ನವದೆಹಲಿ: ಜೈಲಿನಲ್ಲಿರುವ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಆಪ್ ನ ಸಚಿವೆ ಅತಿಶಿ ಆರೋಪ ಮಾಡಿದ್ದಾರೆ.
ನ್ಯಾಯಾಲಯದ ಎದುರು ಇಡಿ ಅಧಿಕಾರಿಗಳು ಕೇಜ್ರಿವಾಲ್ ಉದ್ಧೇಶಪೂರ್ವಕವಾಗಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ನಂತರ ಅತಿಶಿ ಈ ಆರೋಪ ಮಾಡಿದ್ದಾರೆ. ಕೇಜ್ರಿವಾಲ್ ಅವರು ಟೈಪ್ 2 ಡಯಾಬಿಟಿಸ್ ರೋಗಿಯಾಗಿದ್ದಾರೆ. ಮನವಿ ಮಾಡಿದರೂ ಇನ್ಸುಲಿನ್ ನೀಡುತ್ತಿಲ್ಲ. ವೈದ್ಯರೊಂದಿಗೆ ವಿಡಿಯೋ ಸಮಾಲೋಚನೆಗೆ ಮಾಡಲಾದ ವಿನಂತಿ ಕೂಡ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಗಳಲ್ಲಿ ಅರವಿಂದ್ ಕೇಜ್ರಿವಾಲ್ ರನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಅವರನ್ನು ಜೈಲಿನಲ್ಲಿಟ್ಟು ಕೊಲ್ಲಲು ಯೋಜನೆ ರೂಪಿಸಲಾಗುತ್ತಿದೆ. ಅವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಕಳೆದ 30 ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅವರು ಪ್ರತಿದಿನ 54 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.