಚೀನೀಯರು ಕೆಣಕಿದ ನಂತರ ಉಂಟಾದ ಘರ್ಷಣೆಯಲ್ಲಿ ಉಭಯ ರಾಷ್ಟ್ರಗಳ 30 ಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ..
ಇದೇ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಸಿಟಿ ರವಿ ಭಾರತವನ್ನು ಕಾಂಗ್ರೆಸ್ ದುರ್ಬಲ ದೃಷ್ಟಿಯಿಂದ ನೋಡುವುದು ಬೇಡ.
ನಮ್ಮ ಭಾರತೀಯ ಸೇನೆ ದುರ್ಬಲ ಅಲ್ಲ. ಪ್ರತಿ ಹಂತದಲ್ಲೂ ಚೀನಾ ಸೇನೆಗೆ ಸಮಬಲ ತೋರಿಸಿದೆ. ಇಂತ ಸಂಘರ್ಷದ ಬಗ್ಗೆ ಕಾಂಗ್ರೆಸ್ ಹಗುರವಾಗಿ ಮಾತನಾಡಬಾರದು ಎಂದಿದ್ದಾರೆ.
ಸಂಘರ್ಷಕ್ಕೆ ಮೂಲ ಕಾರಣ ನೆಹರೂ. ಹಿಂದೂ ಚೀನಿ ಭಾಯಿ-ಭಾಯಿ ಅಂತಾ ಪ್ರಮಾದ ಮಾಡಿದ್ದು ನೆಹರೂ. ಅವರ ಪ್ರಮಾದದಿಂದ ಪ್ರತಿ ವರ್ಷ ನಮ್ಮ ದೇಶ ಉತ್ತರ ಕೊಡಬೇಕಾಗ್ತಿದೆ. ಆದ್ರೆ ಭಾರತ ಯಾರಿಗೂ ತಲೆ ಬಾಗಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಲಘುವಾಗಿ ಮಾತನಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ..
ಮುಂದುವರೆದು ಮಾತನಾಡಿದ ಅವರು ಚೀನಾದವರು ಗಡಿ ವಾಸ್ತವ ರೇಖೆ ದಾಟಿ ಬಂದಾಗೆಲ್ಲ ಸಂಘರ್ಷ ಆಗುತ್ತೆ. ಆದ್ರೆ ಕಾಂಗ್ರೆಸ್ ಇದರಲ್ಲಿ ಸಣ್ಣ ರಾಜಕಾರಣ ಮಾಡ್ತಿದೆ.
ಕಾಶ್ಮೀರದಲ್ಲೂ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸಿತು. ಈ ಬೆಳವಣಿಗೆ ಸರಿಯಲ್ಲ. ಚೀನಾವನ್ನು ಟಿಬೆಟ್ ನಲ್ಲೇ ತಡೆದು ನಿಲ್ಲಿಸಿದ್ದರೆ ಅವರು ಇಲ್ಲಿಯವರೆಗೆ ಬರ್ತಿರ್ಲಿಲ್ಲ. ಇದು ಕಾಂಗ್ರೆಸ್ ಕಾಲದಲ್ಲೇ ಮಾಡಬೇಕಾಗಿತ್ತು, ಅವರು ಮಾಡಲಿಲ್ಲ. ಈ ಪ್ರಮಾದದಿಂದ ಸಮಸ್ಯೆ ಈಗ ಆಗ್ತಿದೆ ಅಂತ ಹೇಳಿದ್ದಾರೆ.








